ಕನಸು ಕಂಗಳ ಹುಡುಗ

My blogs

Blogs I follow

About me

Gender MALE
Location yellapur, karnataka, India
Introduction ಕನಸು ಕಂಗಳ ಹುಡುಗ... ಅವನೊಬ್ಬ ಅಪ್ಪಟ ಮಲೆನಾಡ ಹುಡುಗ. ಅವನದು ಒಂದು ಅವನದೇ ಆದ ಪ್ರಪಂಚ, ಅವನದೇ ಆದ ಕನಸು, ಅವನದೇ ಆದ ಹವ್ಯಾಸಗಳು.... ಅವನು ತುಂಬಾ ಪ್ರೀತಿಸ್ತಾನೆ, ತುಂಬಾ ಖುಷಿಯಾಗಿರ್ತಾನೆ, ತುಂಬಾ ಮಾತಾಡ್ತಾನೆ, ಒಮ್ಮೊಮ್ಮೆ ಮಾತೇ ಬರೋಲ್ವೇನೋ ಅನ್ನೋ ಥರ ಮೌನಿಯಾಗಿ ಬಿಡ್ತಾನೆ.... ಅವನಿಗೆ ಮರಗಳು ಬೆಟ್ಟ ಗುಡ್ಡಗಳೆಂದರೆ ತುಂಬಾ ಇಷ್ಟ. .... ಅವನಿಗೆ ಹಕ್ಕಿಗಳೆಂದರೆ ತುಂಬಾ ಇಷ್ಟ, ಅಪರೂಪಕ್ಕೊಮ್ಮೆ ಹಕ್ಕಿಗಳನ್ನು ನೋಡ್ತಾನೆ... ಅವನಿಗೆ ನೀರೆಂದರೆ ಪ್ರಾಣದಷ್ಡು ಇಷ್ಟ... ಎಲ್ಲಿ ಹಳ್ಳ ಕಂಡರೂ ಈಜದೆ ಬರೋದೇ ಇಲ್ಲಾ.... ಅವನಿಗೆ ಮಂಜಿನ ಹನಿಗಳು ಇಷ್ಟ, ಮಳೆ ಹನಿಗಳೆಂದರೆ ಇಷ್ಟ, ಮಳೆಹನಿಯಾಗುವ ಮೊದಲೇ ಭೂಮಿಗೆ ಬಂದು ಬೀಳುತ್ತವಲ್ಲಾ ಸಣ್ಣ ಸಣ್ಣ ಮಂಜಿನ ಗಡ್ಡೆಗಳು ( ಆಣೆಕಲ್ಲು) ಅವುಗಳನ್ನು ಹೆಕ್ಕಿ ಬಾಯಲ್ಲಿಟ್ಟುಕೊಳ್ಳೋದು, ಮುಷ್ಟಿಯಲ್ಲಿ ಕರಗುವವರೆಗೆ ಬಿಗಿದು ಹಿಡಿದುಕೊಳ್ಳೋದೆಂದರೆ ತುಂಬಾ ತುಂಬಾ ಇಷ್ಟ.. ಅವನಿಗೆ ಸಂಗಿತವೆಂದರೆ ಇಷ್ಟ.. silent ಹಾಡುಗಳೆಂದರೆ ಇಷ್ಟ, ಕವನಗಳೆಂದರೆ ಇಷ್ಟ, ಸಾಹಿತ್ಯವೆಂದರೆ ಇಷ್ಟ, ಕಾದಂಬರಿಗಳೆಂದರೆ ಇಷ್ಟ, ಚನ್ನಾ ಮನ್ನಿ ಆಟ ಇಷ್ಟ..... ಅವನಿಗೆ ವ್ವೆ ವ್ವೆ ವ್ವೆ ಅನ್ನೋ ಪುಟ್ಟ ಪಾಪುಗಳೆಂದರೆ ಇಷ್ಟ, ಅವರ ಮುದ್ದು ಮುದ್ದು ಭಾಷೆಗಳೆಂದರೆ ಇಷ್ಟ, ಹುಸಿಮುನಿಸುಗಳಿಷ್ಟ, ಕನಸು ಕಾಣೋ ಕಣ್ಣುಗಳೆಂದರೆ ತುಂಬಾ ಇಷ್ಟ... ಅವನು ನೆನಪುಗಳನ್ನು ಪ್ರೀತಿಸ್ತಾನೆ... ಕನಸುಗಳನ್ನು ಪ್ರೀತಿಸ್ತಾನೆ... once again ಅವನು ಕನಸು ಕಂಗಳ ಹುಡುಗ... ಅವನಿಗೆ ಕನಸುಗಳೆಂದರೆ ಇಷ್ಟ........................... 9482486335. . ಮಿನ್ನಂಚೆ : raghu.lalguli@gmail.com