ಶ್ರೀವತ್ಸ ಕಂಚೀಮನೆ.
My blogs
Gender | Male |
---|---|
Location | Yellapur, Bangalore, Karnataka, India |
Introduction | "ಬದುಕೆಂಬ ಪಾಠಶಾಲೆಯ ಅತಿದಡ್ಡ ವಿದ್ಯಾರ್ಥಿ ನಾನು..." ಪರೀಕ್ಷೆ ನಡೆಸಿ ನಂತರ ಪಾಠ ಹೇಳುವ, ಅನುಭವದ ನೆಲೆಯ ಅದರ ಕಲಿಕಾ ಪದ್ಧತಿಯೆಡೆಗೆ ಒಮ್ಮೆಲೇ ಬೆರಗು ಮತ್ತು ಆತಂಕದಿಂದ ನೋಡುತ್ತಿದ್ದೇನೆ. ಬದುಕು ಹೇಳುವ ಪಾಠಗಳ ಅರ್ಥೈಸಿಕೊಳ್ಳಲಾಗದೇ, ಬದುಕಿಗೆ ಬೆನ್ನು ತಿರುಗಿಸಲು ಇಷ್ಟವಿಲ್ಲದೇ ತೊಳಲಾಡುತ್ತಿದ್ದೇನೆ. ಈ ಎಲ್ಲ ತೊಳಲಾಟಗಳು, ಬುದ್ಧಿ ಹುಟ್ಟು ಹಾಕುವ ದ್ವಂದ್ವಗಳು, ಅವೆಲ್ಲವುಗಳ ನಡುವೆ ಮನದ ಸನ್ನಿಧಿಯಲ್ಲಿ ಮೂಡುವ ಮಧುರ ಭಾವಗಳು - ಇವೆಲ್ಲವುಗಳಿಗೆ ಅಕ್ಷರ ರೂಪ ನೀಡುವ ಸಣ್ಣ ಪ್ರಯತ್ನವೇ ಈ ಬ್ಲಾಗ್... ಮಲೆನಾಡಿನ ದಟ್ಟ ಕಾನನದ ಪುಟ್ಟ ಹಳ್ಳಿಯಲ್ಲಿ ಹುಟ್ಟಿ ಬೆಳೆದ ನನ್ನನ್ನ ತೀವ್ರವಾಗಿ ಸೆಳೆದು ಕಾಡಿದ ವಿಷಯಗಳೆಂದರೆ - ನಡು ಮಧ್ಯಾಹ್ನದ ಧೋಮಳೆ, ಸರಿ ರಾತ್ರಿಯ ಬೆಳದಿಂಗಳು, 'ಹೆಣ್ಣೆದೆ'ಯ ಚೆಲುವು ಮತ್ತು 'ಹೆಣ್ಮನ'ದ ಒಲವು, ಬೆರಗು ಮೂಡಿಸುವ ವಿಪರೀತ ವೈರುಧ್ಯಗಳ ಬದುಕು ಮತ್ತು ಹುಟ್ಟಿನೊಂದಿಗೇ ಬೆನ್ನುತಬ್ಬಿ ಬಂದು ತಲ್ಲಣಗೊಳಿಸುವ ಸಾವು... ಹಾಗಾಗಿ ಈ ಕುರಿತೇ ಜಾಸ್ತಿ ಬರೆದಿದ್ದರೆ ಅದು ನನ್ನ ತಪ್ಪಲ್ಲ... ಖುಷಿಯ ರಿಂಗಣದ, ಕಂಗೆಡಿಸುವ ತಲ್ಲಣದ, ಎನ್ನೆದೆಯ ಭಾವಗಳ ಪದಗಳಲಿ ಬಿಚ್ಚಿಡುವ ಪುಟ್ಟ ಪ್ರಯತ್ನ ನನ್ನದು... ಓದುವ ಒದ್ದಾಟ ನಿಮ್ಮದಾಗಲಿ... ::: :: : ಭಾವ ಸಂವಹನಕ್ಕೆ: kanchimane@gmail.com :::೮೦೮೮೪೮೮೦೯೫::: https://www.facebook.com/shrivatsa.kanchimane |