tag:blogger.com,1999:blog-5495085842856428066.post-57801652685404206012008-06-20T17:22:00.000-07:002008-07-07T17:10:02.292-07:00ಬಂದೇ ಬರತಾವ ಕಾಲಸುಳಿವಿಲ್ಲದಾರಂಭ
ಅರಿವಿಲ್ಲದಂತ್ಯಕ್ಕೆ
ಆತಂಕ ಅಲ್ಲಿ ಸೋನೆ ಸೋಲು
ಕಂಬನಿಯಲರಳಿದ್ದು
ನೆರಳು ನುಡಿಯುವುದಿಲ್ಲ
ಯಾವುದೋ ಗಝಲಿನಾ ಸಾಲು

ಹುಟ್ಟುವ ಪ್ರಶ್ನೆಗೂ
ಉತ್ತರವೆ ಮರೆತು
ತುಳುಕುವ ತುಣುಕು ಹಾಡಿನಾ ಸಾಲು
ಹಿಂಜರಿದ ಮಾತು
ಇನ್ನೆಲ್ಲೊ ಮನಸು
ಮೌನದರಸಗೆ ಸೋಲು ಮೌನದಲ್ಲೂ

ಬಿತ್ತಿದಂದೇ ಚಿಗುರಿ
ಚಿಗುರಿದ್ದೂ ಅಳಿದು
ಸುಳಿವೇ ಅಳಿದೋಯ್ತು ಹಾದಿಯಲ್ಲೂ
ಕ್ಷಣಕಾಲ ಬಳಿಯಿದ್ದು
ಬಳ್ಳಿಬುಡ ಸವರಿದ್ದು
ನೋವೊಂದು ನಿಂತು ನೇವರಿಕೆಯಲ್ಲೂ

ಇಂದೊಂದು ಗುಟ್ಟು
ನಾಳೆ ಬಿಚ್ಚುವ ತೆವಲು
ಸರಿಗಂಟು ಅಲ್ಲೂ ಸರಿಯದಿಹುದು
ಬದುಕಲ್ಲಿರದ ತಿರುವ
ತಿರುವಲಿಕ್ಕಾಗಿಯೇ
ಸುಖದೊಂದು ಮೂಟೆ ತೀರದಲ್ಲೂ

ಸವಿಗನಸುಗಳದೂ
ಹಗಲುಗನಸಿನ ಹಗಲು
ರಾತ್ರಿರಾಣಿಯದು ರಾತ್ರಿ ಕಪ್ಪುನೆರಳು
ಹಿಪ್ಪುನೇರಳೆಸೊಪ್ಪು
ರೇಷ್ಮೆಯಾಗುವ ಹದದಿ
ಅಡಗಿದರೆ ಬದುಕು ಅದರ ತಪ್ಪು

ಇದ್ದದ್ದು ಇರಲಿ
ಬಂದದ್ದು ಬರಲಿ
ಹೋದದ್ದು ಸರಿ ಹೋಗಲಿಬಿಡು
ಹೆಣಗಾಡಿದಷ್ಟು
ಕೊಸರಾಡಿದ್ದೆಷ್ಟು
ಕೆಸರಾಗುವುದು ಹೊತ್ತು, ಹೊತ್ತು ನೋಡು

ಕಾಗದದ ಅಂಚಲ್ಲಿ
ಕಾಣೆಯಾಗುವ ಹೆಸರು
ಕಾಣದ ಕೈಯೊಂದು ಇರಲುಬಹುದು
ಕಣ್ಣಂಚ ಕದದಲ್ಲೂ
ಕರಗುವುದು ತೈಲ
ಕಣ್ಣುರಿಯೆ ಕವಿತೆ ದೀಪ ಜೋಡು

ಬರಿಯ ಬಿತ್ತನೆಯಲ್ಲೂ
ಬರಬಿತ್ತೆ ಬದುಕು
ಬಂದದ್ದು ಬರಲಿ ಬದುಕಿನೋಡು
ಬದುಕೆಳೆವ ಕುಸುರಿ
ಬನದೊಳಗೆ ನುಸುಳಿ
ಬಂದೇ ಬರತಾವ ಕಾಲ ಕಾಯ್ದು ನೋಡು.ಶಾಂತಲಾ ಭಂಡಿhttp://www.blogger.com/profile/00119083151368093886noreply@blogger.com