ಅರವಿಂದ್

My blogs

Blogs I follow

About me

Gender Male
Industry Accounting
Occupation ಪ್ರಬಂಧಕ - ಹಣಕಾಸು ಮತ್ತು ವ್ಯವಹಾರ
Location ಬೆಂಗಳೂರು, ಕರ್ನಾಟಕ, India
Introduction ಅರವಿಂದ್, ಹಾಗಂತಾ ಹೆಸರು ಮಾತ್ರ ಹೇಳಿದರೆ ಏನಿರಬಹುದು ಅದರಲ್ಲಿಯೆಂಬುದಕ್ಕೆ ನನ್ನಲ್ಲೇ ಇರುವ ಜಿಗುಪ್ಸೆ, ಸಾಧಿಸಿದ್ದು ಕೆಲವಾದರೂ ಸಾಧನೆಗೆ ನಿಲುಕದ್ದು, ಮತ್ತು ದಕ್ಕದ್ದು ನೂರಾರು, ಆದರೆ ನಿಲುಕದ ವಿಷಯಗಳನ್ನ ಕ್ಯೆಗೆ ಸಿಗದವರೆಗೂ ಬಿಡುವ ಜಾಯಮಾನವಲ್ಲ. ಹುಟ್ಟಿದ್ದು ಬೆಳೆದದ್ದು ಮಹಾನಗರಿ ಬೆಂಗಳೂರಾದರೂ ತಿರುಗಿದ್ದು, ನೋಡಿದ್ದು ಬಹು ಭಾಗ ಭಾರತವನ್ನು ರಾಜಸ್ಥಾನ, ಗುಜರಾತ್, ಮಹಾರಾಷ್ಟ್ರ, ಒರಿಸ್ಸಾ, ಬಿಹಾರ, ದೆಹಲಿ, ಆಂಧ್ರಪ್ರದೇಶ, ತಮಿಳುನಾಡು, ಕೇರಳ ಹೀಗೆ, ಕರ್ನಾಟಕದಲ್ಲಿನ ತಿರುಗಾಟವಂತೂ ಲೋಕಲ್ ಬಸ್ ತರಹ ಸುತ್ತಿದ್ದೇನೆ. ಆದರೆ ಎಷ್ಟೊ ಸ್ಥಳಗಳ ಪರಿಚಯ ಇದ್ದರೂ ತಿಳಿಯಬೇಕಾಗಿದ್ದು ಇನ್ನೂ ಇದೆ ಅನ್ನೋದಂತೂ ಸತ್ಯ. ಹಾಗಂತ ಮಹತ್ತರ ಸಾಧನೆ ಮಾಡಿ ಮತ್ತೇನೋ ಯಾರೂ ಮಾಡಲಾಗದ್ದನ್ನು ಮಾಡಿದ್ದೇನೆ ಅನ್ಕೊಂಡ್ರೆ ನಿಮ್ಮ ಊಹೆ ಸುಳ್ಳು. ಎಲ್ಲರೂ ಮಾಡುವ ಕೆಲಸವನ್ನೇ, ಆದರೆ ಯೋಚನೆ ಯೋಜನೆಗಳು ವಿಭಿನ್ನ, ಅದು ಮನೆಯಲ್ಲಿನ ಸಾಮಾನುಗಳ ಒಪ್ಪ-ಓರಣವಿರದಿಂದ ಹಿಡಿದು, ಒಂದು ವಿಚಾರದ ಬಗ್ಗೆ ನೋಡುವ ದೃಷ್ಠಿಕೋನ ಎಲ್ಲವೂ. ಇನ್ನೂ ಸಮಾಜದ ಮುಖಿಯಲ್ಲಿ ಬಂದರೆ ಎಷ್ಟೊ ಜನರಿಗೆ ನಾನು ನುಂಗಲಾರದ ಬಿಸಿ ತುಪ್ಪ, ಮತ್ತೆ ಕೆಲವರಿಗೆ ಸಿಹಿಜೇನು. ಎಲ್ಲರಿಗೂ ಒಳ್ಳೆಯವನಲ್ಲದಿದ್ದರೂ ನನ್ನ ನಂಬಿಕೆಗೆ ಅರ್ಹನಾದವರಿಗೆ ಮಾತ್ರ ಸ್ಪಟಿಕ ಮಣಿ. ಇನ್ನೂ ನನ್ನ ವಿರೋಧಿಗಳಿಗೆ ನಾನೊಂದು ಶಮಂತಕ ಮಣಿ. ಫೇಸ್ ಬುಕ್ಕಿನಲ್ಲಿ ನಾನು : http://facebook.com/aravindh-rao Copyright © Reserved
Interests ಆಸಕ್ತಿಕರ ವಿಷಯಗಳೆಂದರೆ ನನ್ನ ಮಟ್ಟಿಗೆ ಎಲ್ಲವೂ ಅದು ಸಣ್ಣ ಅಣುವಿನಿಂದ ದೊಡ್ಡ ಸೌರಮಂಡಲದವರೆಗೆ ಹೆಚ್ಚಿನ ಆಸಕ್ತಿಯ ವಿಚಾರಗಳೆಂದರೆ ಸಾಹಿತ್ಯ ಕಲೆ ಪತ್ರಿಕಾರಂಗ ಕಾನೂನು ಮಾಹಿತಿ ತಂತ್ರಜ್ಣಾನ ತೆರಿಗೆ ಮತ್ತು ಇನ್ನಿತರೇ....
Favorite Movies ಮಿಂಚಿನ ಓಟ, ಬಂಗಾರದ ಮನುಷ್ಯ, ಓಂ, ರಾಮ ಶ್ಯಾಮ ಭಾಮ, ಗುಣ(ಕಮಲ್ ಹಾಸನ್), ರೆಬೆಲ್ ಆಫ್ ದಿ ಬ್ಲಾಕ್ ಕ್ಯಾಟ್, ಇನ್ನೂ ಮುಂತಾದುವುಗಳು
Favorite Music ವಾದ್ಯ ಸಂಗೀತಗಳನ್ನು ಬಹಳವಾಗಿ ಇಷ್ಟವಾಗುತ್ತದೆ. ಇನ್ನುಳಿದಂತೆ ಭಾವಗೀತೆ, ಜಾನಪದ, ಗೀಗಿ ಪದಗಳು ಬಹಳ ಕಾಡುತ್ತವೆ, ಈಗಿಗ ಮಂಗಳೂರು, ಉಡುಪಿ ಪ್ರಾಂತ್ಯಗಳಲ್ಲಿ ಕಂಡು ಬರುವ ಕೋಲಾದ ಹಾಡುಗಳನ್ನು, ಯಕ್ಷ್ಗಗಾನದ ವಿವಿಧ ರೀತಿಗಳನ್ನು ತಿಳಿಯುವ ಉತ್ಸಾಹ.
Favorite Books ಆಂಗ್ಲ ಭಾಷೆಯ ಹೂ ಇಸ್ ದಿ ಬೆಸ್ಟ್ ಫ್ರೆಂಡ್ಸ್ ಆಫ್ ಯುವರ್ ಸೆಲ್ಫ್, ಮಲೆಗಳಲ್ಲಿ ಮದುಮಗಳು, ರಕ್ತಾಕ್ಷೆ, ರಾಮಾಯಣ ದರ್ಶನಂ, ನಾಕುತಂತಿ, ಮೂಕಜ್ಜಿಯ ಕನಸುಗಳು, ಹೀಗೆ ಕನ್ನಡದಲ್ಲಂತೂ ಪಟ್ಟಿ ಮಾಡ ಹೊರಟರೆ ಸಾವಿರಾರು.... ತುಂಬಾ ಓದಿಕೊಳ್ಳಬೇಕೆಂಬ ಹಂಬಲ, ಜೀವನದ ಕೊನೆಯ ಘಟ್ಟ ತಲುಪುವದರೊಳಗೆ ೧೦೦೦೦ ಪುಸ್ತಕಗಳನ್ನಾದರೂ ಓದಿ, ನನ್ನದೇ ಪುಟ್ಟ ಗ್ರಂಥಾಲಯ ಮಾಡಬೇಕೆಂಬ ಮಹದಾಸೆ.