ಆಲೆಮನೆ

My blogs

About me

Introduction ಹಗಲಿರುಳು ದುಡಿಯೋ ಮನಸ್ಸು ಮಾಡಿರುವ ಬಲಿಷ್ಠ ಯುವ ಇರುವೆಗಳ ಗುಂಪಿದು. ಸಿಕ್ಕಿದ್ದೆಲ್ಲವನೂ ಓದೋ ಹವ್ಯಾಸ, ಬರದಿದ್ದರೂ ತೋಚಿದ್ದೆಲ್ಲವನೂ ಬರೆಯೋ ಚಟ, ನಾಟಕದ ಹುಚ್ಚು, ಸಿನಿಮಾದೆಡಗೆ ಒಂದು ಬೆರಗುಗಣ್ಣು, ಕಲಾತ್ಮಕತೆಯ ಗೀಳು, ಛಾಯಾಗ್ರಹಣದ ಚತುರತೆಗಳನ್ನು ತನ್ನೊಡಲಲ್ಲಿ ಅವಿತಿಟ್ಟುಕೊಂಡಿರುವ ಆಲೆಮನೆಯು ಕನ್ನಡ ನಾಡಿನ ಸಾಂಸ್ಕೃತಿಕ ಜಗತ್ತಿನ ಬೆಲ್ಲದ ಸವಿಯನ್ನು ಸಾಗರದಾಚೆಗೂ ಸಿಂಪಡಿಸುವ ಹಂಬಲದಿಂದ ಚಿಗುರೊಡೆದು, ಇಡೀ ಪ್ರಪಂಚದ ಕನ್ನಡಿಗರೆದೆಯ ಕದ ತಟ್ಟಲು ಸನ್ನದ್ಧವಾಗಿದೆ. ನಮ್ಮ ಈ ಯುವಕರ ಗುಂಪು ಅಭಿವ್ಯಕ್ತಿಗಾಗಿ ಆರಿಸಿಕೊಂಡದ್ದು ಆಧುನಿಕ ನೆಟ್ಲೋಕದ ವೇದಿಕೆಯನ್ನು. ಪ್ರಸ್ತುತ ನಮ್ಮ ಬಳಗದ ಮೊದಲ ಕೊಡುಗೆ `ನುಡಿನಮನ' ತಮ್ಮ ಮಡಿಲಲ್ಲಿದೆ. ಈ `ಸಂವೇದನಾಶೀಲ' ಇರುವೆಗಳ ಗುಂಪು ಇನ್ನೂ ಅನೇಕ `ತಲೆಕೆಟ್ಟ' ಸಾಹಸಗಳಿಗೆ ಕೈ ಹಾಕಲಿದೆಯೆಂಬ ಆಶ್ವಾಸನೆ ನಮ್ಮ ಕಡೆಯಿಂದ. http://aalemanebalaga.blogspot.com