ಅವಿ

My blogs

Blogs I follow

About me

Location Bangalore, karnataka, India
Introduction ಮಂಡ್ಯ ತಾಲೂಕಿನ ಹನಕೆರೆ ನನ್ನ ಹುಟ್ಟೂರು. ಪಿಯುಸಿ ಫೇಲ್ ಮಾಡಿಕೊಂಡಿದ್ದೆ. ಹಾಗೂ - ಹೀಗೂ ಸೆಕೆಂಡ್ ಇಯರ್ ಬಿಎ ಮುಗಿದಾಗ ಇಂಟನರ್್ಶಿಪ್ಗೆ ಅಂತ ಬೆಂಗಳೂರು ಕನ್ನಡಪ್ರಭ ಕಚೇರಿಗೆ ಕಾಲಿಟ್ಟ ಮೇಲೆ ನನ್ನ ಲೈಫಿನ ಗ್ರಾಫ್ ಬದಲಾಗತೊಡಗಿದ್ದು ನನಗೆ ಗೊತ್ತೇ ಆಗಲಿಲ್ಲ. ಇಂಟನರ್್ಶಿಪ್ ಮುಗಿಯುವ ಹೊತ್ತಿಗೆ ಮೈಸೂರು ಕನ್ನಡಪ್ರಭ ಕಚೇರಿಯಲ್ಲಿ ಮೊಟ್ಟ ಮೊದಲ ಸ್ಟೂಡೆಂಟ್ ರಿಪೋರ್ಟರ್ ಆಗುವ ಅವಕಾಶ ಒದಗಿಸಿದ್ರು. ಅಲ್ಲಿ ಕೆಲಸ ಮಾಡುತ್ತಲೇ ಡಿಗ್ರಿ ಮುಗಿಸಿದೆ. ಕನ್ನಡಪ್ರಭದ ಕೆಲಸ ಕಾಯಂ ಆಯ್ತು. ಕನ್ನಡಪ್ರಭದ ಧಾರವಾಡ ವರದಿಗಾರನೂ ಆಗಿದ್ದಾಗ ಹುಟ್ಟಿದ್ದೇ ಈ ಬ್ಲಾಗ್. ಗೆಳೆಯ ಶೆಟ್ಟಳ್ಳಿ ಮಹೇಶನ ಒತ್ತಾಸೆಗೆ, ಕೆಲವರ ಬ್ಲಾಗ್ ಬುತ್ತಿ ನೋಡಿ ಹುಟ್ಟಿದ ಕಿಚ್ಚಿಗೆ ಈ ಬ್ಲಾಗ್ ಜನ್ಮತಾಳಿತು. ನನ್ನ ಸುತ್ತಾಟ, ಅನುಭವ ಕಥೆಗಳನ್ನು ಸಾಧ್ಯವಾದಾಗೆಲ್ಲ ಬರೆದೆ. ಧಾರವಾಡ ಬಿಟ್ಟು ಕನ್ನಡಪ್ರಭದ ಹಿರಿಯ ವರದಿಗಾರನಾಗಿ ಬೆಂಗಳೂರಿಗೆ ಬಂದೆನಾದ್ರು ಕೆಲವೇ ತಿಂಗಳಲ್ಲಿ ಸುವರ್ಣನ್ಯೂಸ್ ಮಡಿಲು ಸೇರಿದ್ದೆ. ಬರವಣಿಗೆ ಮರೆತು ಮಾತಿಗೆ ಜೋತುಬಿದ್ದೆ. ಆಮೇಲೆ ಬರೆದದ್ದು ತುಂಬಾ ಕಡಿಮೆ. 20 ತಿಂಗಳ ಮೈಕಿನ ಸಹವಾಸದ ನಂತ್ರ ಮತ್ತೆ ಅತ್ಯಂತ ನೆಚ್ಚಿನ ಮುದ್ರಣಮಾಧ್ಯಮಕ್ಕೆ ಉದಯವಾಣಿ ಮೂಲಕ ರೀ ಎಂಟ್ರಿ ಸಿಕ್ತು.. ಉದಯವಾಣಿಯ ಡೆಲ್ಲಿಯ ವರದಿಗಾರನಾದೆ... ಆದ್ರೆ ನಾನು ತುಂಬಾ ಇಷ್ಟಪಟ್ಟಿದ್ದ, ಗುರಿಯಾಗಿ ಇಟ್ಟುಕೊಂಡಿದ್ದ ಡೆಲ್ಲಿಯ ಕೆಲಸವನ್ನು ಕೇವಲ 120 ದಿನಗಳಲ್ಲಿ ಮುಗಿಸಿ ಬೆಂಗಳೂರಿಗೆ ವಾಪಸ್ಸಾದೆ.. ಹೊಸದೊಂದು ಪ್ರಯೋಗಕ್ಕೆ, ಸವಾಲಿಗೆ ಕೈ ಜೋಡಿಸುವ ಸಲುವಾಗಿ ಬೆಂಗಳೂರಿಗೆ ಬಂದು ಪಬ್ಲಿಕ್ ಟಿವಿ ಸೇರಿ ಕೆಲಸ ಮಾಡುತ್ತಿದ್ದೇನೆ.. ನ್ಯೂಸ್ ಅಂದ್ರೆ ಪಬ್ಲಿಕ್ ಟಿವಿ avihnk@gmail.com