| Gender | Male |
|---|---|
| Industry | Technology |
| Occupation | ಸಾಫ್ಟ್ವೇರ್ ಅಭಿವೃದ್ಧಿ ಮತ್ತು ಆಂತರಿಕ ಲೆಖ್ಖ ಪರಿಶೋಧಕ, ಅಲ್ಫಾ ಡಾಟಾ ಸಂಸ್ಥೆ |
| Location | ಮೈಸೂರು, India |
| Introduction | ಹಾಸನದಲ್ಲಿ ನಾಲ್ಕನೇ ತರಗತಿ ವರೆಗೆ, ಮುಂದೆ ಮೈಸೂರಿನಲ್ಲಿ ಬಿ.ಕಾಂ ವರೆಗೆ ವಿಧ್ಯಾಭ್ಯಾಸ; ಬೆಂಗಳೂರಿನ ಎಚ್ ಎಮ್ ಟಿ ಸಂಸ್ಥೆಯಲ್ಲಿ ಎರಡು ದಶಕಗಳ ಉದ್ಯೋಗ; ನಾನೇ ಏನಾದರೂ ಮಾಡಬಹುದೇ ಎಂಬ ಪ್ರಯತ್ನವಾಗಿ ಕೆಲವು ಗೆಳೆಯರ ಒತ್ತಾಸೆಯ ಮೇರೆಗೆ ನಾಲ್ಕು ವರ್ಷಗಳ ಕಾಲ "ಸುಜಯ್ ನೆಟ್ ಎಂಬ ಸಣ್ಣ ಸಾಫ್ಟ್ವೇರ್ ಮತ್ತು ವೆಬ್ ಉದ್ಯಮ"ದ ಪ್ರಯತ್ನ; ನಂತರದಲ್ಲಿ ನನ್ನ ಪರಿಮಿತಿಗಳ ಸ್ವ-ಅಧ್ಯಯನದ ಮೇರೆಗೆ 2004ನೇ ಇಸವಿಯ ಫೆಬ್ರವರಿ ಮಾಸದಿಂದ 2013ನೇ ಇಸವಿ ಮಾರ್ಚ್ ತಿಂಗಳವರೆಗೆ ಯುನೈಟೆಡ್ ಅರಬ್ ಎಮಿರೇಟ್ಸ್ ದೇಶದ ದುಬೈ ಹಾಗೂ ಅಬು ಧಾಬಿ ನಗರಗಳಲ್ಲಿ ಕಾರ್ಯ ಕ್ಷೇತ್ರ ಹೊಂದಿರುವ ಅಲ್ಫಾ ಡಾಟಾ ಎಲ್.ಎಲ್.ಸಿ ಸಂಸ್ಥೆಯಲ್ಲಿ ಆಂತರಿಕ ಸಾಫ್ಟ್ವೇರ್ ಅಭಿವೃದ್ಧಿ-ನಿರ್ವಹಣೆ ಮತ್ತು ಅಂತರಿಕ ಆರ್ಥಿಕ ಪರಿಶೋಧಕನಾಗಿ ಕಾರ್ಯನಿರ್ವಹಣೆ ಮಾಡಿದ್ದೇನೆ. ನನ್ನ ಬದುಕಿನಲ್ಲಿ ಪ್ರಮುಖ ಬೆಂಬಲಿಗರಾದವರು ನನ್ನ ಪತ್ನಿ ಲಲಿತ ಮುದ್ದಿನ ಮಗಳು ಮಾಧುರಿ ಬಿ.ಬಿ.ಎಂ. ಓದುತ್ತಿದ್ದಾಳೆ. ಎಚ್.ಎಮ್.ಟಿ ಕನ್ನಡ ಸಂಪದದಲ್ಲಿ ಎರಡು ದಶಕಗಳ ಕಾಲ ಕಾರ್ಯಕರ್ತನಾಗಿ ದುಡಿದ ಪ್ರೀತಿಯಲ್ಲಿ ಕನ್ನಡದ ಕಂಪು ನನ್ನಲ್ಲಿ ಆತ್ಮೀಯವಾಗಿ ಪಸರಿಸಿದೆ. ಹಾಗೆಂದ ಮಾತ್ರಕ್ಕೆ ನಾನು ಕವಿಯೋ - ಕಥೆಗಾರನೋ ಅಥವಾ ಬರಹಗಾರನೋ ಅಗಿಬಿಟ್ಟಿದ್ದೇನೆಂಬ ಭ್ರಮೆಯೇನೂ ನನ್ನಲ್ಲಿಲ್ಲ. ಆದರೂ ನಾನು ನನ್ನ ಮನವನ್ನು ಹರಿಯಗೊಟ್ಟಿರುವ ಭಾಷೆ ಕನ್ನಡದಲ್ಲಿ, ನನ್ನಲ್ಲಿ ತುಂಬಿರುವ ಚಿಂತನೆಗಳನ್ನು ಹೊರಚೆಲ್ಲುವುದರಿಂದ ದೊರಕಿರುವ ಅಪಾರ ನೆಮ್ಮದಿಯ ದೆಸೆಯಿಂದ ಈ ಬ್ಲಾಗ್ ಅನ್ನು ಉಪಯೋಗ ಪಡೆಯ ಹೊರಟಿದ್ದೇನೆ. |
