Raj

My blogs

About me

Gender Male
Occupation Lecturer
Location Bellary, Karnataka, India
Introduction ಹಾಯ್, ನಾನು ರಾಜ್. ಕನ್ನಡ ಸಾಹಿತ್ಯದಲ್ಲಿ ಎಂ.ಎ ಸ್ನಾತಕೋತ್ತರ ಪದವಿ, ರವಿ ಬೆಳಗೆರೆಯವರ ಕಥೆಗಳನ್ನು ಕುರಿತು ಎಂ.ಫಿಲ್ ಪದವಿ ಹಾಗೂ " ಕನ್ನಡ ಕಾದಂಬರಿಗಳಲ್ಲಿ ಜಾಗತೀಕರಣ ಮತ್ತು ಪ್ರತಿರೋಧ " ಎಂಬ ವಿಷಯ ಕುರಿತು ಪಿಎಚ್.ಡಿ ಪದವಿ ಪಡೆದಿದ್ದೇನೆ. ರವಿ ಬೆಳಗೆರೆ ನನ್ನ ಇಷ್ಟದ ಬರಹಗಾರ. ಉಳಿದಂತೆ ಬಿ.ಎಲ್. ವೇಣು, ನಾಗತಿಹಳ್ಳಿ ಚಂದ್ರಶೇಖರ್, ಕುಂ.ವೀರಭದ್ರಪ್ಪ, ಎಸ್. ಎಲ್. ಭೈರಪ್ಪ, ವಸುಧೇಂದ್ರ ನನ್ನ ಇಷ್ಟದ ಲೇಖಕರು. ಆತ್ಮಕಥನ, ಕಾದಂಬರಿ, ಕಥೆ ನನ್ನ ಇಷ್ಟದ ಪ್ರಕಾರ. ನನ್ನ ಬದುಕಿನ ಮೇಲೆ ರವಿ ಬೆಳಗೆರೆಯವರ ಆತ್ಮ ಕಥನ “ಖಾಸ್ ಬಾತ್” ಬಹಳಷ್ಟು ಪ್ರಭಾವ ಬೀರಿದೆ. ನನ್ನ ಓದು, ಬರಹಕ್ಕೆ ರವಿ ಬೆಳಗೆರೆಯವರೇ ಸ್ಫೂರ್ತಿ. ಅವರಿಂದ ತಿಳಿದುಕೊಂಡಿದ್ದು ಅಪಾರ.
Interests ಓದು, ಬರವಣಿಗೆ, ಚಿತ್ರಕಲೆ, ಫೋಟೋ ಎಡಿಟಿಂಗ್, ವಿಡಿಯೋ ಎಡಿಟಿಂಗ್...
Favorite Movies ಎ, ಮುಂಗಾರು ಮಳೆ, ಸಂಜು ವೆಡ್ಸ್ ಗೀತಾ, ಖುಷಿ (ತೆಲುಗು) ನುವ್ವು ವಸ್ತಾವನಿ (ತೆಲುಗು) ರೋಬೋ (ತೆಲುಗು) ಇನ್ನು ಇನ್ನು ಹಲವಾರಿವೆ….ಇಷ್ಟಪಟ್ಟ ಸಿನೆಮಾಗಳ ಸಂಖ್ಯೆ ಏನಿಲ್ಲವೆಂದರೂ ನೂರರ ಗಡಿ ದಾಟುತ್ತದೆ. ಅದರಲ್ಲಿ ಕೆಲವು ಮಾತ್ರ ಇಲ್ಲಿ ಹೇಳಿರುವೆ.
Favorite Music ಹಂಸಲೇಖ, ಕೆ. ಕಲ್ಯಾಣ್, ಜಯಂತ್ ಕಾಯ್ಕಿಣಿಯವರ ಸುಮಧುರ ಕನ್ನಡ ಚಿತ್ರಗೀತೆಗಳು ಹಾಗೂ ಕನ್ನಡದ ಹಳೇ ಚಿತ್ರ ಗೀತೆಗಳು
Favorite Books ರವಿ ಬೆಳಗೆರೆಯವರ - ಖಾಸ್ ಬಾತ್, ಹೇಳಿಹೋಗು ಕಾರಣ, ಮಾಂಡೋವಿ ಎಸ್.ಎಲ್.ಭೈರಪ್ಪನವರ – ಭಿತ್ತಿ, ಗೃಹಭಂಗ, ನಿರಾಕರಣ, ಅನ್ವೇಷಣ ನಾಗತಿಹಳ್ಳಿ ಚಂದ್ರಶೇಖರ ಅವರ – ವಲಸೆಹಕ್ಕಿಯ ಹಾಡು, ನನ್ನ ಪ್ರೀತಿಯ ಹುಡುಗಿಗೆ ಕುಂ.ವೀ. ಅವರ - ಕೊಟ್ರ ಹೈಸ್ಕೂಲಿಗೆ ಸೇರಿದ್ದು ವಸುಧೇಂದ್ರ ಅವರ – ನಮ್ಮಮ್ಮ ಅಂದ್ರೆ ನಂಗಿಷ್ಟ ಬಿ.ಎಲ್. ವೇಣು ಅವರ – ಮಿಂಚಿನ ಬಳ್ಳಿ, ಪಾರಿವಾಳ, ಮಹಾನದಿ, ವಜ್ರಕಾಯ, ಪ್ರೀತಿಯ ಹೂಗಳು ಓದಿದ್ದು, ಇಷ್ಟಪಟ್ಟಿದ್ದು ಹಲವಾರು ಕೃತಿಗಳಿವೆ. ಅದರಲ್ಲಿ ಕಲವೊಂದು ಮಾತ್ರ ಇಲ್ಲಿ ಉಲ್ಲೇಖಿಸಿರುವೆ.