tag:blogger.com,1999:blog-54950858428564280662008-07-27T00:18:35.753-07:00ನೆನಪು ಕನಸುಗಳ ನಡುವೆಶಾಂತಲಾ ಭಂಡಿhttp://www.blogger.com/profile/00119083151368093886noreply@blogger.comBlogger74125tag:blogger.com,1999:blog-5495085842856428066.post-16982839573894988982008-07-17T08:31:00.000-07:002008-07-17T13:45:36.925-07:00ಬತ್ತಿದ ಬೆಳದಿಂಗಳು ಹರವಿಕೊಳದುಪ್ರೀತಿಯ ನೀವುಗಳೆ....

ಬರೆಯಲು ಬೇಜಾರಾಗಿದೆ. ಬರೆಯಬೇಕು ಅನಿಸುತ್ತಿಲ್ಲ. ಬ್ಲಾಗ್ ಬರವಣಿಗೆಯಿಂದ ದೂರವಿರಬೇಕು ಎನಿಸುತ್ತಿದೆ.
ಸೋರಿಚೆಲ್ಲುತ್ತಿರುವ ಈ ನೆನಪು ಕನಸುಗಳನ್ನೆಲ್ಲ ನಿಮಗೆಲ್ಲ ಹೇಳದೆಲೆ ಒರೆಸಿಬಿಡಲು ಮನಸಾಗಲಿಲ್ಲ. ಹಿಡಿದಿಡುವ ಮನಸೂ ಇಲ್ಲ.

ತನ್ನಿಷ್ಟದ ಎಲ್ಲ ಬ್ಲಾಗುಗಳಿಗೆ ಭೇಟಿ ನೀಡುವುದನ್ನಿವಳು ಬಿಡಲಾರಳು, ಎಲ್ಲಿಯಾದರೂ ಇವಳದೊಂದು ಹೆಜ್ಜೆಗುರುತು ಕಂಡೀತು ನಿಮಗೆ.

"ನಾಳೆ ಮಂಗಳವಾರ, ಮಾರನೆಯ ದಿನ ನವಮಿ, ಆಮೇಲೆ ನಿಲ್ಲುವೆನೆ ನಾನು ಇಲ್ಲಿ?"

ಶುಕ್ರವಾರ ಬರಲಿರುವ ಹುಣ್ಣಿಮೆಯಿರುಳಿನ ಬೆಳದಿಂಗಳ ಜಾತ್ರೆಯಲಿ ನೆನಪು ಕನಸುಗಳನೆಲ್ಲ ತೂರಿಬಿಡುತ್ತಿದ್ದೇನೆ. ಇನ್ನಿಲ್ಲಿ ಯಾವ ನೆನಪು ಕನಸು, ಬೆಳದಿಂಗಳು, ಹುಣ್ಣಿಮೆಗಳ ಹಿಡಿದು ತಂದು ಹರಿಸುವ ಯೋಚನೆಯಿಲ್ಲ.

ಪ್ರಿಯ ಓದುಗ...

"ನಿಮ್ಮ ನೆನಪೇ ನನ್ನ ಹಿಂಡುವುದು ಹಗಲಿನಲಿ
ಇರುಳಿನಲಿ ಕಾಣುವುದು ನಿಮ್ಮ ಕನಸು"

ನನ್ನ ಬರಹಗಳನ್ನ ಬೆನ್ನುತಟ್ಟಿ, ಕಮೆಂಟಿಸಿ, ಓದಿ , ಕೈ ಹಿಡಿದು ಪ್ರೋತ್ಸಾಹಿಸಿದ ನಿಮ್ಮೆಲ್ಲರಿಗೂ ಒಂದಿಷ್ಟು ಪ್ರೀತಿ.

ಹೋಗಿ ಬರುತ್ತೇನೆನ್ನುವಾಗ ಮತ್ತೆದೇ ಹಾಡು "ನಿಮ್ಮ ಪ್ರೀತಿಗೆ ಅದರ ರೀತಿಗೆ ಕಣ್ಣ ಹನಿಗಳೆ ಕಾಣಿಕೆ"

ನಿಮ್ಮೆಲ್ಲರ
-ಶಾಂತಲಾ ಭಂಡಿ.ಶಾಂತಲಾ ಭಂಡಿhttp://www.blogger.com/profile/00119083151368093886noreply@blogger.comtag:blogger.com,1999:blog-5495085842856428066.post-37889002694095668102008-07-13T12:12:00.000-07:002008-07-14T18:39:14.532-07:00ನೀಲ ಬೆಳದಿಂಗಳುಬೊಗಸೆಯಲ್ಲಿ ಬೆಳದಿಂಗಳು
(ಪ್ರೀತಿಯ ಲೇಖಕರಿಗೆ ಹಾಗೂ ಸ್ಪೂರ್ತಿ ತಂದ ಅವರ ಬರಹಕ್ಕಿದೋ ಅರ್ಪಣೆ ಈ ಸಾಲುಗಳು)

ಬೆಳದಿಂಗಳಂಗಳ
ಪ್ರೀತಿ ಚಂದಮಾಮ
ಶ್ರಾವಣಕೆ ಕಾಯುವ ಆಷಾಢ
ಪ್ರೀತಿಮೋಡ ಸುರಿದು
ಮಳೆಯಾಗುವುದು ಎಂದು

ಮಲೆನಾಡ ಮುಂಗಾರು
ಹಾಡಿದರೆ ಅವನು
ಎಲ್ಲ ಹಾಡುಗಾರನ ಹಿಂದೆ
ಅವಳ ಕಣ್ಣೊಳಗೆ ಮಾತ್ರ
ಹಾಡ ಬರೆದವನೆ ಬರೆದದ್ದು
ಮಳೆಯ ಚಿತ್ರ
ಮೊದಮೊದಲಿಗೆ
ಅವನ ಬೊಗಸೆಯಲ್ಲಿ ಅವಳೇ ಮಳೆ

ಅವಳು ಬೆಳದಿಂಗಳು
ಅವನು ಬೆಳ್ಳಿತೆರೆಯಲ್ಲವಳ
ಬೆರಳಿಡಿದು ನಡೆಸುವನು
ಸಂಕವೊಂದರ ಮೇಲೆ ಜಾತ್ರೆಯೂ ನಡೆದು
ಮೋಡಗಳ ಸುತ್ತೆಲ್ಲ ಅವನದೇ ಪರಿಮಳ
ಹಾಲ್ಟಿಂಗ್ ಬಸ್ಸಲ್ಲೂ ದೀಪಗಳುರಿದು
ಅವಳ ಮನವೀಗ ದೀಪಾವಳಿ

ಮೂಡಣದಿಂದ ಪಡುವಣಕೆ
ಓಲೆಯೊಂದು ರವಾನೆಯಾಗಿ
ಬಿಂಬಗಳ ತೋಟದಲಿ ಪುಟ್ಟ ಕನ್ನಡಿಯೊಂದು
ಪುಟ್ಟ ಕನ್ನಡಿಯಲ್ಲೂ ಯಕ್ಷರು
ಗೆಳೆಯನಿಗಾಗಿ ಹೆಣೆದ ಕನಕಾಂಬರ ದಂಡೆ
ಉಳಿದರ್ಧ ಹೂವು ಎಲ್ಲಿದೆ?
ಆ ದೊಡ್ಡದೇವನಿಗೆ ಇವಳೇ ಪುಟ್ಟ ಹೂ

ರಾತ್ರಿಯ ಹೆದ್ದಾರಿಯಲ್ಲಿ ಫುಲ್ ಸ್ಟಾಪು.
ಎರಡೇ ನಿಮಿಷಗಳ ಮೌನದಲ್ಲು
ಬೆಳದಿಂಗಳು ಚುರುಗುಟ್ಟಿ
ಯಾರದೋ ಕನಸಿನಲ್ಲಿ ಯಾರೋ ಊಳಿಗ
ಕತ್ತಲ ಸಮುದ್ರದಲ್ಲೂ ಮೋಂಬತ್ತಿಗಳುರಿದು
ರಾತ್ರಿಯೇ ಹೇಳುವುದು ನಾನೇನು ಕನಸು ಕಂಡೆನೆಂದು

ಒಡಲ ನೂಲಿನ ಜಾಲ
ಹಳೇ ಉಡುಪಿನ ನೃತ್ಯ
ಮೌನ ಕಲಿಸಿದ ಕಾಗುಣಿತ
ಎದೆಯೊಳಗಿನ ಸಸಿಯಾಗಿ
ಅದೇ ದೈನಿಕ ಆದರದೇ ಸುಖ

ಅಗೋ ಪ್ರಾರ್ಥನೆಯ ಕರೆ
ಸುಮ್ಮನಿರು ಗೆಳೆಯ ಸಂಗೀತ ಕೇಳೋಣ
ಮಾತಿರದ ನಲುಮೆಯಲಿ
ಒಂದು ಹಾಡು ಕೊಟ್ಟರೂ ಸಾಕು
ತೀರದಲಿ ತೋಯುವನು ನನ್ನ ಹುಡುಗ
ನೀಲಿಯೊಳಗೂ ಇಹುದು ಹಿತದ ಹಾಡು
ನೀರವದಲ್ಲೂ ಝೇಂಕಾರ
ಅವಶೇಷಗಳ ನಡುವೆಯೂ ಪ್ರತಿಧ್ವನಿ.
ಹಾಡಿದಷ್ಟೂ ರಾತ್ರಿ ಚಿಕ್ಕದೆನ್ನಿಸುವಾಗ
ಹಿಂಬಾಗಿಲನು ಯಾರೋ ತೆರೆದ ಸದ್ದು

ನೆಳಲು ಬೆಳಕಿಗೂ ಆಟ
ಹಳಿಗಳತ್ತ ನೋಡಲ್ಲಿ ಪುಷ್ಪಕ ವಿಮಾನ
ಸಾಗರದಿಯೂ ನೆನೆಯದ ಕಾಗದದ ದೋಣಿ
ನಾವೆಯಲ್ಲೆ ಒರಗಿದ ನಾವಿಕನಿಗೀಗ
ಶಾಪ ವಿಮೋಚನೆಯ ಸ್ಪರ್ಶ

ತೋಟದಂಚಿನ ಮೂಕಮರ ಏನನ್ನು ಹೇಳೀತು?
ದೋಸ್ತಾ ಕಣ್ಣು ತಪ್ಪಿಸಬೇಡ ಅಂತಲೇನು?
ಅಲ್ಲಿಹುದು ನಿಮ್ಮ ಮನೆ
ಅದೇ ಊರಿನ ಕಡೆ ಅಂತಲೂ ಇಹುದಾ?
ಹರಕು ನೋಟಿನಂತೆ ಮರಳಿ ಹೊರಟು ನಿಂತಾಗ
ಅವನ ಮುಖದಲ್ಲೂ ಈಗ ಸಮಯದ ಹರಿವು

ಮುಂಗಾರಿರುಳಿನಲಿ ಬೆಳದಿಂಗಳು
ತರಗೆಲೆ ಹೆಕ್ಕುವಾಗ
ಚಂದಮಾಮ ಹಸಿರೆಲೆ ಹರವುತ್ತಾನೆ
ಬೆಳದಿಂಗಳಲ್ಲಿ ಸುಳುಸುಳುಗಾಳಿ
ಮತ್ತದೇ ಸುಳು ಸುಳು ಗಾಳಿ
ಬೊಗಸೆಯೊಡ್ಡಿ ನಿಲ್ಲುತ್ತಾಳೆ ಅವನ ಮುಂದೆ
ಇದೀಗ ಅವಳ
ಬೊಗಸೆಗಣ್ಣು ಬೆಳದಿಂಗಳು
ಅವಳ ಬೊಗಸೆಯಲ್ಲೂ ಮಳೆಶಾಂತಲಾ ಭಂಡಿhttp://www.blogger.com/profile/00119083151368093886noreply@blogger.comtag:blogger.com,1999:blog-5495085842856428066.post-7191805487474262312008-07-11T08:58:00.000-07:002008-07-12T10:38:48.785-07:00ಕನಸುಗಳಿಗೆ ಕಾಲಿಲ್ಲ, ರೆಕ್ಕೆಯಿದೆಎಳೆಬಿಸಿಲು ಹೂಗೊಂಚಲು
ಹಕ್ಕಿಯಿಂಚರ
ಸೋನೆಹನಿ
ನದಿ ಹರಿವು
ಮಕರಂದ
ಬೆಳದಿಂಗಳು
ನೆನಪು
ಎಲ್ಲೋ ತೇಲುವ ಹಾಡುಗಳು
ಬಳ್ಳಿಯ ಮಲ್ಲಿಗೆ ಹೂವುಗಳೆಲ್ಲ
ಅಂಗಳದಲ್ಲಿ ಅರಳುವ ಬದಲು
ನರಳುತ್ತ
ನಡೆಯಲಾಗದೆ
ಕುಂಟುತ್ತಿವೆಯಾ ಈಗೀಗ ಕನಸುಗಳು?

ಬೊಗಸೆ ಪ್ರೀತಿ
ಮೊದಲಮುತ್ತು
ಬಿಸಿಯಪ್ಪುಗೆಯ ರುಚಿ
ಪ್ರೇಮದ ಪರಿಮಳ
ಮೊಗ್ಗರಳುವ ಪರಿಗಳ
ಕಲಿಸಿದವನೇ
ನೀ ಕಟ್ಟಿದ ಅಡಿಪಾಯದ ಮೇಲಿವಳು
ಗಟ್ಟಿನಿಂತಿದ್ದಾಳೆ
ಹೆಗಲೊಳಗೆ
ಬರಸೆಳೆದು
ಭರವಸೆಯ ಮಳೆಗರೆದವನೇ
ಈ ಹೆಗಲಿಗೆ ಬಾ
ನಿನ್ನೊಂದು
ಹೆಜ್ಜೆಯಾಗುತ್ತಾಳಿವಳು

ನಯನದೊಳಗು
ಮಧುವನಿತ್ತು
ಮನದೊಳಗೆ ಸಿಹಿಯ ಬಿತ್ತಿ
ಬಾಯಿಗಿತ್ತು ಸಕ್ಕರೆ
ಮೈತುಂಬ ಸಿಹಿಮಳೆಗರೆದ ಮೇಲೂ
ನಿನ್ನೊಳಗುಳಿಸಿಕೊಂಡ
ಸಿಹಿಯನ್ನೆಲ್ಲ ತಾ
ಇನ್ನಷ್ಟು ಸಿಹಿಯಾಗುತ್ತಾಳಿವಳು

ಹಾಡು ಕೇಳುವುದಿಲ್ಲ
ಏನನ್ನು ಬರೆಯುವುದಿಲ್ಲ
ಅವರಿಗೆಲ್ಲ ಹೇಳಿದ್ದಾಳೆ
ಮಾತಾಡಿಸಬೇಡಿ ಅಂತ
ನಿನ್ನೊಳಗೆ ಕುಳಿತೇ
ಬದುಕಿಗುಸಿರಿರುವತನಕ
ಮೌನವಾಗಿ
ಹಾಡುತ್ತಾಳವಳು

ಜೋಳವೇ ಬೇಕಿಲ್ಲ
ಮಾಸಾಲೆಪೂರಿ ಸುಮ್ಮನೆ ಹೇಳಿದ್ದು
ಸೌತೆಕಾಯಿ, ಪೇರಲೆ ಹಣ್ಣು
ಏನೋ ಸಂಜೆ ಕಳೆಯುವುದಕ್ಕೆ
ನಿನ್ನೆದುರು ಮುಗ್ಧಮಳೆಗರೆಯುವುದಕ್ಕೆ
ಅವೇ ಬೇಕಂತ ಹಠ ಮಾಡುವುದಿಲ್ಲ
ಊರಿಗೆ ಹೋಗೋಣ
ಚಕ್ಕಡಿ ರೆಡಿಮಾಡು ಅಂತಳುವುದಿಲ್ಲ
ಎಲ್ಲಿಯಾದರೂ ಸರಿ
ಸದಾ ನಿನ್ನೊಡನೆ
ಇದ್ದುಬಿಡುತ್ತಾಳವಳು

ಹಕ್ಕಿಗಳಲ್ಲವ ನಾವಿಬ್ಬರು?
ನಡೆಯಲಾಗದ ಪಕ್ಷ ರೆಕ್ಕೆಬಿಚ್ಚು
ಜೊತೆಯಲ್ಲಿ ಹಾರುತ್ತಿರೋಣ
ಮೊದಲ ಬಾರಿಗೆ ಮಡಿಲೊಡ್ಡಿ
ಕೇಳುತ್ತಿದ್ದೇನೆ ಏನನ್ನೋ
ಅದೇ ಕಣೋ...
ಬೆಳಿಗ್ಗೆ ಕಂಡ ಕನಸಿದು
ಮಧ್ಯಾಹ್ನದೂಟದ ವೇಳೆ
ನೆನಪಾಯ್ತು
ಬದುಕ ಮುಸ್ಸಂಜೆಯಲ್ಲಿ
ಒಟ್ಟಿಗಿಬ್ಬರೂ ಕೂತು
ಹಲಸಿನಹಪ್ಪಳ
ಮೇಲೊಂಚೂರು ತೆಂಗಿನೆಣ್ಣೆ
ಆಲೆಮನೆ ಬೆಲ್ಲ
ಮೆದ್ದಂತೆ ಕನಸು
ನಡೆಸಿಕೊಡುತ್ತೀಯ ಈ ಮಾತನ್ನು?ಶಾಂತಲಾ ಭಂಡಿhttp://www.blogger.com/profile/00119083151368093886noreply@blogger.comtag:blogger.com,1999:blog-5495085842856428066.post-18768708045760591862008-07-10T11:26:00.000-07:002008-07-10T22:20:17.617-07:00ಸೂರ್ಯನಿಳಿವ ಮೆಟ್ಟಿಲಲ್ಲಿ...ಇವತ್ಯಾಕೋ ಮನಸು ಸರಿಯಿಲ್ಲ ಅನ್ನುತ್ತೇನಲ್ಲ, ಆಗ ನೀನು ‘ಯಾಕೆ?’ ಅಂತ ಕೇಳಲೇ ಬೇಡ. ಅದು ಹಾಗೆಯೇ. ಅದಕ್ಕುತ್ತರವಿಲ್ಲ. ಇಬ್ಬರಿಗೂ ಗೊತ್ತಿರುವ ಪ್ರಶ್ನೆಗಳಿಗೆ ಉತ್ತರಿಸುವುದೂ ಇಲ್ಲ.
ಬೆಳಿಗ್ಗೆ ಕ್ಲಾಸ್ ಮುಗಿದ ತಕ್ಷಣ ನನ್ನೆದುರು ನಿಲ್ಲುವ ನಿನ್ನನ್ನ ‘ಮರೇತೆನೆಂದರೂ ಮರೆಯಲಿ ಹ್ಯಾಂಗ’? ನನ್ನ ಬೇಜಾರು ನನಗಿರಲಿ ಬಿಡು. ನೀನು ನಿನ್ನ ಪಾಡಿಗಿರುವದ ಕಲಿತುಕೋ ಅಷ್ಟೆ. ಕಾಡಬೇಡ. ಎಷ್ಟೋ ದಿನದಿಂದ ಅಂದುಕೊಂಡಿದ್ದೆ ನಿನ್ನನ್ನ ಮಾತಾಡಿಸಬಾರ್ದು ಅಂತ. ಆ ಎಕಾನಾಮಿಕ್ಸ್ ಡಿಪಾರ್ಟ್ ಮೆಂಟ್ ಯಾಕಿದೆಯೋ ನಮ್ಮ ಡಿಪಾರ್ಟ್ಮೆಂಟಿನ ಪಕ್ಕ ಅನಿಸುವ ಮಟ್ಟಿಗೆ ಕಾಡುತ್ತೀಯಲ್ಲ. ಈ ಯುನಿವರ್ಸಿಟಿಯವರಿಗೂ ಗೊತ್ತಿರಬೇಕು, ಸರಿಯಾಗಿ ನಿನಗೆ ಕ್ಲಾಸ್ ಮುಗಿವ ಹೊತ್ತಿಗೆ ನನ್ನ ಕ್ಲಾಸ್ ಗಳು ಶುರುವಾಗೋ ಹಾಗೆ ಟೈಮ್ ಟೇಬಲ್ ಹಾಕಿಟ್ಟಿದ್ದಾರಲ್ಲ.

ಅಲ್ಲ ಕಣೋ...ಹೀಗಂದೆ ಅಂತ ಬೇಜಾರಾಗ್ಬೇಡ. ನಂಗೂ ನೀನಿಷ್ಟವೇ. ನೀನು ಬಂದು ನನ್ನ ಕಾಡಿ ಹೋಗ್ತೀಯಲ್ಲ ಹಿಂದೆಯೇ ಇವರೆಲ್ಲ ನನ್ನ ಕಾಡ್ತಾರೆ ಕಣೋ....ನೀನು ನನಗೇನಾಗಿದೀಯೋ ಅದಕ್ಕಿಂತ ಹೊರತಾಗಿರುತ್ವೆ ಇವರ ಮಾತುಗಳು ಗೊತ್ತಾ? ನನಗೆ ಸಹಿಸೋದು ಕಷ್ಟ. ಈಗೀಗ ಇವರ ಮಾತಿಗೆಲ್ಲ ಬೇಜಾರಾಗಿ ದಿನಪೂರ್ತಿ ನಿನ್ನೊಡನೆಯೇ ಇದ್ದುಬಿಡಬೇಕು ಅನ್ಸಿಬಿಡ್ತಿದೆ. ನಿನ್ನ ಪರಿಸ್ಥಿತಿಯೂ ಅದೇಅಂತ ಗೊತ್ತಿದೆ ಕಣೋ. ನೀನೀಗ ಸಂಜೆಯ ಕಾಫಿಯನ್ನ ನನಗೋಸ್ಕರ ಬಿಟ್ಟುಬಿಟ್ಟಿದೀಯ ಅಂತ ನನ್ನರಿವಿಗೆ ಬಂದಿಲ್ಲ ಅಂದುಕೊಂಡ್ಯಾ? ಹೋಗ್ಲಿಬಿಡು. ಸಂಜೆಯ ಸೂರ್ಯ ಇಳಿಯುತ್ತಾನಲ್ಲ ಅದನ್ನೇ ನೋಡುತ್ತ ತಂಪಾಗಿದ್ದುಬಿಡೋಣ ಬಿಡು. ಆ ರಂಗೇ ಸಂಜೆ ಟೀ ಕಾಫಿ ಎಲ್ಲ ಆಗುತ್ವೆ ನಮ್ಮ ಪಾಲಿಗೆ.

ನೀನು ಹಾಗೆ ಸಂಜೆ ಅರು ಗಂಟೆ ಆಗ್ತಿದ್ದಂಗೆ ನಮ್ಮನೆಯ ಮುಂದಿರುತ್ತೀಯಲ್ಲ, ಒಮ್ಮೊಮ್ಮೆ ನೋವಾಗ್ತಿತ್ತು ನಂಗೆ, ನೀನು ಈ ಊರು ಬಿಟ್ಟರೆ ಸಂಜೆಯ ಸೂರ್ಯ ಇಷ್ಟೇ ಚೆನ್ನಾಗಿ ಕಾಣಿಸ್ತಾನಾ ಅಂತಲೂ ಅನ್ನಿಸಿದ್ದಿದೆ.

ಇಲ್ಕೇಳೋ..ಏನು ಗೊತ್ತಾ? ನಿನ್ನೆ ಅವನು ಕಾಲ್ ಮಾಡಿದ್ದ, ಯಾರು ಹೇಳು, ಹಿಂದೆಬಿದ್ದು ಮಾತಾಡದೇ ಮದುವೆಮಾತನ್ನು ಮನೆತನಕ ತಂದು ಒಪ್ಪಿಸಿದನಲ್ಲ ನನ್ನೊಳಗೆ ಕುಳಿತವನು, ಅವನೇ ಕಾಲ್ ಮಾಡಿದ್ದ. ಏನಂದ ಗೊತ್ತಾ "ನೀನು ಅವನ ಜೊತೆ ದಿನಾ ವಾಕ್ ಹೋಗೋದು ಸರಿಕಾಣ್ತಿಲ್ಲ, ವಿಷಯ ನನ್ನತನಕ ಬಂದಿದೆ, ನನಗೇನೂ ಬೇಜಾರಿಲ್ಲ, ನೋಡಿದವ್ರು ಆಡ್ಕೊಳ್ಳೋದು ಬೇಡ" ಅಂತಂದ. ದಿನಾ ನಮ್ಮನ್ನ ನೋಡೋ ಅಮ್ಮ ಕೂಡ ಇದೇ ಮಾತು ಹೇಳಿದ್ದು ತುಂಬ ನೋವಾಯ್ತು "ಬೇಕಿದ್ರೆ ನಮ್ಮ ಮನೆಯೊಳಗೇಗೇ ಕೂತು ಹತ್ತು ನಿಮಿಷ ಮಾತಾಡಿ, ವಾಕ್ ಹೋಗೋದು ನೋಡಿದವ್ರಿಗೆ ಆಡಿಕೊಳ್ಳೋಕೆ ಸಿಕ್ಕಿದ ಹಾಗಾಗುತ್ತೆ, ಅಷ್ಟೇ ಮತ್ತೇನಿಲ್ಲ" ಅಂತದ್ರು ಅಮ್ಮ. ಅವರೆಲ್ಲರ ಮಾತೂ ಒಪ್ಪುವಂತದ್ದೇ. ಆದ್ರೆ ನೀನೇನು ಅಂತ ನಂಗೆ ಗೊತ್ತಿದೆ, ನಿನ್ನನ್ನ ಬಿಟ್ಟು ಸಂಜೆ ಮುಗಿಯುವ ದಿನಗಳನ್ನು ನಾನು ಊಹಿಸಿಕೊಳ್ಳೋದು ಕಷ್ಟವೇ ಕಣೋ.

ನೀನೇನಂತೀಯ ಇದಕ್ಕೆ? ಸುಮ್ನೆ ಇರ್ಬೇಡ, ಮಾತಾಡು, ನನ್ನ ಬೇಜಾರಿಗೆ ನಿನ್ನ ಮಾತು ಬೇಕು ಕಣೋ, ನಿನ್ನ ನೋವುಗಳೂ ಗೊತ್ತಿದೆ ಅವುಗಳಿಗೆ ನಾನು ಜೊತೆಯಗುತ್ತೀನಲ್ಲ ಹಾಗೇ ನಿನ್ನೊಳಗು ನಾನೇನನ್ನೋ ಹುಡುಕುತ್ತೇನೆ. ಅದಕ್ಕೊಂದು ಅರ್ಥ ಕೊಡದೆ ಅಂಟಿಕೊಳ್ಳುತ್ತೀಯಲ್ಲ, ಅದಕ್ಕೆ ನೀನಿಷ್ಟವಾಗ್ತೀಯ.ಅರ್ಥ ಕೊಟ್ಟರೂ ಅನರ್ಥವಾಗದ ಹಾಗೆ ನನ್ನನ್ನ ನೀನು ಕಾಪಾಡಿಕೊಳ್ಳುವ, ನನ್ನೊಳಗೆ ಭರವಸೆ ತುಂಬುವ ನಿನ್ನೊಳಗೆ ಉಳಿದುಬಿಡುತ್ತೇನೆ. ನಿನ್ನ ನೋವುಗಳಿಂದಲೇ ನನ್ನ ನೋವುಗಳನ್ನಿಷ್ಟು ನೇವರಿಸ್ತೀಯಲ್ಲ, ಆ ಸಾಂತ್ವನ ಇನ್ನೆಲ್ಲೂ ಸಿಗೋಲ್ಲ. ಸಮಾನ ದುಃಖಿಗಳು ಪರಸ್ಪರ ಸ್ನೇಹಿತರಾಗ್ತಾರಂತೆ. ನಮ್ಮನ್ನ ನೋಡಿಯೇ ಈ ಮಾತನ್ನ ಹೆಳಿರ್ಬೇಕು ಅಂತ ಅನಿಸೋಲ್ವ ನಿಂಗೆ?

ಅಲ್ಲ ನೋಡಿದವ್ರು ಆಡ್ಕೊಳ್ಳೋದು ಬೇಡ ಅಂದ್ರೆ ಏನರ್ಥ? ನಿಂಗೇನಾದ್ರೂ ಗೊತ್ತಾ? "ನೋಡಿದವ್ರು ಆಡ್ಕೊಳ್ಲಿಬಿಡು, ನೀನಿದ್ದೀಯಲ್ಲ ಜೊತೆಯಲ್ಲಿ ಅಷ್ಟು ಸಾಕು" ಅಂತವನಿಗಂದು ಫೋನಿಟ್ಟೆ. ಜಾಸ್ತಿ ಮಾತಾಡೋಕೆ ಆಗ್ಲಿಲ್ಲ. ತುಂಬ ಹೊತ್ತು ಕತ್ತಲಲ್ಲಿ ನನ್ನದೇ ಮನಸ್ಸು ಮುಸುಮುಸು ಅಳೋದನ್ನ ನಾನೇ ಕೇಳ್ತಾ ಸುಮ್ಮನೆ ಕೂತಿದ್ದೆ. ಅಮ್ಮ ಬಿಸಿಬಿಸಿ ಟೀ ಕೊಟ್ರು. ಕುಡಿಯೋವಾಗ ಮನ್ಸು ಕುದೀತಾ ಇತ್ತು. ನಿನ್ನ ನೆನಪಾಯ್ತು. ಅಮ್ಮಂಗೆ ಹೇಳ್ದೆ. "ಅಮ್ಮಾ ಅವನು ಈಗೀಗ ಸಂಜೆ ಟೀ ಕುಡಿಯೋದನ್ನ ಬಿಟ್ಬಿಟ್ಟಿದ್ದಾನೆ" ಅಂತ. ಅಮ್ಮ ಯಾಕೇಂತ ಕೇಳಿದ್ರು. "ಅವನ ಫ್ರೆಂಡ್ಸ್ ಅವನನ್ನ ಟೀ ಟೈಮಲ್ಲಿ ಆಚೆ ಹೋಗೋವಾಗ ಕರೆಯೋದಿಲ್ವಂತೆ, ಅವನು ನನ್ ಜೊತೆ ವಾಕ್ ಬರ್ತಾನಲ್ಲ... ಅವರ ಜೊತೆ ಸಂಜೆ ಟೈಮಲ್ಲಿ ಇವನಿರೋಲ್ಲ ಅಂತ ಕೋಪವಿರ್ಬಹುದು. ಅವರೆಲ್ಲ ಅವನು ನನ್ ಜೊತೆ ಟೀಗೆ ಹೊರಗಡೆ ಹೋಗ್ತಾನೆ ಅಂತಂದ್ಕೊಂಡ್ಬಿಟ್ಟಿದ್ದಾರೆ ಅನ್ಸತ್ತೆ, ನಾನಾದ್ರೆ ಮನೆಯಲ್ಲಿ ಟೀ ಕುಡ್ದು ಹೋಗ್ತೀನಲ್ಲ, ಅವನು ಹಾಗೇ ಇರ್ತಾನಲ್ಲ ನನಗೋಸ್ಕರ, ಅದ್ಕೆ ಬೇಜಾರು" ಅಂತಂದೆ . ಅಮ್ಮ "ಅವನನ್ನೂ ಮನೆಗೇ ಕರ್ಕೊಂಡು ಬಾ, ಇಬ್ರೂ ಟೀ ಕುಡೀತಾ ಇಲ್ಲೇ ಮಾತಾಡುವಿರಂತೆ, ಅವನ್ಯಾಕೆ ನಮ್ಮನೆ ಒಳಗೆ ಬರೋಲ್ಲ?" ಅಂತ ಕೇಳಿದ್ರು. ನಾನು ಮಾತಾಡ್ಲಿಲ್ಲ.

ಹೌದು ನೀನ್ಯಾಕೆ ನಮ್ಮನೆ ಒಳಗೆ ಬರೋಲ್ಲ ಒಂದಿನವೂ? ನೀನು ನಮ್ಮನೆ ಒಳಗೆ ಬರಬೇಕು ಅಂದ್ರೆ ವೀಕ್ ಎಂಡ್ ತನಕ ಕಾಯ್ಬೇಕಿತ್ತಲ್ಲ ನಮ್ಮನೆಯವರೆಲ್ಲ? ಹೋಗ್ಲಿಬಿಡು. ಯಾವಾಗಾದ್ರೂ ಬಾ ನಿಂಗಿಷ್ಟವಾದಾಗ ಆಯ್ತಾ, ನನಗಂತೂ ದಿನ ಸಿಗ್ತೀಯಲ್ಲ ಅಷ್ಟು ಸಾಕು.

ಸೂರ್ಯ ಮುಳುಗೋದನ್ನ ನೀನು ನಂಗೆ ಸಿಗೋ ಮೊದಲೂ ನೋಡಿದ್ದೆ, ಆದ್ರೆ ಇಷ್ಟು ಚೆನ್ನಾಗಿರ್ತಿರಲಿಲ್ಲ ಅನಿಸುತ್ತೆ. ನೀನು ನನ್ನ ಕ್ಲಾಸ್ ಮುಗಿದ ತಕ್ಷಣ ನನ್ನೆದುರು ಪ್ರತ್ಯಕ್ಷವಾಗಿ ನಿಂತಿದ್ದೆಯಲ್ಲ! ಆ ದಿನ ಮರೆಯೋಕೆ ಸಾಧ್ಯ ಇಲ್ಲ. "ನಿನ್ನನ್ನ ಇವತ್ತೊಂದು ಒಳ್ಳೆಯ ಜಾಗಕ್ಕೆ ಕರ್ಕೊಂಡು ಹೋಗ್ತೀನಿ, ನೀನು ಬರ್ಲೇಬೇಕು" ಅಂದ್ಯಲ್ಲ ಮಗುವಿನ ಹಾಗೆ. ಅದೇ ಮುಗ್ಧತೆ ನನ್ನನ್ನ ನಿನ್ನ ಜೊತೆ ಕಟ್ಟಿಹಾಕಿಬಿಡ್ತು ಅದಕ್ಕೊಂದು ಸಂಬಂಧದ ಹೆಸರಿನ ಹಂಗಿಲ್ಲದ ಹಾಗೆ.

ನಮ್ಮಿಬ್ಬರ ನಡುವಿನ ಸಂಬಂಧಕ್ಕೆ ನಾವಿಬ್ಬರು ಹೆಸರು ಕೊಡುವ ಯೋಚನೆಯನ್ನೇ ಮಾಡಲಿಲ್ಲ ಅಲ್ಲ? ಅದೇ ಕಣೋ... ನಿಷ್ಕಲ್ಮಶವಾದ ಎಲ್ಲವನ್ನು ಮೀರಿದ ಹೆಸರಿಲ್ಲದ ನಂಟು. ಒಮ್ಮೆಯೂ ನಿನ್ನ ಮುಖದಲ್ಲಿ ಏನನ್ನೋ ಮುಚ್ಚಿಡುತ್ತಿದ್ದೀಯ ಅನ್ನುವ ಭಾವಗಳು ಸಿಗದ ಹಾಗಿದ್ದೆಯಲ್ಲೋ . ಎಲ್ಲವನ್ನೂ ತೆರೆದಿಡುತ್ತಿದ್ದೆಯಲ್ಲ ನನ್ನ ಮುಂದೆ. ಹುಡುಗನೊಬ್ಬ ಹೀಗೆ ಮಾತಾಡಬಹುದು, ಅವನೊಳಗೂ ಇಂಥ ಸೂಕ್ಷ್ಮ ಮನಸಿದೆ ಅನ್ನೋದು ಅರಿವಾಗಿದ್ದು ನಿನ್ನಿಂದಲೆ ಕಣೋ.

ನನಗೆ ಹುಡುಗರೆಂದ್ರೆ ಅಲರ್ಜಿಯಿತ್ತು. ಯಾಕೇಂದ್ರೆ ಸ್ವಲ್ಪ ಚೆನ್ನಾಗಿ ಮಾತಾಡ್ಸಿದ್ರೂ ಅಪಾರ್ಥ ಅನರ್ಥಗಳನ್ನೇ ಮಾಡ್ಕೋತಾರೆ ಹುಡುಗ್ರು ಅಂದ್ಕೊಂಡಿದ್ದೆ. ಹುಡುಗರೆಂದ್ರೆ ಗಟ್ಟಿಬೆಳೆದುನಿಂತ ಒರಟುತೊಗಟೆಯ ಹೂ ಹಣ್ಣುಗಳಿಲ್ಲದ ಕಪ್ಪುಹಸಿರೆಲೆಯ ಹೂಬಳ್ಳಿಗಾಸರೆಯಾಗುವ ಮರಗಳೇ ನನಗೆ ನೆನಪಾಗ್ತಿದ್ದಿದ್ದು. ಹೂ ಬಳ್ಳಿಯಿಲ್ಲದೇ ಅವಕ್ಕೆ ಸೌಂದರ್ಯವಿಲ್ಲ ಅಂದುಕೊಂಡಿದ್ದವಳು ನಾನು. ನೀನು ನನ್ನ ಆ ಅನಿಸಿಕೆಯನ್ನ ಸುಳ್ಳುಮಾಡಿದ್ದೆ. ಒರಟುತೊಗಟೆಯೊಳಗಿನ ಮೃದುತಿರುಳನ್ನೆಲ್ಲ ಸುಳಿಸುಳಿಯಾಗಿತೆರೆದಿಟ್ಟು ಹಗುರಾಗುತ್ತಿದ್ದೆಯಲ್ಲ, ಅವಕ್ಕೆಲ್ಲ ಸ್ಪಂಧಿಸುವಾಗ ನನ್ನೊಳಗೆ ಮೊಳೆಯುತ್ತಿದ್ದ ಖುಷಿಯನ್ನು ನೀನು ಗಮನಿಸಿದ್ದೀಯ ಅಂದುಕೊಂಡಿದ್ದೀನಿ.

ನೀನು ನನಗೆ ಸದಾ ಖುಷಿಯೇ...ಅದಕ್ಕೇ ಅಲ್ಲವ ನಾನು ನಿನ್ನನ್ನ ಮುದ್ದಾಗಿ ‘ಹ್ಯಾಪೀ’ ಅಂತ ಕರೀತಿದ್ದಿದ್ದು. ಆ ಹೆಸರೊಳಗೇ ಸಾಕಷ್ಟು ಖುಷಿಯಿತ್ತು. ನಾನು ಹಾಗೆ ಕರೆಯೋವಾಗ ನಿನ್ನ ಮುಖ ಅರಳೋದನ್ನ ನಾನು ನೋಡಿಲ್ಲ ಅಂದುಕೊಂಡಿದ್ದೀಯ? ಮುಗ್ಧ ನಗುವನ್ನ ಮುಚ್ಚಿಟ್ಟಿದ್ದು ಮುಕ್ತವಾಗಿ ನನಗೆ ಸಿಕ್ಕಿಲ್ಲ ಅಂದುಕೊಂಡಿದ್ದೀಯ? ನಿನ್ನ ಮನದೊಳಗಿನ ಎಲ್ಲವನ್ನೂ ನಾನು ಕಾಣಬಲ್ಲವಳಾಗಿದ್ದೆ. ಹಠ ಮಾಡುವುದನ್ನ ಕಲಿಸಿದವನೇ ನೀನು ಅಂದರೆ ನಿಂಗೆ ಕೋಪ ಇಲ್ಲ ತಾನೆ? ಕೋಪ ಮಾಡ್ಕೊಂಡ್ರೆ ನಂಗೀಗ ಕಾಣೋದು ಇಲ್ಲ ಬಿಡು.

ನೂರೈವತ್ತಕ್ಕೂ ಮಿಗಿಲು ಬಾರಿ ಸೂರ್ಯ ಮುಳುಗಿದ್ದನ್ನ ನೋಡುತ್ತ ಆ ಮೋರಿಯ ಮೇಲೆ ಕೂತಿರ್ತಿದ್ದೆವಲ್ಲ, ಆಗ ನಿಂಗೇನು ಅನಿಸ್ತಿತ್ತು. ನನಗೆ ಏನಾದರೂ ಅನಿಸೋಕೆ ಅವಕಾಶ ಇರ್ಲಿಲ್ಲ. ಆದ್ರೆ ನಿಂಗೆ ಏನಾದ್ರೂ ಅನಿಸ್ತಿದ್ದಿರಬಹುದು ಅಂತ ಈಗ ಅನಿಸ್ತಿದೆ. ಆವತ್ತು ನೀನು ಹೊರಡೋ ಮೊದಲು ಬಿಕ್ಕಿ ಬಿಕ್ಕಿ ಅತ್ತಿದ್ದು ಯಾಕೆ ಗೊತ್ತಾ? ನಾಳೆ ನಾನ್ಯಾರ ಜೊತೆ ವಾಕ್ ಹೋಗಬೇಕು ಅಂತನಿಸಿ.

ನೀ ಸಿಕ್ಕಿದ ದಿನದಿಂದ ನನ್ನ ಡೈರಿ ಧೂಳಿಡಿಸಿಕೊಂಡು ಬಿದ್ದಿತ್ತು ಅನಾಥವಾಗಿ. ಇಬ್ಬರೂ ಒಟ್ಟಿಗಿರುವಾಗ ಸೂರ್ಯ ಇಳಿವ ಬಣ್ಣಗಳಲ್ಲಿ ನಮ್ಮ ದಿನಚರಿಯ ಬಣ್ಣಗಳು ಕಲಬೆರಕೆಯಾಗುತ್ತ ವಿನಿಮಯವಾಗ್ತಿದ್ದವಲ್ಲ! ಡೈರಿಬರೆವುದು ಬೇಕೆನಿಸಿರಲಿಲ್ಲ ನೀನಿದ್ದಷ್ಟು ದಿನ. ನೀನು ಹೋದ್ಮೇಲೆ ಮೂರ್ನಾಲ್ಕು ದಿನ ರೂಮಿನ ಕಿಟಕಿಯಲ್ಲೇ ನಿಂತು ನೋಡ್ತಿದ್ದೆ.

ನೀನಿಲ್ಲದೆ ಸೂರ್ಯ ಮುಳುಗೋಲ್ಲ ಅನ್ನೋ ನನ್ನ ಭಾವನೆ ಸುಳ್ಳಾಯ್ತು. ಸೂರ್ಯ ಮುಳುಗ್ತಿದ್ದ ಕಣೋ. ಕತ್ತಲೂ ಆಗ್ತಿತ್ತು. ಅಮ್ಮ ಬಂದು ಲೈಟ್ ಹಾಕಿ ನನ್ನೆಡೆ ನೋಡಿ ಸುಮ್ಮನೆ ಹೊರಟು ಹೋಗ್ತಿದ್ರು. ಅವರಿಗೆ ಏನಾದ್ರೂ ಅರ್ಥವಾಗಿತ್ತಾ? ನನಗೇ ಅರ್ಥವಾಗದ್ದು ಅವರಿಗೆ ಹೇಗೆ ಅರ್ಥವಾಗ್ಬೇಕು ಅಲ್ವಾ?

ನಾಲ್ಕು ದಿನ ಅದ್ಮೇಲೆ ನಿಧಾನಕ್ಕೆ ಮನೆಯಾಚೆ ಕಾಲಿಟ್ಟೆ. ಹೊರಗಿನ ಬೆಳಕು ವಿಚಿತ್ರ ಅನಿಸ್ತು. ಕಣ್ಣುಗಳಲ್ಲಿ ನೀನಿದ್ದೆ ನಿಧಾನಕ್ಕೆ ಒಂದೊಂದೇ ಹೆಜ್ಜೆ ಹಿಂದೆ ಸರಿಯುತ್ತಾ. ನೀನು ಸರೀತಾ ಇದ್ದೆಯೋ ಅಥವಾ ನಾನೇ ಪ್ರಯತ್ನಪೂರ್ವಕ ನಿನ್ನನ್ನ ದೂರ ತಳ್ತಾ ಇದ್ನೋ...ಒಟ್ನಲ್ಲಿ ಕಣ್ಣುಗಳಲ್ಲಿ ಮಸುಕಂತೂ ಇತ್ತು, ಅತ್ತ ನೀನೂ ಮಸುಕಾಗಿ ಇತ್ತ ಎದುರಿರುವ ಬೆಳಕೂ ಕಾಣದ ಅನುಭವ.

ಅದ್ಯಾವುದೋ ಓದಿದ ಪುಸ್ತಕವನ್ನೆ ಹಿಡಿದು ಒಬ್ಬಳೇ ಹೆಜ್ಜೆ ಹಾಕಿದ್ದು ಎಲ್ಲಿಗೆ ಗೊತ್ತಾ? ದಿನಾ ನಿನ್ನೊಡನೆ ಕುಳಿತು ಸೂರ್ಯ ಮುಳುಗೋದನ್ನ ‘ಹ್ಯಾಪೀ.. ಅಲ್ನೋಡು’ ಅನ್ನುತ್ತಾ ದಿನವೂ ಹೊಸತೇನನೋ ನೋಡುವಂತೆ ನೋಡುತ್ತಿದ್ದೆನಲ್ಲ !ಅದೇ ಜಾಗಕ್ಕೆ ನಿನ್ನ ಹೆಜ್ಜೆಗಳ ಸಾತ್ ಇಲ್ಲದ ನನ್ನ ಹೆಜ್ಜೆಗಳ ಕಿತ್ತಿಡುತ್ತಾ. ಮೋರಿಕಟ್ಟೆ ಇಷ್ಟುದಿನ ನಾವಿಬ್ಬರು ಬಾರದ್ದಕ್ಕೆ ಮುನಿಸಿಕೊಂಡಿತ್ತು. ಅದೇ ಹಳೇ ಹಾಡಿದೆಯಲ್ಲ ‘ಯೆಹ್ ರಾತೇನ್ ಯೆ ಮೌಸಮ್ ನದಿ ಕಾ ಕಿನಾರಾ’ ನೆನಪಿಗೆ ಬಂತು.

ಮೋರಿಕಟ್ಟೆಯಲ್ಲಿ ನಿನ್ನೊಡನೆ ಕೂತು ಹಾಡುಗುನುಗುತ್ತಾ, ಹರಟುತ್ತಾ, ಮೌನವಾಗುತ್ತಾ ಅದೆಷ್ಟೋ ಸೂರ್ಯಾಸ್ತ ನೋಡಿದ್ದೆನಲ್ಲ, ಆಗ ಕಂಡಿರದ ಅನುಭವವೊಂದು ದೂರತೀರದಲಿ ನಿನ್ನ ನೆನಪಿನ ಹಾಡಾಗಿ ತೇಲಿ ಬರುತ್ತಿತ್ತು. ಪಕ್ಕದಲ್ಲಿ ಹರಿಯುತ್ತಿದ್ದ ಹಳ್ಳದ ನೀರು ಕದಡಿ ಹರಿಯುತ್ತಿತ್ತು, ಸೂರ್ಯ ಇಳಿಯುವ ಮೆಟ್ಟಿಲು ಅದರಲ್ಲಿದೆ ಅಂದಿದ್ದೆಯಲ್ಲ, ಹೌದಂದುಕೊಂಡಿದ್ದೆ. ಹಳ್ಳಕ್ಕೆ ಮೆಟ್ಟಿಲಿಲ್ಲ, ಬರೀ ಕಲ್ಪನೆ ಅನ್ನೋದೀಗ ಅರಿವಿಗೆ ಬರ್ತಾ ಇತ್ತು. ಅಣತಿದೂರದಲ್ಲಿ ಜೋಳದಂಗಡಿಯಲ್ಲಿ ಜೋಳ ಸುಡುತ್ತಿದ್ದ ಹುಡುಗಿ ಯಾರೊಡನೆಯೋ ಹರಟುತ್ತ ಉರಿವ ಕೆಂಡಕ್ಕೆ ಇನ್ನಷ್ಟು ಗಾಳಿ ಹಾಕುತ್ತಿದ್ದಳು. ಕೆಂಪನೆಯಕೆಂಡ ಛಟ ಛಟನೆ ಗಾಳಿಯಲ್ಲಿ ಹಾರಿದ್ದು ಬಿಚ್ಚಿಟ್ಟ ಪುಸ್ತಕದ ಹಾಳೆಗಳನ್ನ ಸುಟ್ಟೀತೆಂಬಂತೆ ಪುಸ್ತಕವನ್ನ ಮುಚ್ಚಿಟ್ಟೆ. ಸೂರ್ಯ ಮುಳುಗಿದ್ದ. ನೀರೊಳಗೆ ಅವನ ಬಣ್ಣವಿರಲಿಲ್ಲ. ಮನ ನಿನ್ನನ್ನೇ ಅರಸುತ್ತಿತ್ತು. ಸೂರ್ಯನಿಳಿಯುವ ಮೆಟ್ಟಿಲನ್ನು ನೀನೆ ಬಂದು ಕಿತ್ತುಹೋಗಿರಬೇಕು ಅನಿಸಿತು.ಶಾಂತಲಾ ಭಂಡಿhttp://www.blogger.com/profile/00119083151368093886noreply@blogger.comtag:blogger.com,1999:blog-5495085842856428066.post-28947093313056841162008-07-09T19:14:00.000-07:002008-07-09T21:25:25.093-07:00ಕಡಗೋಲ ಕಸಿದವನೆ ಯಾರೋ ನೀನು?ಕರಗುತಿದೆ ಕಡಗೋಲು ಭಾವಗಳ ಕಡೆದು
ಭಾವತೀರದಿ ಯಾರಿಹರು ಕಡಗೋಲ ಹಿಡಿದು
ಭಾವಗಳ ಕೊಡವಿದುವೆ ಕಡಲೂ ಅಹುದು
ಕೊಡದಿ ಕಡೆದಿಹ ಭಾವ ಯಾರದಿಹುದು

ಬೆಳೆದ ಭಾವದ ಮುದ್ದೆ ಬೊಗಸೆಯೊಳಗಿನ ಬೆಣ್ಣೆ
ಬೆರಳಿಗೂ ಮೀರಿಹುದು ಎಟುಕಲಾರದ್ದು
ಕೊಡದಾಳದಿ ಮುಳುಗಿಪ ಸದ್ದಿಲ್ಲದಾ ಭಾವವೇ
ಎದ್ದು ಬಾ ನೀ ಮರುಳೆ ಭಾವನೆಯ ಒಲವೆ

ಯಮುನೆ ತೀರದ ಹಾಗೆ ಭಾವ ತೀರದ ಮುರಳಿ
ಭಾವತೀರದೊಲು ಹರಿವ ಹಾದಿಯಲ್ಲಿ
ಭಾವದುದ್ದಕೂ ಭಾವ ತೀರದುದ್ದಕೂ ಮರಳಿ
ಮರುಳಿನಾಳದ ಮನವೆ ಗಾನ ಮುರಳಿ

ಕಡಗೋಲ ಕಸಿದವನು ಗೋಪಿಯಾ ಮಗನಾ
ಭಾವಗಳ ಅಳೆದವನು ರಾಧೆಯ ಇನಿಯ
ಕೃಷ್ಣೆಯರ ಕದ್ದವನು ಅವ ತಾನು ಕೃಷ್ಣ
ಭಾವಗಳ ಒಡೆಯ ಶ್ರೀಕೃಷ್ಣಪರಮಾತ್ಮ.ಶಾಂತಲಾ ಭಂಡಿhttp://www.blogger.com/profile/00119083151368093886noreply@blogger.comtag:blogger.com,1999:blog-5495085842856428066.post-65066516971556080112008-07-08T16:04:00.000-07:002008-07-14T18:41:31.840-07:00ಸ್ನಾಕ್ ಟೈಂಇವತ್ತಲ್ಲಿ
ಇವನಿಗೆ
ಸನ್ಮಾನ
ಇವನು ಹೋದ ವೇಳೆ
ಅಲ್ಲಿ
ಜನಗಣಮನ

ಅವನ ಮನ
ನಿಂತ ಮರಗಳ
ಕಾನನ
ಮುರಿದುಬಿದ್ದ ಮರವೇ
ಇವಳ
ಗೆಳೆತನ

ಅವಳು ಹೇಳಿದ್ದು
ಇವನಿಗೆ
ಸನ್ಮಾನ
ಅವನು
ಕೇಳಿಸಿಕೊಂಡಿದ್ದು
ಅನುಮಾನ

ಚಿಗುರೆಲೆ ಅರಳಿದ್ದು
ಗೆಳೆತನ
ಭರವಸೆ ಕೊಂಬೆ
ಅಭಿಮಾನ
ಬೇರಾಳ ಇಳಿದಿದ್ದು
ಮುದುಡಿದ ಕವನಶಾಂತಲಾ ಭಂಡಿhttp://www.blogger.com/profile/00119083151368093886noreply@blogger.comtag:blogger.com,1999:blog-5495085842856428066.post-51378257333731545572008-07-07T12:34:00.000-07:002008-07-14T18:41:31.841-07:00ಸಿಂಡ್ರೆಲಾಕಹಿಕಾಫಿಯಾಳದಲೂ ನಗು
ನಗು ಬಿರಿವಾಗ
ಏನೋ ನೋವು
ಕಹಿಕಾಫಿಯಾಳ
ಇನ್ನಷ್ಟು ಆಳ
ಮನದಾಳದಂತೆ

ಬಂದವಳು
ಹೊರಟೇ ಹೋದಳು
ಅದೇ ಸಮಯವಲ್ಲ
ಅದೊಂಥರ ವೇಳೆ
ಚಪ್ಪಲಿಯ ಸುಳಿವ
ಬಿಡಲಿಲ್ಲವೀಗಲೂ

ಫ್ರಿಜ್ಜೊಳಗೆ ತಣ್ಣಗೆ
ಕೂತ ಡಬ್ಬಗಳದು ಮಾತೇ ಇಲ್ಲ
ಸಿಟ್ಟಿಂಗ್ ಹಾಲಿನ ಮಧ್ಯೆ
ಅವಳದೇ ಹೊಲಿಗೆ ಯಂತ್ರ
ಕ್ರಿಸ್ ಮಸ್ ಗೆ ಕಾಯುತ್ತಲಿದೆ
ಕ್ರಿಸ್ ಮಸ್ ಟ್ರೀ
ನಾನವಳ ಬರುವ ಕಾಯುವಂತೆ

ನಿನ್ನದೇ ಕರೆಯಾ
ಬೆಳ್ಳಕ್ಕಿ ಮುಗಿಲೆ, ಸಾರಿ
ಸುಪ್ತವಾಗಿ ಮೊಬೈಲ್
ಮಾತಾಡಿದ್ದು
ಅರಿವಾಗಲಿಲ್ಲ

ಕಿಟಕಿಗಾನಿಸಿ ನಿಂತು
ನೋಡುತ್ತೇನೆ
ಮೇಲೆ ಬೆಳ್ಳಕ್ಕಿ ಹಿಂಡು
ಅದರೊಳಗೆ ಅವಳೂ ಒಬ್ಬಳಾ
ಆ ನನ್ನ ಸಿಂಡರೆಲಾ?ಶಾಂತಲಾ ಭಂಡಿhttp://www.blogger.com/profile/00119083151368093886noreply@blogger.comtag:blogger.com,1999:blog-5495085842856428066.post-74445990676610530112008-07-07T02:08:00.000-07:002008-07-14T18:41:31.842-07:00ಸುಮ್ಮನೆ ಸಾಗುವ ಸಾಲುಗಳು*ಗುರುಬಲ*
ಗುರುವೇ ಬಲವಾಗಿ
ಬಲವೇ ಗುರುವಾಗಿ
ಬಂದಾಗಲೇ
ಬಂದಿದ್ದು
ಗುರುಬಲ

*ಅದೃಷ್ಟ*
ಕವಿತೆಯೊಳಗೆ
ಕಳೆದ
ಅದೇ ಬೀಗದ ಕೈ
ಲೇಖನದೊಳಗೆ
ಕೀಲಿಕೈ ಆಗಿ ಸಿಕ್ಕಿದ್ದು!

*ನೆನಪು*
ಹಾದಿಯುದ್ದಕ್ಕೂ
ಹರಿದು
ತೀರದುದ್ದಕ್ಕೂ
ತೀರದ
ಸಂಗಾತಿ

*ಹುಣ್ಣಿಮೆ*
ಮೋಡಮರಗಳ ರಾಶಿ
ತಾರೆಮರಿಗಳ ದಿಂಡು
ಕಣ್ಣುಗಳದೇ ಜಾತ್ರೆ
ಚಂದ್ರಿಕೆಯ ಪಲ್ಲಕ್ಕಿ
ಚಂದ್ರನಿಲ್ಲ!ಶಾಂತಲಾ ಭಂಡಿhttp://www.blogger.com/profile/00119083151368093886noreply@blogger.comtag:blogger.com,1999:blog-5495085842856428066.post-75629676257598454192008-07-01T22:37:00.000-07:002008-07-08T18:55:10.905-07:00ಕಾಡುಮಲ್ಲಿಗೆಯ ಬಿಂದಿಗೆಯ ಹುಡುಗಿಕಣ್ಣ ಹೂಜೋಡಿ ಅರೆಬಿರಿದು ನಕ್ಕು
ಹೊತ್ತ ಬಿಂದಿಗೆ ನಾಚಿ ಹಗಲು ಬೆಳದಿಂಗಳು
ಕಾಡಮನೆಯೊಳಗೆ ಕೋಗಿಲೆಯ ಕೂಗು
ನಿಂತ ಮನಜಲಕು ಸರಸರನೆ ಹರಿವು

ಹೂವು ಹಾಸಿದೆ ಹದದಿ ಹಾರಿದೆಯ ಜೇನೆ
ಮಕರಂದ ತಳದಲ್ಲಿ ಕಾಣದೇನೆ
ಅಕ್ಕಿ ಹರವಿದೆ ಮರಮನೆಯ ಬುಡದೇನೆ
ಗುಬ್ಬಚ್ಚಿ ಮರಿಯೆ ನೀನಿಲ್ಲವೇನೆ

ನಗುವೆಯಲ್ಲೆ ಮಳ್ಳಿ ಮುಗುಳುಸುಮವೆ
ಭ್ರಮರನಾದವ ಕೇಳೆ ನಿನಗು ಭ್ರಮೆಯೇನೆ
ಕಾಡಮಲ್ಲಿಗೆ ಹೂವೆ ನಿನಗೇನು ಬೇಕೆ
ದಂಡೆಮುಡಿವವಳ ನೀಳಜಡೆ ಸಾಕೆ

ಒಂಟಿ ಮರದಡಿ ಹುಡುಗ ಒಂಟಿಯೇನಲ್ಲ
ಬಿಂದಿಗೆಯ ಹುಡುಗಿ ನದಿಯ ದಾಟಿಲ್ಲ
ಕಾಡುಮಲ್ಲಿಗೆ ಅರಳುವುದು ಸಂಜೆಯಲಿ
ಮಲ್ಲಿಗೆ ಮಾಯೆಗೆ ಬಿಂದಿಗೆಯು ತುಂಬಿಲ್ಲಶಾಂತಲಾ ಭಂಡಿhttp://www.blogger.com/profile/00119083151368093886noreply@blogger.comtag:blogger.com,1999:blog-5495085842856428066.post-38534110251184286452008-06-29T14:28:00.000-07:002008-07-14T18:41:31.843-07:00ಭಾವ ಬನ*ಹೊಂದಾಣಿಕೆ*
ಅವನ ಹೊಸ ಮನೆ
ನನಗದು ಹಳೆಯ ಅಂಗಳ
ಅವನ ಹಳೆಮನ
ಹೊಸ ಕಿನ್ನರಿಯರ ಕಿನ್ನರಿ
ಇದು ಅವನದೇ ಹೊಸಬಿಂಬ
ನಾನು ಹಳೆಯ ಕನ್ನಡಿ

*ವಿಪರ್ಯಾಸ*
ಅವನ ಕಾಫಿತಳದಿಳಿದು
ಕರಗಿದ ಸಕ್ಕರೆ
ಇವನ ಟೀಯುಗುಳಿದ
ಹಬೆಯಿಂದೆದ್ದು ಬಂದದ್ದು!

*ಸಂಬಂಧ*
ಕಳಚಿಕೊಂಡಷ್ಟೂ ಕೂಡಿ
ಕೂಡಿದ್ದೆಲ್ಲ ಕಳಚಿ
ಕಳೆದುಕೂಡಿ
ಕೂಡಿಕಳೆದು
ಕಳೆದದ್ದನ್ನೇ ಕಳೆದು
ಕೂಡಿಸಿದ್ದನ್ನೇ ಕೂಡಿಸಿ
ಕಾಯುತ್ತ ಕೊಲ್ಲುವ
ಕಾಗುಣಿತಗಣಿತ ಕೊಂಡಿ

*ನನ್ನ ಸಾಲು*
ಹೊಸಸಾಲಿಗೂ ಬೇಕು
ಓಬಿರಾಯನ ಉಪಮಾ
ಹಳೆಯರೂಪಕಕ್ಕೆ
ಹೊಸತನದ ಟೀಕೆ
ಓಬಿರಾಯಗೆ ತೃಪ್ತಿ
ಕವಿಗಳಿಗೊಂದಷ್ಟು ಸಾಲು ದಕ್ಕಿದ್ದಕ್ಕೆಶಾಂತಲಾ ಭಂಡಿhttp://www.blogger.com/profile/00119083151368093886noreply@blogger.comtag:blogger.com,1999:blog-5495085842856428066.post-57801652685404206012008-06-20T17:22:00.000-07:002008-07-07T17:10:02.292-07:00ಬಂದೇ ಬರತಾವ ಕಾಲಸುಳಿವಿಲ್ಲದಾರಂಭ
ಅರಿವಿಲ್ಲದಂತ್ಯಕ್ಕೆ
ಆತಂಕ ಅಲ್ಲಿ ಸೋನೆ ಸೋಲು
ಕಂಬನಿಯಲರಳಿದ್ದು
ನೆರಳು ನುಡಿಯುವುದಿಲ್ಲ
ಯಾವುದೋ ಗಝಲಿನಾ ಸಾಲು

ಹುಟ್ಟುವ ಪ್ರಶ್ನೆಗೂ
ಉತ್ತರವೆ ಮರೆತು
ತುಳುಕುವ ತುಣುಕು ಹಾಡಿನಾ ಸಾಲು
ಹಿಂಜರಿದ ಮಾತು
ಇನ್ನೆಲ್ಲೊ ಮನಸು
ಮೌನದರಸಗೆ ಸೋಲು ಮೌನದಲ್ಲೂ

ಬಿತ್ತಿದಂದೇ ಚಿಗುರಿ
ಚಿಗುರಿದ್ದೂ ಅಳಿದು
ಸುಳಿವೇ ಅಳಿದೋಯ್ತು ಹಾದಿಯಲ್ಲೂ
ಕ್ಷಣಕಾಲ ಬಳಿಯಿದ್ದು
ಬಳ್ಳಿಬುಡ ಸವರಿದ್ದು
ನೋವೊಂದು ನಿಂತು ನೇವರಿಕೆಯಲ್ಲೂ

ಇಂದೊಂದು ಗುಟ್ಟು
ನಾಳೆ ಬಿಚ್ಚುವ ತೆವಲು
ಸರಿಗಂಟು ಅಲ್ಲೂ ಸರಿಯದಿಹುದು
ಬದುಕಲ್ಲಿರದ ತಿರುವ
ತಿರುವಲಿಕ್ಕಾಗಿಯೇ
ಸುಖದೊಂದು ಮೂಟೆ ತೀರದಲ್ಲೂ

ಸವಿಗನಸುಗಳದೂ
ಹಗಲುಗನಸಿನ ಹಗಲು
ರಾತ್ರಿರಾಣಿಯದು ರಾತ್ರಿ ಕಪ್ಪುನೆರಳು
ಹಿಪ್ಪುನೇರಳೆಸೊಪ್ಪು
ರೇಷ್ಮೆಯಾಗುವ ಹದದಿ
ಅಡಗಿದರೆ ಬದುಕು ಅದರ ತಪ್ಪು

ಇದ್ದದ್ದು ಇರಲಿ
ಬಂದದ್ದು ಬರಲಿ
ಹೋದದ್ದು ಸರಿ ಹೋಗಲಿಬಿಡು
ಹೆಣಗಾಡಿದಷ್ಟು
ಕೊಸರಾಡಿದ್ದೆಷ್ಟು
ಕೆಸರಾಗುವುದು ಹೊತ್ತು, ಹೊತ್ತು ನೋಡು

ಕಾಗದದ ಅಂಚಲ್ಲಿ
ಕಾಣೆಯಾಗುವ ಹೆಸರು
ಕಾಣದ ಕೈಯೊಂದು ಇರಲುಬಹುದು
ಕಣ್ಣಂಚ ಕದದಲ್ಲೂ
ಕರಗುವುದು ತೈಲ
ಕಣ್ಣುರಿಯೆ ಕವಿತೆ ದೀಪ ಜೋಡು

ಬರಿಯ ಬಿತ್ತನೆಯಲ್ಲೂ
ಬರಬಿತ್ತೆ ಬದುಕು
ಬಂದದ್ದು ಬರಲಿ ಬದುಕಿನೋಡು
ಬದುಕೆಳೆವ ಕುಸುರಿ
ಬನದೊಳಗೆ ನುಸುಳಿ
ಬಂದೇ ಬರತಾವ ಕಾಲ ಕಾಯ್ದು ನೋಡು.ಶಾಂತಲಾ ಭಂಡಿhttp://www.blogger.com/profile/00119083151368093886noreply@blogger.comtag:blogger.com,1999:blog-5495085842856428066.post-41925237739434478842008-06-12T10:03:00.000-07:002008-07-07T17:12:27.349-07:00ಬೆಳದಿಂಗಳ ಕರೆಯೋಲೆ...ಅವನು ಯಾವಾಗಲೂ ಹಾಗೆಯೇ... ಮುಸ್ಸಂಜೆಯ ಚಾದರಹೊದ್ದು ಮಲಗಿಬಿಡುತ್ತಾನೆ. ಅವನಿಲ್ಲ ಅಂದರೆ ನಮಗೇನು ಬೆಳಕೇ ದಕ್ಕದೋ..? ಇವನಿದ್ದಾನಲ್ಲಾ .....ಒಂಟಿಜೀವದ ನಿಟ್ಟುಸಿರೊಂದು ಮನೆಯಂಗಳದಲ್ಲಿ ಲೀನವಾಗುತ್ತದೆ.
ಮುಸ್ಸಂಜೆಯ ಮನೆಯೊಳಗೆ ದೀಪವನ್ನಿಟ್ಟು
"ಬಿದಿಗೆ ಚಂದ್ರ ಬಂದ ನೋಡು....ದೀಪ ಹಚ್ಚಿದಂತೆ ಜೋಡು...ಯಾರ ಮನೆಯು ಅಲ್ಲಿ ಇಹುದೋ ಯಾರು ಬಲ್ಲರು..."
ಗುನುಗುಡುತ್ತ ಕಿಟಕಿಯಾಚೆಗಿನ ಆಗಸ ನೋಡಿದರೆ....
"ಶಶಿಬಿಂದುಧರ...ನಸುನಗೆಯ ಮಧುರ ಮಂದಾರ ಗಂಧ ಚೆಲ್ಲಿ..."
ಹತ್ತು ವರ್ಷಗಳ ಹಿಂದೆ ಅವನೊಡನೆ ಆ ಬೆಟ್ಟದ ಮೇಲಿನ ಬಿಳಲು ಮರದಾಚೆಯ ಕಲ್ಲಿನಆಲಯವೊಂದಕ್ಕೆ ಹೋಗಿ ಬಂದ ನೆನಪು ಪ್ರತಿಹುಣ್ಣಿಮೆಯಲ್ಲೂ ಕಾಡುತ್ತದೆ. ಪ್ರತಿ ಪೌರ್ಣಿಮೆಗೂ ಒಂದೊಂದು ಹೊಸಹಾಡು ಆ ದಿಕ್ಕಿನಿಂದ ಹರಿದುಬರುತ್ತೆದೆ. ಹಾಗಾದರೆ ಅವಳಿನ್ನೂ ಇದ್ದಾಳೆ. ಇರಲೇಬೇಕು, ಹಾಡು ಕೇಳಿಸುತ್ತಿದೆಯಲ್ಲಾ!
ಹುಣ್ಣಿಮೆಯ ಚಂದ್ರನ ಸುತ್ತ ಹಾಡೊಂದು ಹಸನಾಗಿ ಹರಿದಾಡುತ್ತದೆ. ದೂರದ ಗುಡ್ಡದ ಮೇಲಿನ ಆಗಸದಜೋಪಡಿಯೊಂದರಲ್ಲಿ ಲಾಟೀನು ತೂಗಾಡುತ್ತಿದೆ. ಹೌದು..ಅವಳೇ...ಅವಳೇ ಸರಿ...ಹಾಡುತ್ತಿದ್ದಾಳೆ, ಲಾಟಿನಿನ ಬೆಳಕು ಅವಳನ್ನೆಲ್ಲ ಮುತ್ತಿಕೊಂಡಿದೆ . ಹೌದು..ಅವಳೇ..ತುಟಿಬಿರಿಯದೆಯೇನಗುತ್ತಿದ್ದಾಳೆ. ತುಸುಬೆಳಕಿನಲ್ಲಿ ನಸುನಗುವೊಂದು ಹಾಸಿ ಹಾಯ್ದುಹೋಗುತ್ತದೆ.
ಹುಣ್ಣಿಮೆಯೊಂದು ಬಂದು ಮನೆಯಂಗಳದಲ್ಲಿ ಚೆಲ್ಲಪಿಲ್ಲಿಯಾಗಿ ಮನಸುಬಂದಲೆಲ್ಲ ಹುಚ್ಚಾಗಿ ಹರವಿಕೊಂಡಿದೆ. ಇವತ್ತು ಬೆಳದಿಂಗಳು! ಬಂದು ನಮ್ಮನೆಲ್ಲ ಕರೆಯುತ್ತಿದೆ. ಬೆಳದಿಂಗಳಿಗೇಕೋ ಬೇಸರವಂತೆ ಬರೀ ನೆನಪು ಕನಸುಗಳ ನಡುವಿದ್ದು. ಬೆಳದಿಂಗಳು ಕಾಡುತ್ತದೆ "ಶ್ರಾವಣದ ಮಳೆಯಲ್ಲಿ ನೆನೆದಾಡಬೇಕು. ಬಂದು ಬೆಚ್ಚಗೆ ಅಮ್ಮನ ಮಡಿಲಲ್ಲಿ ಮಲಗಿ ಮಗುವಾಗಬೇಕು" ಅಂತ.
ನಸುಗತ್ತಲ ಹಾದಿಯಲ್ಲೇ ಅವಳನ್ನು ಶ್ರಾವಣದ ಮಳೆಯತ್ತ ಕರೆದೊಯ್ಯುತ್ತಿದ್ದೇನೆ. ಅಮ್ಮನ ಮಡಿಲು ಕೈಬೀಸಿ ಕರೆಯುತ್ತಿದೆ. ನಸುಬೆಳಕಿನ ಹಾದಿ. ಕೈಯ್ಯಲ್ಲೊಂದು ಬೆಳಗುವ ಹಣತೆಯಿದೆ. ಜೊತೆ ಅವಳೂ ಬೀರಿದ ಬೆಳಕು. ತಡವುತ್ತ ಎಡವುತ್ತ ಹಾದಿ ಹುಡುಕುತ್ತಿದ್ದೇನೆ. ಅಲ್ಲಿ ತುಸು ಮುಂದೆ ನನ್ನವರೆಂಬ ನೀವೆಲ್ಲ ಇದ್ದೀರಿ .ಪ್ರತಿ ಕೈಯ್ಯೊಳಗೂ ಒಂದೊಂದು ಹಣತೆ, ಇನ್ನಷ್ಟು ಬೆಳಕು. ಧೈರ್ಯ ಉಮ್ಮಳಿಸಿಬಂದು ನಿಮ್ಮೆಡೆಗೆ ಧಾವಿಸುತ್ತೇನೆ.ಮುಂದೆ ಕಾಡು, ಬೆಳದಿಂಗಳು ಹಿಂದೆ ಹಿಂದೆ. ಈಗ ನಿಮ್ಮೆಲ್ಲರೊಟ್ಟಿಗೆ ಶ್ರಾವಣದ ಮಳೆಯಲ್ಲಿ ತೋಯ್ದು ಅಮ್ಮನ ಮಡಿಲಿಗೆ ಧಾವಿಸುತ್ತೇನೆ. ಅಮ್ಮನ ಕೈ ಮಗುವಿನ ಮನವನ್ನು ಮೃದುವಾಗಿ ನೇವರಿಸುತ್ತದೆ. ಬೆಳದಿಂಗಳು ಮುಗ್ಢವಾಗಿ ಅಮ್ಮನನ್ನೇ ನೋಡುತ್ತದೆ. ಮನಸ್ಸು ಹಗುರಾಗಿ ನಿಟ್ಟುಸಿರೊಂದು ಬೆಳದಿಂಗಳೊಳಗೆ ಕರಗುತ್ತದೆ. ಶ್ರಾವಣದ ಮಳೆಯಂಗಳದೆದುರು ನಾವೆಲ್ಲ! ಅಮ್ಮ ಅಲ್ಲಿಯೇ ನಿಂತು ನಮಗಾಗಿ ಕಾಯುತ್ತಿದ್ದಾಳೆ...
ಈಗ ಎಲ್ಲರ ಮೊಗದಲ್ಲೂ ನಗು. ಬೆಳದಿಂಗಳು ಮುಂದಕ್ಕೆ ಧಾವಿಸಿ ನಮ್ಮನೆಲ್ಲ ಕರೆಯುತ್ತದೆ "ಬನ್ನಿ, ಬನ್ನಿ..." ಎನ್ನುತ್ತ ಸುತ್ತಲಿನ ಶ್ರಾವಣದಲ್ಲಿ ಹರವಿಕೊಂಡು ಮಳೆಯಮಡಿಲಲ್ಲಿ ನೆನಪು ಕನಸುಗಳ ನಡುವೆ ಬೆರೆತುಹೋಗುತ್ತದೆ.ಶಾಂತಲಾ ಭಂಡಿhttp://www.blogger.com/profile/00119083151368093886noreply@blogger.comtag:blogger.com,1999:blog-5495085842856428066.post-41120747805147915582008-06-07T11:49:00.000-07:002008-07-14T18:41:31.844-07:00ಭಾವ ಬನ*ಆಕಸ್ಮಿಕ*

ನಾ ಹೋದಲ್ಲೆಲ್ಲ
ನೀ ನೆರಳಾಗಿ
ನಿಲ್ಲುವುದು!

ಬಿಸಿಲು ಬೆನ್ನುಬಿಡದೇ
ನನ್ನ ಸುತ್ತ
ನಿನ್ನಾಡಿಸುವುದು!

ತಂಪನ್ನರಸಿ ನೀ
ನನ್ನೆಡೆಗೆ
ವಾಲುವುದು!

*ಆಘಾತ*

ನನ್ನದೇ ನೆನಪಲ್ಲಿ
ನೀ ನನ್ನ ಮರೆತಿದ್ದು!
ನಿನ್ನ ಮರೆತಾದ
ಮೇಲೆ
ನೀನೆದುರು ಕಂಡಿದ್ದು!

*ಅಸೂಯೆ*

ಅಂದು ನೀ ತೋರಿಸಿದ
ಅಸ್ತವಾಗುತಲಿದ್ದ
ಅದೇ ಸೂರ್ಯ
ಉದಯವಾಗುವುದ ಕಂಡು
ನಾನಿಂದು ನಕ್ಕಾಗ!

*ಏಕಾಂತ*

ಗುಂಪೊಳಗೆ ನಾ
ಹಾಯಾಗಿರುವ
ನೀ ಕಾಡದ ಹೊತ್ತು
_______________ಶಾಂತಲಾ ಭಂಡಿhttp://www.blogger.com/profile/00119083151368093886noreply@blogger.comtag:blogger.com,1999:blog-5495085842856428066.post-90370795325223499062008-06-03T16:21:00.000-07:002008-07-07T17:15:27.908-07:00ನೀನೇಕೆ ಬೇಕು...?ಮುಸ್ಸಂಜೆ ಮನಯೊಳಗೆ ಮಿನುಗುದೀಪ
ಮನದಿ ಹೊಂಬೆಳಕು
ಆರುವುದೇ ಇಲ್ಲ ನಿನ್ನ ನೆನಪಿನದು

ಬೆಳಕು ಮೂಡಲು ತಣ್ಣನೆಯ ನೆನಪು
ನಿದ್ರೆ ನೆರಳೊಳಗೆ ನರಳುವುದು
ಕನಸುಗಳಲ್ಲಿ ಅಂದಿನ ನೆನಪು

ನೀನಿಲ್ಲದೆಯೇ ಬೆಳಗು
ನೀ ಬಾರದೆಯೇ ಸಂಜೆಸೆರಗು
ಮುಗುಳ್ನಗು-ಮುನಿಸು-ಮಾತು-ಮನಸು
ಇಲ್ಲದೆಯೇ ನುಂಗುವ ಮೃಷ್ಟಾಹ್ನ

ಸಂಜೆ ಮುಸ್ಸಂಜೆ ಕಳೆದು ಕತ್ತಲು
ಮತ್ತದೇ ನನ್ನಿಷ್ಟದ ಬೆಳಗು
ಬಿಳಿಪರದೆಯ ಸರಿಸಿ
ನೋವ ಮರೆಸುವುದು

ಮಧ್ಯಾಹ್ನದ ಏಕಾಂಗಿ ಊಟ
ಮುಂದೆ ನೀ ಕುಳಿತ ಕನಸು
ಇಷ್ಟೆಲ್ಲ ಇರುವಾಗ ನೀನೇಕೆ ಬೇಕು?
ನೆನಪೊಂದು ಸಾಕು.

(2001 ಜೂನ್ ತಿಂಗಳಲ್ಲಿ ಬರೆದದ್ದು)ಶಾಂತಲಾ ಭಂಡಿhttp://www.blogger.com/profile/00119083151368093886noreply@blogger.comtag:blogger.com,1999:blog-5495085842856428066.post-53656268789540406362008-05-29T11:09:00.000-07:002008-07-07T17:18:26.342-07:00ಜೇನಿನ ರವಿಅವನು VIP
ಸಮಯ ಮಿಕ್ಕಿದರೆ ಸಿಗದ ಪೋರ
ಜಾರಿರುತ್ತಾನೆ ಮಾಟಗಾರ
ಎಲ್ಲೆಂದರಲ್ಲಿ ಸಿಕ್ಕದ ತುಂಟ
ಜೇನುಕಲ್ಲು ಗುಡ್ಡದ ನಡು
ದಿನಕೆರಡು ದರ್ಶನ
ಮುಂಜಾವಿನ ಏಳು ನಡುಸಂಜೆಯ ಆರು
ಭೇಟಿ ನೀಡುವ ಸಮಯ
ಸಂಜೆಗೆ ಮೊದಲು ಸುಡುವ
ಅಗ್ನಿಯುಂಡೆಜ್ವಾಲೆ
ಸಂಜೆ ಪರದೆ ಸರಿದಂತೆ
ಲಜ್ಜೆಯಿಂದ ಕೆಂಪುಕೆಂಪಾಗಿ
ಲಗ್ಗೆ ಹಾಕಿ ಕಚಗುಳಿಯಿಟ್ಟು
ಸಂಜೆ ಏರುವಾಗ ಇಳಿದುಬಿಡುತ್ತಾನೆ

ನೋಟದಲ್ಲೇ ಭೇಟಿಯ ತೀರಿಸಿ
ಮಾತಿಲ್ಲದೇ ಮೋಡಿ ಹಾಕಿ
ಕಂಡೂ ಕಾಣದಂತೆ ಜಾರುತ್ತಿದ್ದಾನೆ
ಈಜಿಪ್ತ್ ಸೇರುತ್ತಿದ್ದಾನೆ
ಘಟ್ಟದಿಂದ ಹಾರಿಯಾದರೂ
ಜಾರಿ ಅಡಗುವ ಚೋರನ
ಹಿಡಿದು ಹೀರುವ ತವಕ
ಪುಟ್ಟಹಿಡಿಯಲಿ ಗಬಕ್ಕನೆ ಹಿಡಿದು
ಬೊಗಸೆಯಲಿಟ್ಟು ಸ್ಪರ್ಶಿಸುವ ಬಯಕೆ
ಕೆಂಪುಗುಲಾಬಿಯ ಅರೆದು ಕುಡಿದವನ
ಗುಡಿಕಟ್ಟಿ ಕೂಡಿಬಿಡುವುದು ಕನಸು

ಕೆಂಪಾದರೂ ತಂಪಾಗಿ
ಕಂಡವರಲ್ಲೆಲ್ಲಾ ಝಂಡಾ ಊರಿದವಗೆ
ಮನದ ತುಂಬೆಲ್ಲ ಹರಿದು ಸರಿದವಗೆ
ಮುಚ್ಚಿದ ಒಳಗಣ್ಣ ತುಂಬ
ಕುಣಿವ ಆದಿತ್ಯಂಗೆ ಜಂಭವಿರಬೇಕು
ತಾನು ಯಾರ ಕೈಗೂ ನಿಲುಕದ ಚೆಲುವನೆಂದು

ಜೇನುಕಲ್ಲುಗುಡ್ಡದ ಮೇಲೆ
ಜೇನುಸುರಿದು ಸರಿದವನ
ಮರಳಿ ನೋಡಿದರೆ ಇಂದು ಇನ್ನಿಲ್ಲ
ಬಿಟ್ಟುಹೋದದ್ದು ನನ್ನೊಬ್ಬಳನ್ನಲ್ಲ
ಸುತ್ತ ಕತ್ತಲಲಿ ನನ್ನಂತೆ ರೋಧಿಸುವ
ಹರಿತ್ತಿನ ಸಪ್ತಗುಡ್ಡಗಳಿವೆಯಲ್ಲ!
ಅದೇ ಸಮಾಧಾನ!

(ಪದವಿಯ ಅಂತಿಮ ವರ್ಷ(೨೦೦೦ ಜನವರಿ)ದಲ್ಲಿದ್ದಾಗ ಭೂಗೋಳಶಾಸ್ತ್ರವಿಭಾಗದ ಅಧ್ಯಯನ ಪ್ರವಾಸ ನಿಮಿತ್ತ ಜೇನುಕಲ್ಲುಗುಡ್ಡಕ್ಕೆ ಹೋಗಿಬಂದ ದಿನ ಬರೆದದ್ದು, ಅಂದು ಈ ಸಾಲುಗಳಿಗೆ "ಜೇನಿನ ರವಿ" ಶೀರ್ಷಿಕೆ ಕೊಟ್ಟ ರಾಘವೇಂದ್ರ ಬೆಟ್ಟಕೊಪ್ಪ ಅವರಿಗೆ ಧನ್ಯವಾದಗಳು)ಶಾಂತಲಾ ಭಂಡಿhttp://www.blogger.com/profile/00119083151368093886noreply@blogger.comtag:blogger.com,1999:blog-5495085842856428066.post-78018365465830009442008-05-16T16:08:00.000-07:002008-07-07T17:03:01.705-07:00ಪುಟ್ಟಿಯ ಕಥೆಗಳು೧
ಪುಟ್ಟಿ ಪುಟ್ಟನ ಕೈಹಿಡಿದು ನಿದ್ರೆ ಮಾಡ್ತಾ ಇದ್ಲು. ಪುಟ್ಟಿಯ ಮುಖವನ್ನೇ ಕಣ್ಣಲ್ಲಿ ತುಂಬಿಕೊಂಡ ಪುಟ್ಟ ನಿದ್ರೆ ಹೋಗಿದ್ದ. ನಿಧಾನಕ್ಕೆ ಪುಟ್ಟನ ಕೈಯಿಂದ ತನ್ನ ಕೈ ಕಳಚಿಕೊಂಡೆದ್ದ ಪುಟ್ಟಿ ಕಿಟಕಿಯಲ್ಲಿ ನಿಂತಿದ್ದಳು ಮರದಲ್ಲಿನ ಹಳದಿಯ ಹೂವುಗಳಿಂದ ನೆಲವನ್ನು ಮೆದುವಾಗಿ ಪುಟ್ಟನಿಗೆಚ್ಚರವಾಗದಂತೆ ಮುತ್ತಿಡುತ್ತಲಿದ್ದ ಮಳೆಹನಿಗಳನ್ನೇ ನೋಡುತ್ತಾ . ಪುಟ್ಟನ ನಿದ್ರೆಯೊಳಗಿಂದ ಹೊರಬರುತ್ತಿದ್ದ ಉಸಿರು ಪುಟ್ಟಿಯ ಮನದೊಳಕ್ಕಿಳಿದು ಪುಟ್ಟಿಯ ಮೌನಕ್ಕೆ ಜತೆಯಾದವು.

೨
ಆಕ್ಟೋಬರ್ ತಿಂಗಳು ಕಳೆದೇ ಹೋಯ್ತು. ಆವತ್ತು ಪುಟ್ಟಿ ಪುಟ್ಟನ ಹುಟ್ಟು ಹಬ್ಬಕ್ಕೆ ವಿಶ್ ಮಾಡೋದನ್ನೇ ಮರೆತಿದ್ಲು. ದಿನ ಕಳೆದು ಮರಗಳಲ್ಲಿ ಮೇ ಫ್ಲವರ್ ಅರಳಿತ್ತು.
ಆ ದಿನಗಳ ಒಂದು ಸುಂದರ ಮುಂಜಾವಿನಲ್ಲಿ ಪುಟ್ಟಿಯ ಮೊಬೈಲಿಂದ ಎಂದೋ ರೆಕಾರ್ಡ್ ಆಗಿದ್ದ ಪುಟ್ಟನ ಧ್ವನಿ ರಿಂಗಣಿಸಿತು "ಹ್ಯಾಪೀ ಬರ್ಥ್ ಡೇ ಕಣೇ ಪುಟ್ಟೀ....." ಅಂತ.
ಪುಟ್ಟಿಯ ಕಣ್ಣಂಚು ತೇವವಾಗಿ ನಗುವ ಹನಿಯೊಂದು ಪಿಸುಗುಟ್ಟಿತು "ನಿಂಗೆ ನನ್ ಮೇಲೆ ಬೇಜಾರಿಲ್ಲ ತಾನೇ ಪುಟ್ಟಣ್ಣಾ?" ಮೊಬೈಲನ್ನೆ ಮುತ್ತಿಕ್ಕಿದಳು ಪುಟ್ಟನ ಅಪ್ಪಿಕೊಂಡಂತೆ.

೩
ಪುಟ್ಟ ಪುಟ್ಟಿಯನ್ನ ಕೇಳ್ತಾ ಇದ್ದ " ಮೆಸ್ ಬಿಲ್ ಕಟ್ಬೇಕು, ಒಂದು ರೂಪಾಯಿ ಕಡ್ಮೆ ಇದೆ, ಕೊಡ್ತೀಯಾ ಪುಟ್ಟೀ..."
ಪುಟ್ಟಿ ಹೇಳಿದ್ಲು "ಇಲ್ಲ ಕಣೋ...ನನ್ ಹತ್ರ" ಪುಟ್ಟಿ ಕೊಡ್ಲಿಲ್ಲ.
"ಇವತ್ತು ಒಂದು ರೂಪಾಯಿ ಗಳಿಸ್ಕೋ...ನಾಳೆ ಅಂಥ ಲಕ್ಷರೂಪಾಯಿ ಸಂಪಾದಿಸೋ ಮಾರ್ಗ ಸಲೀಸಾಗಿ ಕಾಣಿಸುತ್ತೆ." ಅಂತ ಪುಟ್ಟಿಯ ಕಣ್ಣುಗಳು ಪುಟ್ಟನ್ನ ಹಾರೈಸ್ತಾ ಇದ್ವು. ಪುಟ್ಟಿಯ ಕಣ್ಣುಗಳನ್ನೇ ಅಮಾಯಕನಾಗಿ ನೋಡುತ್ತ ನಿಂತಿದ್ದ ಪುಟ್ಟ "ಸರಿ ಕಣೇ..." ಅಂದವನು ಅವಳ ಕಣ್ಣುಗಳಿಂದಾಚೆ ಮರೆಯಾಗಿಬಿಟ್ಟ. ಪುಟ್ಟಿಯ ಕಣ್ಣುಗಳು ಪುಟ್ಟನ ಬೆನ್ನಟ್ಟಿಹೋದವು ಪುಟ್ಟನ ಕೈಯಲ್ಲಿ ಕಡಿಮೆಯಿರುವ ಒಂದು ರೂಪಾಯಿಯನ್ನು ಹುಡುಕುತ್ತಾ.ಶಾಂತಲಾ ಭಂಡಿhttp://www.blogger.com/profile/00119083151368093886noreply@blogger.comtag:blogger.com,1999:blog-5495085842856428066.post-85333165082026621102008-05-08T09:35:00.000-07:002008-07-07T17:31:38.435-07:00ಇರುವುದೆಲ್ಲವ ಬಿಟ್ಟು.......ಯಾರಲ್ಲೋ ಜನನ, ಎಲ್ಲೊ ಇರುವ ಯಾರಿಗಾಗಿಯೋ ಕಾದು, ಎಲ್ಲೋ ಸೇರಬೇಕಾದವರು ಮತ್ತೆಲ್ಲೋ ಸೇರಿ, ಯಾರೋ ತಿಳಿಯದವರೊಬ್ಬರಿಗಾಗಿ ಯಾರೆಂದೂ ಅರಿಯದ ಯಾರ್ಯಾರೋ ನಡುವೆ ಯಾಂತ್ರಿಕ ಉಸಿರಾಟದೊಂದಿಗಿನ ಪ್ರಶ್ನಾರ್ಥಕ ಬದುಕು.

ನಿಂತು ನಿಂತು ಸೋತು ಸೋರಿ ಸೊರಗಿ ಇಂಗಿ ನೆಲವ ತಣಿಸಲಿದ್ದ ನೀರು ಭರಭರನೆ ಎಣೆಯಿಲ್ಲದೆ ಧುಮುಕುವ ಮಳೆಯೊಟ್ಟಿಗೆ ಸಾಗಿ ಸಾಗರ ಸೇರಿ ಬಯಲೊಳಗೆ ನಿರಾಳವಾಗಿ ಹರಿದು ಇಂಗಲಿದ್ದ ನೀರು ಸಾಗರದಾಳದಿ ಉಸಿರುಗಟ್ಟಿ ಕೊನೆಯುಸಿರೆಳೆಯಬಹುದೇ? ಸಾಗರದೊಟ್ಟಿಗೆ ಬೆಸೆದುಹೋಗಿ ಹೊಸಜನ್ಮತಳೆದು ನಿರಂತರ ಅಲೆಯಾಗಬಹುದೇ? ಎಲ್ಲೆಲ್ಲೂ ಪ್ರಶ್ನೆಗಳು, ಪ್ರಶ್ನಾರ್ಥಕ ಬದುಕು.

ಮರುಳುಮನಸು, ಕ್ಷಣಕೊಬ್ಬರ ನೆನಪು, ಕ್ಷಣದಲ್ಲಿ ನೆನೆದವರ ಕಾಣುವ ಹಂಬಲ, ಕಂಡೊಡನೆ ಇನ್ನೊಬ್ಬರ ನೆನಪು, ಕಾಣುವ ಹಂಬಲ. ಎದುರಿದ್ದವರ ಬೆಲೆ ಅರಿಯುವುದು ಇನ್ನಿಲ್ಲವಾದಾಗ. ಎಲ್ಲರೂ ಬೇಕು ಇಲ್ಲವಾದಾಗ. ಯಾರೂ ಬೇಡವಾಗುತ್ತಾರೆ ಎಲ್ಲರೂ ಇರುವಾಗ. ಇನ್ನೊಮ್ಮೆ ಬೇಕಾಗುತ್ತಾರೆ ಏನೂ ಇಲ್ಲವಾದಾಗ, ಯಾರೂ ಬೇಡವಾಗುತ್ತಾರೆ ಎಲ್ಲವೂ ಇರುವಾಗ, ಇನ್ನೊಮ್ಮೆ ಬೇಕಾಗುತ್ತಾರೆ ಏನೂ ಇಲ್ಲವಾದಾಗ! ಬದುಕು ಪ್ರಶ್ನಾರ್ಥಕವಾದಾಗ. ಹುಚ್ಚುಮನಸ್ಸು ಹುಚ್ಚು ಆಸೆಗಳ ಶಿಖರವೇರುತ್ತದೆ. ಯಾಕಾಗಿ? ಪ್ರಶ್ನೆ ಮತ್ತೊಂದು. ಹುಚ್ಚುಮನಸ್ಸು ಹುಚ್ಚಿನ ಶಿಖರ ಕಾಣುತ್ತದೆ, ಅಲ್ಲಿಂದ ನೆಗೆವ ಕನಸು ಕಾಣುತ್ತದೆ, ಕನಸಿನಲ್ಲೆ ಕೊನೆಕಾಣುತ್ತದೆ, ನನಸುಗಳೆಲ್ಲ ಶಿಖರಕ್ಕಿಂತಲೂ ತುತ್ತತುದಿಯಲ್ಲಿ ಕಾಣಿಸುತ್ತಲಿರುತ್ತವೆ. ಮತ್ತೊಮ್ಮೆ ಹತ್ತಿರವಾದಂತೆ ಭಾಸ. ಬೆನ್ನಟ್ಟಿ ಗಾಳಿಯಲ್ಲಿ ಓಡುತ್ತದೆ ನನಸಿನ ಬೆನ್ನು ಹತ್ತುವ ಅತಿರೇಕ ಹುಚ್ಚು.

ಹಿತ್ತಲಿನ ಗಿಡದ ಹಸಿರೆಲೆ ನಗುತ್ತದೆ ಯಾರನ್ನು ನೋಡಿ? ಯಾರನ್ನೂ ನೋಡಿ ನಗುವುದಿಲ್ಲ, ಎಲ್ಲ ಭ್ರಮೆ. ಯಾರಿಗಾಗಿಯೂ ಯಾರೂ ಯಾರೊಂದಿಗೂ ನಗುವುದಿಲ್ಲ. ಅವರಿಗಾಗಿ ಅವರು ನಗುತ್ತಾರೆ, ಉಸಿರಾಡುತ್ತಾರೆ, ಕೊನೆಯಲ್ಲಿ ಯಾರಿಗಾಗಿಯೋ ಯಾರೂ ಸಾಯುವುದಿಲ್ಲ. ಎಲ್ಲ ಅವರವರಿಗಾಗಿ ಹೊರತು ಪರರಿಗಲ್ಲ. ನೋವಿನ ಕಾಳನ್ನೇ ಹೆಕ್ಕಿ ಹೆಕ್ಕಿ ಉಣ್ಣುವ ಹಕ್ಕಿಗೆ ಸಾವಿನಲ್ಲೂ ಇರುವುದಿಲ್ಲವೇನೋ ಸುಖ. ಸಾವು? ಯೋಚನೆ ಇನ್ನಷ್ಟು. ಹೌದು, ಸತ್ತಾಗ ಯಾರ್ಯಾರು ಸಿಗಬಹುದು? ಸಾವಿನೊಳಗೆ ಮತ್ತೊಂದು ಸಾವಿದ್ದರೆ? ಆಗ ಸತ್ತರೂ ಮತ್ತೆ ಬದುಕಿದಂತಲ್ಲವೆ? ಸತ್ತವರಿಗಾಗಿ ಸಾವ ಕಂಡವರು ಸುಖದಲ್ಲಿ ಮೆರೆಯುತ್ತಿರಬಹುದೆ? ಸತ್ತವರಿಗಾಗಿ ಸಾವ ಕಂಡವರು ಸೇರಬೇಕಾದವರನ್ನು ಸೇರಿರಬಹುದೆ? ತಿಳಿಯನ್ನೆಲ್ಲ ಸುರುಳಿ ಸುರುಳಿಯಾಗಿ ಕಲಕಿಕೊಳ್ಳುತ್ತದೆ ಮರುಳು ಮನಸ್ಸು.

ಹುಚ್ಚುಮನಸ್ಸು ಕೈಯಿಂದ ಬರೆಸುತ್ತದೆ. ಕೈ ಬರೆಯುವುದರೊಳಗೆ ಮನಸು ಮತ್ತೇನನ್ನೋ ಯೋಚಿಸಿ ಕೈ ಬರೆಯುತ್ತಲಿರುವುದನ್ನೇ ಮರೆತು ಯೋಚಿಸುತ್ತದೆ. ಆದರೂ ಕೈ ಕಾರ್ಯ ನಿರ್ವಹಿಸುತ್ತಲೇ ಇರುತ್ತದೆ, ಎಲ್ಲವೂ ವಿಪರ್ಯಾಸವೆನಿಸಿ ಬಿಡುತ್ತದೆ. ಓದಿದಾಗ "ಹುಚ್ಚು ಬರಹಗಳು" ಎದ್ದು ಕಂಡಾಗ ನಗುತ್ತದೆ ಮರುಳು ಮನಸ್ಸು. ಒಮ್ಮೆ ಹುಚ್ಚು ಮನಸ್ಸೇ ನೇರ ಹಾಳೆಯ ಮೇಲೆ ಬರೆದಿದ್ದರೆ! ಒಂದು ನಗುವಿನೊಂದಿಗೆ ಹಲವು ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ.

ನಿನ್ನೆ ಕಂಡವರನ್ನೆ ನಾಳೆ ಕಾಣಬಯಸುವುದು ಮರುಳು ಮನಸ್ಸು. ಬೇರೊಬ್ಬರನ್ನು ಕಾಣಿಸುವುದು ವಿಧಿಯ ವಾಸ್ತವತೆ. ನಿನ್ನೆ ಇದ್ದವರು ಇಂದಿಲ್ಲ. ಇಂದಿದ್ದವರು ನಾಳೆಯಿಲ್ಲ. ನಾಳೆ ಕಾಣುವವರು ಹಿಂದೆ ಕಂಡವರೇ ಆಗಿರುವುದಿಲ್ಲವಲ್ಲ! ಹೋಗಿ ಬರುತ್ತೇನೆ ಎನ್ನುವಾಗ ಅಳುತ್ತದೆ ಹುಚ್ಚು ಮನಸ್ಸು. ನಗುತ್ತಿರುವ ಇಂದಿನ ಮನಸ್ಸು ‘ಅಳುವೆನ್ನುವುದಿದೆ’ಯೆನ್ನುವುದನ್ನೇ ಮರೆತು ನಗುತ್ತದೆ. ನಾಳೆಯನ್ನೆಲ್ಲ ನಿನ್ನೆಯನ್ನಾಗಿಸುವ ಇಂದಿನ ಇಂದು ನಕ್ಕ ಮನಸುಗಳೆಲ್ಲ ನಗುವುದು ದುಗುಡ ಮರೆಯುವುದಕ್ಕಾಗಿಯೇನೋ ಎನಿಸಿಬಿಡುತ್ತದೆ. ನಾಳೆಯ ಗಂಭೀರತೆಗೆ ಕಾಲಿಡುವಾಗಲೂ ನಗುತ್ತ ಒಳಗೊಳಗೆ ಅಳುತ್ತದೆ ಮರುಳು ಮನಸ್ಸು. ತನ್ನ ಗೂಡಿಗೆ ತಾನು ತೆರಳುವಾಗಲೂ ‘ಹೋಗಿ ಬರುತ್ತೇನೆ’ಎನ್ನುವಾಗ ಅಳುತ್ತದೆಯೇಕೆ ಹುಚ್ಚು ಮನಸ್ಸು!
ಬದುಕೆಂದರೆ ಇವಿಷ್ಟೇ ಆಗಿರಬಹುದೆ?

ಪ್ರಶ್ನೆಗಳೇ ಸುರಿಯುವಾಗ ಉತ್ತರಕ್ಕಾಗಿ ಏಕಾಂಗಿತನಕ್ಕೆ ಮೊರೆಹೊಕ್ಕುತ್ತದೆ ಮರುಳುಮನಸ್ಸು. ಅಲ್ಲಿ ಶೂನ್ಯವು ಮನದ ತುಮುಲಗಳಿಗೆ ಸ್ಪಂಧಿಸುತ್ತದೆ. ಜಗತ್ತಿನ ಜನರಲ್ಲಿ ಒಬ್ಬರ ನೆನಪಾದರೂ ಸಾಕು, ಶೂನ್ಯದಿಂದ ಬಯಲಿಗೆ ಬೀಳುತ್ತದೆ ಮರುಳು ಮನಸ್ಸು. ಶೂನ್ಯದಲ್ಲಿ ಕಂಡಿದ್ದೂ ಸಹ ಬಯಲಲ್ಲಿ ಕಾಣದಾದಾಗ ಕೊರಗುವ ಹುಚ್ಚುಮನಸ್ಸುಗಳೇ ಹೆಚ್ಚು.

"ಇರುವುದೆಲ್ಲವ ಬಿಟ್ಟು ಇರದುದರೆಡೆ ತುಡಿಯುವುದೇ ಜೀವನ" ಇರುವುದೆಲ್ಲವ ಬಿಟ್ಟು ಇರದುದರೆಡೆ ತುಡಿಯುವುದು ಮನಸು ಕೂಡ ಎಂದೆನಿಸಿಬಿಡುತ್ತದೆ. ಅಲ್ಲವೆ? ಮತ್ತೆ ಪ್ರಶ್ನೆಯೇ ಪ್ರಶ್ನಾರ್ಥಕವಾದಾಗ ಬದುಕು ಪ್ರಶ್ನಾರ್ಥಕ.

[೧೯೯೭ರಲ್ಲಿ ಬರೆದದ್ದಂತೂ ನೆನಪು. ದಿನಾಂಕ ನೆನಪಿಲ್ಲ. ಮರಳುತ್ತಲಿರುವ ಇಂದಿಗೆ ಸೂಕ್ತವೆನಿಸಿದ್ದರಿಂದ ಹಾಳೆಯ ಧೂಳುಕೊಡವಿ ಅದರಲ್ಲಿದ್ದ ಅಕ್ಷರಗಳನ್ನು ಬ್ಲಾಗಲ್ಲಿ ಚೆಲ್ಲಿದ್ದೇನೆ]
{ನಾ ಬರೆದ ಅಕ್ಷರಗಳಿರುವ ಕಾಗದದ ತುಣುಕುಗಳನ್ನೂ(ಕೈಗೆ ಸಿಕ್ಕಷ್ಟವುಗಳನ್ನು) ಮಮತೆಯಿಂತ ಜೋಪಾನ ಮಾಡಿದ ಅಪ್ಪ-ಅಮ್ಮರಿಗೆ ನಾ ಆಭಾರಿ}ಶಾಂತಲಾ ಭಂಡಿhttp://www.blogger.com/profile/00119083151368093886noreply@blogger.comtag:blogger.com,1999:blog-5495085842856428066.post-90087054769681104552008-03-20T15:51:00.000-07:002008-07-07T17:14:26.038-07:00ಮರಳುವ ಮೊದಲುನಾ ಕಲಿತ ವಿಶ್ವವಿದ್ಯಾಲಯದ ನೆನಪು ಇಂದು ಮರುಕಳಿಸುತ್ತಿದೆ. ಸುಂದರ ಮುಂಜಾವು. ತಿಳಿಗುಲಾಬಿ ಬಣ್ಣದ ಅಂಚಿಗೆ ಹಾಲಿನ ಬಣ್ಣದ ಮೈಯ್ಯುಳ್ಳ ಸೀರೆಯೊಂದನ್ನು ಕಷ್ಟಪಟ್ಟು ಸುತ್ತಿಕೊಂಡು ಹೊರಟಾಗ ಯಾವುದೋ ಕಂಪನ ಮೈಯನ್ನ ಆವರಿಸಿತ್ತು. ತಿರು ತಿರುಗಿ ನಕ್ಕ ಹಾಸ್ಟೆಲ್ ರೂಂ ಮೇಟ್ ಹೇಳಿದ್ದಳು "ಸಿಂಪಲ್ಲಾಗೇ ಸೆಳೆದುಬಿಡ್ತೀಯ" ಅಂತ ನಕ್ಕಿದ್ದಳು. ಅವಳನ್ನೊಮ್ಮೆ ಗುರಾಯಿಸಿ ‘ತಮಾಷೆ ಸಾಕು’ ಅಂತ ನಸುನಕ್ಕು ಸೆಮಿನಾರ್ ಬಗೆಗಿನ ನನ್ನ ಟೆನ್ಷನ್ ಅವಳೆದುರು ಹೇಳಿಕೊಂಡು ಸುಮ್ಮನೆ ನಡೆದಿದ್ದೆ.
ವಿಶ್ವವಿದ್ಯಾಲಯದಲ್ಲಿನ ಗೆಸ್ಟ್ ಹೌಸ್ ಪಕ್ಕದ ಕಾನ್ಫರೆನ್ಸ್ ಹಾಲ್ ಭಾರತದ ಸುಮಾರು ೬೦ ವಿಶ್ವವಿದ್ಯಾಲಯಗಳಿಂದ ನೆರೆದ ಭೂಗೋಳಶಾಸ್ತ್ರ ವಿಭಾಗದ ಮುಖ್ಯಸ್ಥರು, ವಿಧ್ಯಾರ್ಥಿಗಳಿಂದ ತುಂಬಿಕೊಂಡು ನಳನಳಿಸುತ್ತಿತ್ತು.
ನಮ್ಮ ವಿಶ್ವವಿಧ್ಯಾಲಯದಿಂದ ‘ಜ್ಯೂನಿಯರ್ ಜಿಯಾಗ್ರಫರ್’ ಅಂತ ಆಯ್ಕೆಯಾಗಿದ್ದ ನಾನು ಕಾನ್ಫರೆನ್ಸಿನ ಮೊದಲ ದಿನವಾದ ಅಂದು ಸೆಮಿನಾರ್ ಕೊಡುವುದಿತ್ತು. ಅದೆಷ್ಟೋ ದಿನಗಳಿಂದ ತಯಾರಿ ನಡೆಸಿಕೊಂಡಿದ್ದ ಸೆಮಿನಾರ್ ಅರ್ಧಗಂಟೆಯಲ್ಲಿ ಮುಗಿದೇ ಹೋಗಿದ್ದು ಮನ್ಸೆಲ್ಲ ಖಾಲಿ ಖಾಲಿ ಅನಿಸಿತ್ತಾದರೂ ‘ಹೇಗಿತ್ತೋ ಏನೋ’ ಎಂದು ಭಯವೂ ಸುತ್ತಿಕೊಳ್ಳುತ್ತಲಿತ್ತು. ಸೆಮಿನಾರ್ಗೆ ನನ್ನನ್ನು ಸಿದ್ಧಗೊಳಿಸಿದ ನನ್ನ ಪ್ರೀತಿಯ ಗುರುವರ್ಯರ ಕಣ್ಣಿನ ಪ್ರೀತಿಯನ್ನ ಅರಸಿ ಅವರು ಸ್ಟೇಜಿನ ಮೇಲಿದ್ದುದರಿಂದ ದೂರದಿಂದಲೆ ಮುಗುಳ್ನಗೆಯೊಂದರಿಂದ ವಂದಿಸಿ ಚಹದ ಕಪ್ ಒಂದನ್ನು ಕೈಯಲ್ಲಿ ಹಿಡಿದು ಕಾನ್ಫರೆನ್ಸ್ ಹಾಲ್ ಇಂದ ಹೊರಗೆ ಬಂದು ಮೆಟ್ಟಿಲೊಂದರ ಮೇಲೆ ಕುಳಿತೆ. ಅರ್ಧಗಂಟೆಕಾಲ ಕಟ್ಟಿಹೋದಂತಿದ್ದ ಉಸಿರಿಗೆ ಸ್ವಾತಂತ್ರ್ಯ ಸಿಕ್ಕಿತ್ತು .
ಆಗಲೇ ಅವನು ಬಂದು ಎಷ್ಟೋ ದಿನದ ಪರಿಚಯವೆಂಬಂತೆ ಪಕ್ಕಕ್ಕೆ ಕುಳಿತಿದ್ದ. "ಸೆಮಿನಾರ್ ಚೆನ್ನಾಗಿತ್ತು" ಅಂದ. ಉಸಿರು ತಾಕುವಷ್ಟು ಪಕ್ಕ ಬಂದು ಕುಳಿತಿದ್ದವನಿಗೆ ಉತ್ತರಿಸಲು ಸ್ವಲ್ಪ ಮುಜುಗರವಾಯ್ತಾದರೂ ಮುಗುಳ್ನಕ್ಕೆ. ಕೊಂಚ ಭಯ ಕೂಡ. ಆತ್ಮೀಯತೆ ಕೂಡ ಇಣುಕಲಿಲ್ಲ ಅವನು ನನಗೆ ತೋರಿಸಿದಷ್ಟು .ವಿಷಯವೆಂದರೆ ಅವನು ಭಾರತೀಯನಾಗಿರಲಿಲ್ಲ,

ತಾನು ಭೂಗೋಳಶಾಸ್ತ್ರ ವಿಷಯದ ರಿಸರ್ಚ್ ವಿಧ್ಯಾರ್ಥಿಯಾಗಿದ್ದು ನಾನಂದು ಸೆಮಿನಾರ್ ಕೊಟ್ಟ ವಿಷಯವೇ ಅವನ ರಿಸರ್ಚಿನ ವಸ್ತುವೆಂದೂ ತಿಳಿಸಿದ. ಆ ವಿಷಯದ ಅಧ್ಯಯನದ ಸಲುವಾಗಿ ಕಿರು ಅವಧಿಗಾಗಿ ತಾನು ಭಾರತಕ್ಕೆ ಬಂದಿರುವುದಾಗಿಯೂ ಹೇಳಿದನಲ್ಲದೆ ಅದೇ ವಿಷಯದ ಕುರಿತಾಗಿ ಇನ್ನಷ್ಟು ಮಾಹಿತಿ ನೀಡಿದ ಅವನ ಮಾತುಗಳಿಗೆ ಸ್ಪಂಧಿಸುವಷ್ಟು ಜ್ಞಾನ ನನ್ನದಾಗಿರಲಿಲ್ಲ. ಅಲ್ಲದೆ ಐದು ನಿಮಿಷಗಳ ಕಾಲ ಉಸಿರಾಡಿಕೊಳ್ಳಲು ಹೊರಬಂದವಳನ್ನು ಅವನು ಹದಿನೈದು ನಿಮಿಷಗಳ ಕಾಲ ಹೊರಗೆ ನಿಲ್ಲಿಸಿಬಿಟ್ಟಿದ್ದ. ಒಳಗೊಳಗೇ ಚಡಪಡಿಸುತ್ತಿದ್ದವಳನ್ನು ಅರ್ಥೈಸಿಕೊಂಡವನಂತೆ ಮುಗುಳ್ನಕ್ಕು ‘ಕಾರ್ಯಕ್ರಮದತ್ತ ತೆರಳೋಣ ಬಾ’ ಎಂದವನೇ ಕಾನ್ಫರೆನ್ಸ್ ಹಾಲ್ ಒಳಗೆ ನುಸುಳಿ ಮಾಯವಾಗಿದ್ದ.
ನಂಬಿದರೆ ನಂಬಿ, ಬಿಟ್ಟರೆ ಬಿಡಿ ಅಂತೂ ಹತ್ತು ದಿನಗಳ ವರ್ಕ್ ಶಾಪ್ ಮುಗಿಯುವುದರೊಳಗೆ ಹಿಂದೆಯೇ ಸುಳಿದಾಡುತ್ತ ಮುಗುಳ್ನಗುತ್ತಿದ್ದವನು ತನ್ನ ಮನದಿಚ್ಛೆಯನ್ನೆಲ್ಲ ಮುಂದಿಟ್ಟು ಕ್ರಮೇಣ ಮನವನಾವರಿಸಿಕೊಂಡುಬಿಟ್ಟಿದ್ದ. ಆರು ತಿಂಗಳು ಕಾಲ ನಮ್ಮ ಡಿಪಾರ್ಟ್ ಮೆಂಟಿನಲ್ಲಿಯೇ ರಿಸರ್ಚ್ ಸಲುವಾಗಿ ನಿಂತಿದ್ದ. ನನ್ನಿಷ್ಟದ ವಿಷಯದ ಬಗ್ಗೆ ಅವನಿಗಿರುವ ಅತೀವ ಜ್ಞಾನ ಹಾಗೂ ಆಸಕ್ತಿ ನನ್ನನ್ನು ಅವನೊಂದಿಗೆ ಕಟ್ಟಿಹಾಕಿಬಿಟ್ಟಿತ್ತು. ನನ್ನ ಜಾತಿಯ ಯಾವ ಹುಡುಗನಿಗೆ ಇವನು ಕಮ್ಮಿ? ಅಂತನಿಸಿಬಿಟ್ಟಿದ್ದ. ಎಲ್ಲಕ್ಕೂ ಮಿಗಿಲಾಗಿ ಅವನ ಸರಳತೆ, ಒಳ್ಳೆಯತನ ನನ್ನನ್ನು ಪೂರ್ತಿ ನುಂಗಿಕೊಂಡುಬಿಟ್ಟಿತ್ತು.
ಮನೆಯಲ್ಲಿ ವಿಷಯವಿಟ್ಟೆ ಸಂಪೂರ್ಣ ನಿರ್ಧಾರ ತೆಗೆದುಕೊಳ್ಳುವುದರೊಳಗೆ. ಮನೆಯಲ್ಲಿ ಯಾರೂ ಒಪ್ಪಲಿಲ್ಲ ಮಾಂಸ ತಿನ್ನುವ ಅದರಲ್ಲೂ ಪರದೇಸಿಗನೊಬ್ಬನನ್ನು ಮದುವೆಯಾಗಲು.
ಅವನು ತನ್ನ ದೇಶಕ್ಕೆ ಹೊರಟು ನಿಂತಾಗ ನಾನವನೊಂದಿಗೆ ಹೊರಟು ನಿಂತದ್ದರಲ್ಲಿ ಆಶ್ಚರ್ಯವೇನೂ ಇರಲಿಲ್ಲ. ಅವನೂ ಸಹ ನನ್ನನ್ನು ಬಿಟ್ಟು ಹೋಗಲಾರೆನೆಂದು ಹಠ ತೊಟ್ಟಿದ್ದ. ಏನೇನೋ ಕೊಸರಾಡಿ ಪಾಸ್ಪೋರ್ಟ್ ಅಲ್ಲಿ ಅವನ ಬಾಳಸಂಗಾತಿಯೆನಿಸಿಕೊಂಡ ನಾನು ವಿಸಾ ಪಡೆದವಳು, ನನ್ನವರು ಎಂಬ ಎಲ್ಲರನ್ನು ತೊರೆದು ಅವನೊಂದಿಗೆ ಹಾರಿ ಅವನ ನೆಲದಲ್ಲಿ ಬಂದಿಳಿದಿದ್ದೆ.

ಈ ಮಾತಿಗೆ ಎರಡು ವರ್ಷಗಳೇ ಸಂದುಹೋದವು. ಇಂದು ಬೆಳಿಗ್ಗೆ ಅವನಿಂದ ಡಿವೋರ್ಸ್ ಸಿಕ್ಕಿತು. ಕಾರಣ ನೀವಂದುಕೊಂಡಂತೆ ಅವನಿಗೆ ಇನ್ನೊಬ್ಬಳು ಗರ್ಲ್ ಫ್ರೆಂಡ್ ಇಲ್ಲ. ಭಾರತೀಯಳಾಗಿ ಹೇಳಬೇಕೆಂದರೆ ಅವನು "ಶ್ರೀರಾಮಚಂದ್ರ."

ಮೊದ ಮೊದಲು ಪ್ರೀತಿಯೆದುರು ಕೊರತೆಗಳ್ಯಾವುವೂ ಕಾಣಿಸಲಿಲ್ಲ. ಜೀವನ ನಾನಂದುಕೊಂಡಷ್ಟು ಕಷ್ಟವಿಲ್ಲವೆನಿಸಿದ್ದಂತೂ ನಿಜ. ಆದರೆ ನಿಜವಾದ ಕೊರತೆಯೊಂದಿತ್ತು ನನಗೆ ನಾನೇ ತಂದಿತ್ತುಕೊಂಡಿದ್ದು, ನನ್ನ ಪ್ರೀತಿಯ ಕುಟುಂಬವನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದೆ, ಅವರೊಂದಿಗೆ ಫೋನಾಯಿಸಿ ಮಾತನಾಡುವ ನೈತಿಕ ಹಕ್ಕನ್ನೂ ಕಳೆದುಕೊಂಡಿದ್ದು ದಿನ ಕಳೆದ ಹಾಗೆ ಬೃಹದ್ ಕೊರತೆಯಾಗಿ ನನ್ನನ್ನ ನರಳಿಸತೊಡಗಿದ್ದು, ಎಷ್ಟೆಂದರೆ ಹುಚ್ಚಿಯಾಗಿಬಿಡುವಷ್ಟು.

ಕಾರಣಗಳು ವೈಯಕ್ತಿಕ. ಅವು ನಮ್ಮಿಬ್ಬರ ವೈಯಕ್ತಿಕ ಅಂತಲೂ ಅನಿಸೋಲ್ಲ. ನನ್ನೊಬ್ಬಳ ವೈಯಕ್ತಿಕ ಅನಿಸುತ್ತವೆ. ಅವನು ಇನ್ನೂ ನನ್ನನ್ನು ಆರಾಧಿಸುತ್ತಾನೆ ಅಂತ ಗೊತ್ತಿದೆ. ನನ್ನಲೂ ಅಷ್ಟೆ, ಗೋಪುರದಷ್ಟು ಪ್ರೀತಿಯಿದೆ ಅವನಿಗಾಗಿ. ಕಳಚಿರದ ಕೊಂಡಿಯನ್ನು ಕಡಿದುಕೊಂಡು ಬರಬೇಕಿದೆ.
ಅಪ್ಪ-ಅಮ್ಮನ ನೆನಪು ಬೆಳಕಿನ ಕಿರಣಗಳ ಜೊತೆ ಹುಟ್ಟಿಕೊಂಡರೆ ಚಂದ್ರ ಮಾಯುವತನಕವೂ ಮಾಗುವುದಿಲ್ಲ. ಸಂಜೆ ದೇವರಿಗೆ ನಾನಂಟಿಸಿದ ದೀಪ ಅವನು ಬಂದ ತಕ್ಷಣ ಅವನ ಕೈಲಿರುವ ಫೈಲು ಅಪ್ಪಳಿಸುವ ರಭಸಕ್ಕೆ ಮುರುಟಿ ಆರಿ ಹೋದ ಕಮಟು ನನ್ನೊಳಗಿಳಿದು ಮುಸು ಮುಸು ಅಳುತ್ತದೆ. ವಾರಾಂತ್ಯಗಳಲ್ಲಿ ಅವನ ತಂದೆ-ತಾಯಿಗಳ ಜೊತೆ ಅವರ ಮನೆಯಲ್ಲಿ ಕಳೆಯುವುದು ನರಕ ಅಂತ ನಾನೇನೂ ಹೇಳುತ್ತಿಲ್ಲ. ಮೀಟಿನ ಕಮಟು ನನ್ನ ತರಕಾರಿಗಳ ರುಚಿಯನ್ನೂ ನುಂಗಿ ವಾರಾಂತ್ಯ ಪೂರ್ತಿ ಉಪವಾಸ ನರಳುತ್ತೇನೆ. ಸದಾ ಊಟದ ತಟ್ಟೆಯೊಂದಿಗೆ ಚಾಕು-ಫೋರ್ಕುಗಳನ್ನು ನೋಡುವಾಗ ಅಜ್ಜನ ಊಟದ ಬಟ್ಟಲಿನ ಎಡಗಡೆಯಲ್ಲಿರುತ್ತಿದ್ದ ತೀರ್ಥದ ತಟ್ಟೆಚಮಚಗಳು ಕಣ್ಣೆದುರು ಬಂದು ಕಂಬನಿ ಹನಿಸುತ್ತವೆ.
`ಪ್ರೀತಿ ಗೆಲ್ಲುತ್ತದೆ' ಎಂಬ ಮಾತನ್ನು ನಂಬಿ ಎಲ್ಲರನ್ನು ತೊರೆದು ಬಂದಿದ್ದೆ. ಈಗನ್ನಿಸುತ್ತದೆ ಪ್ರೀತಿಯನ್ನು ಗೆದ್ದರೆ ಎಲ್ಲವನ್ನೂ ಸೋಲಬೇಕಾಗುತ್ತದೆ ಅಂತ.
ಅವನು ನನ್ನೊಡನೆ ಬರಲಾರ, ಅವನಿದ್ದರೆ ನನ್ನವರು ನನ್ನನ್ನು ಸುತಾರಾಂ ಸೇರಿಸೋಲ್ಲ. ಇದೇ ಕಾರಣಗಳಿಂದ ಹಿಂದೊಮ್ಮೆ ಹುಟ್ಟಿದ ಮಾತು ಇಂದು ಡಿವೋರ್ಸ್ ಅಲ್ಲಿ ಅಂತ್ಯಗೊಂಡಿತು. ಈಗೊಂತರ ಮನುಷ್ಯ ಮುಟ್ಟಿದ ಗುಬ್ಬಿಯ ಹಾಗಾಗಿ ಬಿಟ್ಟಿದ್ದೇನಾದರೂ ಮರಳಿ ಬಂದು ನನ್ನವರನ್ನೆಲ್ಲ ಕೂಡಿಕೊಳ್ಳುವ ತವಕ ಹೆಚ್ಚುತ್ತಿದೆ. ನನ್ನವರೆಲ್ಲ ನನ್ನ ಸೇರಿಸಿಕೊಂಡಾರು ಎಂಬೊಂದು ಚಿಕ್ಕ ಆಸೆಯಿದೆ. ಅವರನ್ನೆಲ್ಲ ಬರಸೆಳೆದು ಅಪ್ಪಿಕೊಂಡು ಕ್ಷಮೆಯಾಚಿಸಿ ಬಿಕ್ಕುವ ಕನಸೊಂದಿದೆ.
ನನ್ನ ನೆಲದಲ್ಲಿಯೇ ಹೋಗಿಳಿದು ಆ ಮಣ್ಣಿನಲ್ಲಿಯೇ ಮಲ್ಲಿಗೆ ಬಳ್ಳಿಯೊಂದನ್ನು ನೆಟ್ಟು ಹೂ ಬಿಡಿಸಿ ನನ್ನವರನ್ನೆಲ್ಲ ಕರೆದು ತೋರಿಸಿ ನಗುವ ಹಂಬಲ ವಿಪರೀತ ಕಾಡುತ್ತಿದೆ. ಎಷ್ಟೆಂದರೆ ನನ್ನ ಬದುಕಾದ ನನ್ನ ಡ್ಯಾನಿಯೊ ಎಂಬ ಮರುಳು ಹುಡುಗನನ್ನು ತೊರೆದು ಬರುವಷ್ಟು.

ಡಿವೋರ್ಸ್ ಸಿಕ್ಕ ಮೆಲೂ ಅವನು ನನ್ನನ್ನು ಕಾಡುವಂತೆ ನಿಟ್ಟುಸಿರುಬಿಡುತ್ತಿದ್ದಾನೆ. ಕೈಯೊಡ್ಡಿ ಬೇಡಿಕೊಳ್ಳುತ್ತಿದ್ದಾನೆ. ಕಣ್ನೋಟದಲ್ಲೇ ‘ಬಿಟ್ಟು ಹೋಗ್ತೀಯಾ?’ ಅಂತ ಗೋಗರೆಯುತ್ತಾನೆ.ನನ್ನನ್ನು ಅಲುಗಿಸಿ ಅಲುಗಿಸಿ ಕೇಳುತ್ತಾನೆ ‘ಬಿಟ್ಟು ಹೋಗುವಂಥ ತಪ್ಪು ನಾನೇನು ಮಾಡಿದ್ದೇನೆ ಹೇಳು, ತಿದ್ದಿಕೊಳ್ಳುತ್ತೇನೆ’ ಅಂತ. ಬಾಯಿಬಿಟ್ಟು ಹೇಗೆ ಹೇಳಲಿ ನಿನ್ನ ಬದುಕಿನ ರೀತಿ-ನೀತಿಗಳು ನಂಗಿಷ್ಟವಾಗ್ತಿಲ್ಲ’ ಅಂತ! ‘ಮಾಂಸ ತಿನ್ನೋದು ಡಿವೋರ್ಸ್ ಮಾಡುವಂಥ ತಪ್ಪಾ’ ಅಂತ ನನ್ನನ್ನ ಕೆಳಗಿಟ್ಟು ನೋಡಿದರೆ! ‘ನಂಗೆ ನನ್ನವರೆಲ್ಲರ ಜೊತೆಯಲ್ಲಿರಬೇಕೆನ್ನಿಸುತ್ತೆ, ಬರ್ತೀಯಾ?’ ಅಂತ ಮಾತ್ರ ಕೇಳಿ ಸುಮ್ಮನಾಗುತ್ತೇನೆ. ಕುಳಿತಲ್ಲೇ ಕೂರಲಾರದೇ ಚಡಪಡಿಸಿ ಕೈಯಲ್ಲಿನ ಫೈಲನ್ನೇ ಮುಖಕ್ಕೆ ಮುಚ್ಚಿಕೊಳ್ಳುತ್ತಾನೆ, ಹಾಗಾಗಿ ಅವನ ಕಣ್ಣೀರು ನನಗೆ ಕಾಣಿಸುತ್ತಿಲ್ಲ.
ಸಮಂಜಸ ಕಾರಣವೇ ಇಲ್ಲದಾಗ್ಯೂ ಸುಳ್ಳು ಕಾರಣ ನೀಡಿ ಡಿವೋರ್ಸ್ ಪಡೆವಾಗ ತಪ್ಪು ತನ್ನದಿದೆ ಅಂತ ನನಗಾಗಿ ಒಪ್ಪಿಕೊಂಡವನ ಮುಖ ಎದುರು ಬಂದು ನನ್ನ ಕೆನ್ನೆಗೇ ನಾನು ನಾಲ್ಕು ರಪ ರಪನೆ ಬಾರಿಸಿಕೊಳ್ಳುವಂಥ ಗಿಲ್ಟ್ ಕಾಡುತ್ತದೆ. ಅಲ್ಲೂ ನನ್ನ ಪರವಾಗಿದ್ದು ನನ್ನನ್ನು ತನ್ನೊಳಗೆ ಉಳಿಸಿಕೊಂಡವನು ಗ್ರೇಟ್ ಅನಿಸಿ ಅವನೊಳಗೆ ಹುದುಗಿ ಕಳೆದುಹೋಗೋಣವೆನಿಸಿದರೂ ನನ್ನೂರು ನನ್ನವರೆಲ್ಲ ಎದುರಿಗೆ ಬಂದು ಕೈಗಳನ್ನು ಚಾಚಿ ನನ್ನನ್ನು ತಮ್ಮೆಡೆಗೆ ಬಾಚಿಕೊಂಡಂತೆ ಭಾಸವಾಗುತ್ತದೆ.

ತೆರಳಲಿದ್ದೇನೆ ನನ್ನ ನಾಡಿಗೆ.ಇದೇ ತಿಂಗಳು ೨೮ನೆಯ ತಾರೀಖಿನಂದು ನಿತ್ಯವೂ ನನ್ನ ದೇಶಕ್ಕೆ ಮರಳುವ ವಿಮಾನವೊಂದು ನನಗಾಗಿ ಕಾಯುತ್ತಿರುತ್ತದೆ ಎನಿಸುತ್ತಿದೆ.

ಸಮಯಗಳ ಅಂತರದಲ್ಲಿ ಕಳೆದುಕೊಂಡ ನನ್ನವರೆಲ್ಲರೂ ನನಗಾಗಿ ಕಾಯುತ್ತಿದ್ದಾರೆ. ಎರಡು ವರ್ಷಗಳ ಮೇಲೆ ಅಪ್ಪ-ಅಮ್ಮರೊಂದಿಗೆ ನಿನ್ನೆ ಮಾತಾಡಿದೆ.
ಅಮ್ಮ ಮಾಡುವ ತಂಬುಳಿ, ಅಪ್ಪನೊಂದಿಗೆ ಹಸಿರು ಹಾಸುಗಳಲ್ಲಿ ಸುತ್ತಾಟಗಳ ಕನವರಿಕೆಯಲ್ಲಿ ನನ್ನ ಹುಡುಗನ ಮಾತುಗಳನ್ನು ಮುಳುಗಿಸಿ ಕೇಳಿಯೂ ಕೇಳದವಳಂತೆ ನಾ ಬೆಳೆದ ಮಣ್ಣಿನ ವಾಸನೆಯನ್ನರಸಿ ಹೊರಟು ಬಿಡುತ್ತಿದ್ದೇನೆ. ಕೊನೆಯದಾಗಿ ಅವನಿಗೂ ಹೇಳಿದ್ದೇನೆ.
"ನನ್ನೊಡನೆಯೇ ಬದುಕುವಾಸೆಯಿದ್ದರೆ ನನ್ನ ನೆಲಕ್ಕೇ ಬಾ, ನಾ ಮಲ್ಲಿಗೆ ಬಳ್ಳಿ ನೆಡಲಿದ್ದೇನೆ ಅಲ್ಲಿ, ನೀನು ನೀರೆರೆಯಬಹುದು. ನೆಟ್ಟು ಹೂ ಬಿಟ್ಟಿದ್ದನ್ನು ನೋಡಿ ಇಬ್ಬರೂ ನಗಬಹುದು. ನಾವು ನಕ್ಕಿದ್ದನ್ನು ನೋಡುತ್ತ ನೋಡುತ್ತ ಅಪ್ಪ-ಅಮ್ಮ ಕ್ರಮೇಣ ನಿನ್ನ ಒಪ್ಪಿಕೊಳ್ಳಬಹುದು" ಅಂತ. ಅಷ್ಟೇ ಅಲ್ಲ ಹೀಗೂ ಹೇಳಿದ್ದೇನೆ " ನಂಗೆ ನೀನಿಲ್ಲದೆ ಬೇರೆ ಬದುಕಿಲ್ಲ ಕಣೋ...." ಅಂತ.
‘ಭೂಮಿ ಗುಂಡಗಿದೆ, ಹೇಗೆ ಬಂದರೂ ಸಿಕ್ಕೇ ಸಿಗುತ್ತೇವೆ ಇನ್ನೊಮ್ಮೆ’ ಅಂತ ನಾ ಹೇಳಿದರೆ "Nope, Earth is Geoid " ಅಂತ ಹೇಳಿಕೊಂಡು ಯಾವತ್ತಿನಂತೆ ನಗಲಾರದ ಸ್ಥಿತಿ ಇಬ್ಬರದೂ.

ನಾ ನೆಟ್ಟ ಬಳ್ಳಿಯ ಮಲ್ಲಿಗೆ ಕಂಪು ಅವನನ್ನು ಆವರಿಸಿ ನನ್ನೆಡೆಗೆ ಎಳೆದುಕೊಂಡು ಬರಬೇಕು ಅಂಥ ಮಲ್ಲಿಗೆಬಳ್ಳಿಯೊಂದನ್ನು ನಮ್ಮನೆಯ ಅಂಗಳದಲ್ಲಿ ಬೆಳೆಸುತ್ತೇನೆ, ಆಗವನು ನನ್ನನ್ನು ಹುಡುಕಿಕೊಂಡು ನಮ್ಮನೆಯ ಅಂಗಳದಲ್ಲಿ ನಿಲ್ಲುತ್ತಾನಲ್ಲವಾ?

ಪ್ಯಾಕಿಂಗ್ ಮಾಡುತ್ತ ಪ್ರತಿ ಬಟ್ಟೆಯ ಮಡಿಕೆಯೊಳಗೂ ಅವನಿಗಾಗಿ ಒಂದೊಂದು ಕಂಬನಿಯನ್ನು ಮುತ್ತಂತೆ ಇಟ್ಟು ಬಟ್ಟೆ ಬರೆಗಳನ್ನ ಪ್ಯಾಕ್ ಮಾಡುತ್ತಲಿದ್ದೇನೆ. ಅವನಿಷ್ಟದ ಹಾಲಿನ ಬಣ್ಣದ ಗುಲಾಬಿ ಅಂಚಿನ ಸೀರೆಯೊಂದನ್ನು ಅವನಿಗಾಗಿ ಬಿಟ್ಟು ಹೋಗುತ್ತಿದ್ದೇನೆ. ಅವ ಕೊಡಿಸಿದ ತಂಪು ಬಣ್ಣದ ಟೀ ಶರ್ಟನ್ನೂ ಹಾಗೂ ಅವನದೊಂದು ನೀಲಿಯ ಶರ್ಟನ್ನು ಮರೆಯದೇ ಬ್ಯಾಗಲ್ಲಿ ಸೇರಿಸಿಕೊಂಡಿದ್ದೇನೆ.
ತುಂಬಿದ ಬ್ಯಾಗುಗಳೊಂದಿಗೆ ಖಾಲಿ ಖಾಲಿ ಭಾವಗಳನ್ನು ಹೊತ್ತು ನಡೆಯುತ್ತಿರುವ ನನ್ನನ್ನವನು ಹಿಂಬಾಲಿಸಿ ಬರಲೆಂದು ಪ್ರಾರ್ಥಿಸಿಕೊಳ್ಳುತ್ತಾ...ನನ್ನ ನೆಲದೆಡೆಗೆ ಮುಖ ಮಾಡುತ್ತಿದ್ದೇನೆ.

[ ಹೋಗಿಬರುತ್ತೇನೆ. ತಿಂಗಳುಗಳ ಕಾಲ ನನ್ನ ಬ್ಲಾಗ್ ಮರಿಯನ್ನು ಅನಾಥವಾಗಿಸದೇ ಕಾಯ್ದುಕೊಳ್ಳುವ ಜವಾಬ್ದಾರಿಯನ್ನು ನಿಮ್ಮೆಲ್ಲರ ಮೇಲಿರಿಸಿ ಮರಳುತ್ತಿದ್ದೇನೆ.]ಶಾಂತಲಾ ಭಂಡಿhttp://www.blogger.com/profile/00119083151368093886noreply@blogger.comtag:blogger.com,1999:blog-5495085842856428066.post-89397751407588735562008-03-04T20:55:00.000-08:002008-07-07T17:10:52.221-07:00ಅಪ್ಪ ಹುಟ್ಟಿದ ದಿನಕೆ"ಕರಾಗ್ರೇ ವಸತೇಲಕ್ಷ್ಮೀ"ಗುಣುಗುಡುತ
ಅರಳಿದ ಬೆರಳ ನಡು ಹಸ್ತ ದಿಟ್ಟಿಸಿದೆ
ಹಸ್ತದ ಚಿತ್ರದಲಿ ಅಮ್ಮಗೇನೋ ಸಡಗರವು
ಇಲ್ಲವಂತವಳಿಗೆ ಪುರುಸೊತ್ತು
ಆಡಲು ನಾಲ್ಕು ಹೆಚ್ಚುಳಿದ ಮಾತು
ಕಾರಣವೇನಿಹುದು ಕಣ್ಣರಳಿ ಕೇಳಿದೆ
ಅಮ್ಮ ನುಡಿಯುತ್ತಾಳೆ"ಏನಿಲ್ಲ ಬಿಡು.."
ಮರುಪ್ರಶ್ನೆಯಡಿ ಮರೆಸಲೆತ್ನಿಸುತ್ತಾಳೆ
"ಹೌದೇನೆ ಕವನವಿಹುದಂತೆ ‘ಕನ್ನಡಪ್ರಭ’ದಲ್ಲಿ!
ಅಪ್ಪ ಓದಿಹರಂತೆ ನಾನೂ ಓದಿಬರಲೇನೇ?"
ಪುನಃ ಪುಸಲಾಯಿಸೆ ಪುನರಾವರಿಪ ಪ್ರಶ್ನೆ
ಆದರಮ್ಮನದು ಅದೇ ಉತ್ತರ
"ಏನಿಲ್ಲ ಬಿಡು ಏನಿಲ್ಲ ಬಿಡು"

ದೇವನೆದುರು ನಾಲ್ಕೆಳೆ ಹೆಚ್ಚೇ ರಂಗೋಲೆ
ತುಪ್ಪದ ದೀಪಗಳೇಕಿಂದು ಇಷ್ಟು ನಗಬೇಕು!
ಗ್ಯಾಸೊಲೆಯೂ ಕೆಂಪಗೆ ನಲಿಯುತ್ತ ಬ್ಯುಸಿ
ಅಡುಗೆ ಮನೆ ಹರಡಿ ಸಿಹಿಸಿಹಿ ಪರಿಮಳವು
ಸಾರುತಿವೆಯಲ್ಲ ಸರ್ವ ಸಂಭ್ರಮವನ್ನು
ಇನಿತು ಸುಳಿವ ನೀಡುತ್ತಿಲ್ಲಯಾರೂ !
ನನಗಿರದ ಸಂಭ್ರಮವು ಇವಕೆ ಏನು?

ಅಮ್ಮನೆದುರಿಟ್ಟೆ ಹುಸಿಮುನಿಸನೊಂದಿಷ್ಟು
ಅಮ್ಮ ನಕ್ಕಳು ಒಗಟ ಬಿಡಿಸಿಟ್ಟು
"ಅವನೊಡನೆ ಅಲ್ಲವೇ ಆಡಿ ಬೆಳೆದದ್ದು!
ಸೋದರ ಸೊಸೆ ನಾ ಸೊಸೆಯಾಗಿ ಬಂದದ್ದು
ಹಾಗೇ ಕಣೇ ಅಂದವಗೆ ನಾ ಮಡದಿಯಾಗಿದ್ದು
ಇಂದು ಶಿವರಾತ್ರಿ ಅವರು ಹುಟ್ಟಿದ ದಿನವು
ಅದಕೇ ನೋಡು ನನಗಿಷ್ಟು ಸಂಭ್ರಮವು!
ಇಟ್ಟೆ ದೇವಗೆ ಎರಡೆಳೆ ಜಾಸ್ತಿ ರಂಗೋಲೆ
ದೀಪಕ್ಕಿಷ್ಟೇ ಇಷ್ಟು ಜಾಸ್ತಿ ತುಪ್ಪ
ನಿನಗೊಂದಿಷ್ಟು ಬೇಡವೇ ಸಿಹಿಪಾಕ ಕೂಡ
ಅವಗಾಗಿ ನಾನಿಷ್ಟೂ ನಗಬಾರದೇನೆ?
ಇರು ಇಷ್ಟು ಕೆಲಸ ಜಾಸ್ತಿಯಿಹುದಿಂದು
ಕೋರಿಬರುವೆನು ಬೇಗ ಶುಭಾಶಯವ "ನೆಂದು
ಭರದಿ ನಡೆದಳು ಅಮ್ಮ ಅಪ್ಪನನ್ನರಸಿ

ಅಮ್ಮ ನುಡಿಯುತಲಿರೆ ಅಲವತ್ತುಕೊಂಡೆ
ಮರೆಯಿಸುವ ಮರೆವಿಗೆ ಮರುಗಿಕೊಂಡೆ
"ಅಯ್ಯೋ ಅಪ್ಪಾ... ಕ್ಷಮಿಸಿಬಿಡಿ
ಡೇಟುಗಳ ಕಾಲದಲಿ ತಿಥಿ ಲೆಕ್ಕದರಿವಿಲ್ಲ
ತಿಥಿಲೆಕ್ಕವನು ನೀವು ಕಲಿಸಿಕೊಡಲೇ ಇಲ್ಲ
ಇಗೊಳ್ಳಿ ಹುಟ್ಟುಹಬ್ಬಕೆ ಶುಭಾಶಯ
ಬೊಗಸೆಯಿಂದ ವಾಪಸ್ಸು ಮುಷ್ಠಿ ಪ್ರೀತಿ
ನೀವಿತ್ತಿದ್ದರಲ್ಲಿಯೇ ನಿಮಗಿಷ್ಟು
ಇಗೊಳ್ಳಿ ಆ ಕೆನ್ನೆಗೂ ಮುತ್ತು
ಕೊಡುವಿರಲ್ಲ ಅದರೊಳಗೆ ಒಂದು ವಾಪಸ್ಸು ?"

( ಬದುಕಿನ ಹೋರಾಟದ 53ನೇ ವರ್ಷಕ್ಕೆ ಕಾಲಿಟ್ಟ ನನ್ನ ತಂದೆಯವರ ಹುಟ್ಟುಹಬ್ಬದ ಶುಭಾಶಯವನ್ನು ಈ ವರ್ಷ ಅದೆಷ್ಟೋ ಮೈಲುಗಳಾಚೆಯಿಂದ ಹೀಗೆ ಕೋರುತ್ತಿದ್ದೇನೆ)ಶಾಂತಲಾ ಭಂಡಿhttp://www.blogger.com/profile/00119083151368093886noreply@blogger.comtag:blogger.com,1999:blog-5495085842856428066.post-75919131851401844202008-02-22T16:41:00.000-08:002008-07-07T17:14:26.038-07:00ಮರುಗುವ ಮುಸ್ಸಂಜೆಗಳುತಿಳಿಯಿಂದ ಜಾರಿ ಗಾಢವಾಗಿ ಹಬ್ಬಿಕೊಳ್ಳುವ ಸುಂದರ ಶ್ಯಾಮಲ ಸಂಜೆಗಳಿದ್ದವು ಅಂದು ನನ್ನ ಬೊಗಸೆಯಲ್ಲಿ. ಶ್ಯಾಮು ಎಂಬ ಸುಂದರ ಹೆಸರು. ನೆನಪಾಗುವುದಿಷ್ಟೆ. ಶ್ಯಾಮು. ಶ್ಯಾಮು ನಿಂಗೆ ನೆನಪಿದೆಯಾ? ನಮ್ಮಿಬ್ಬರ ಹೆಸರನ್ನ ಬದಲಿ ಮಾಡಿ ಕರೆಯದವರ್ಯಾರಾದರೂ ಇದ್ರಾ? ನನ್ನ ಹೆಸರು ನಿನಗೆ, ನಿನ್ನ ಹೆಸರು ನನಗಾಗುವುದು ನಮಗೂ ಸಾಮಾನ್ಯವಾಗಿಬಿಟ್ಟಿತ್ತು ಅಲ್ವಾ? ಇವತ್ತಿಗೂ ಪ್ರತಿ ಸಂಜೆಯಲಿ ಅರಳುವ ಶ್ಯಾಮಲ ವರ್ಣದಲ್ಲಿಯೂ ನನ್ನ ಶ್ಯಾಮು ಬೇಕಿತ್ತು ಅನಿಸುತ್ತೆ. ಆಗ ಶ್ಯಾಮುವಿನ ಮುಗುಳ್ನಗೆಯೊಂದಲ್ಲಿ ತೇಲಿ ಬಂದು ನನ್ನ ಆಲಂಗಿಸಿ ಮಾಯವಾಗುತ್ತೆ. ಪ್ರತಿ ಸಲ ಅವನೊಡನೆ ಜಗಳವಾಡಿದಾಗಲೂ ನಂಗೆ ನಿನ್ನ ನೆನಪಾಗತ್ತೆ ಕಣೆ. ನಿನ್ನ ನೆನಪಾಗಿದ್ದಕ್ಕೆ ಅಳು ಬರುತ್ತೆ. ಅಲ್ಲಿ ನಾನು ಸೋತಿದ್ದಕ್ಕಲ್ಲ. ನನ್ನ ಪ್ರತಿ ಸಾಲುಗಳಲ್ಲ್ಲಿ ನೀ ನಕ್ಕಂತೆ ಒಮ್ಮೊಮ್ಮೆ ಅನಿಸುತ್ತೆ. ನಂಗಾಗ ಅಳು ಬರುತ್ತೆ. ಯಾಕೆಂದ್ರೆ ನನ್ನ ಮೇಲಿನ ಪ್ರೀತಿ ನಿನ್ನನ್ನ ಸೋಲಿಸುತ್ತಿತ್ತು. ನಾನು ಗೆದ್ದೆ ಅಂದ್ಕೊಂಡು ಜಂಭದಿಂದ ಬೀಗ್ತಾ ನಿನ್ನ ಕಡೆ ನೋಡ್ತಿರ್ಲಿಲ್ಲ. ಅಂತದೇ ಸಂಜೆಯೊಂದು ಬೇಕು ಅನಿಸುತ್ತೆ ಕಣೆ. ಕೂಡಿಸಿಕೊಡೇ ಆ ದಿನಗಳ ಅಂತ ಬಿಕ್ಕಬೇಕೆನಿಸುತ್ತೆ.

ಆವತ್ತು ಸಂಜೆಯೊಂದರ ಬಿಳಿ ಹಾಳೆಯ ಮೇಲೆ ನಾ ಬರೆಯುತ್ತಲಿದ್ದೆ. ಸಿತಾರ್ ತಂತಿಗಳ ಮೀಟುತ್ತಿದ್ದವಳ ಕಣ್ಣು ಪೆನ್ನನ್ನು ಮೀಟುತ್ತಿದ್ದ ನನ್ನ ಬೆರಳುಗಳ ಕೆಳಗೆ ಬೆಳ್ಳಗೆ ನಗುತ್ತಲಿದ್ದ ಹಾಳೆಯೆಡೆ ಇಣುಕುತ್ತಿತ್ತು ತಿಳಿಯಾದ ಮಂದಹಾಸದೊಂದಿಗೆ. ಆಗ ನೀನೆಷ್ಟು ಮುದ್ದಾಗಿ ಕಂಡೆ ಗೊತ್ತಾ? ಸಿತಾರ್ ಬಳಸಿ ಕುಳಿತವಳ ಆ ಭಂಗಿ! ತಿಳಿಬೆಳಕಲ್ಲಿ ಹೊಳೆಯುತ್ತಿದ್ದ ಶ್ಯಾಮಲಾ ಎಂಬ ವರ್ಣಕ್ಕೆ ಹೊರತಾದ ಶ್ವೇತ ನುಣುಪು ಕೆನ್ನೆಗಳ ವದನ. ಅದಕ್ಕೆ ಹೋಲಿಕೆ ಸಿಗಲಾರದು ಬಿಡು. ನಿನ್ನ ಇಷ್ಟಗಲ ಕಣ್ಣು ಮಾತ್ರ ಇದಾವ ಅರಿವೂ ಇಲ್ಲದೇ ನಾ ಬರೆದ ಸಾಲುಗಳನೋದುತ್ತಿತ್ತು.

"ಅಪ್ಪಳಿಸುವ ಅಲೆ
ಹಿಂದೆ ಮತ್ತೊಂದು ಹೆಜ್ಜೆ
ರಭಸಕ್ಕೆ ಬಲವೇ ಇಹುದು ಹಿಂದೆ
ಅಂದ ಬೆರೆಯುತ್ತ
ಪ್ರತಿಬಿಂಬಕೊಂದು ಜನ್ಮ
ಆಕಳಿಸುವ ಮಾತಲ್ಲಿ
ನಿದ್ರೆ ಇಡುವ ಶಾಪ
ಈ ಕದನದಿ ಹುಟ್ಟಿ ದಿಟ್ಟಿಸುವ
ನಂಟಿಗೇನಿದೆ ಹೆಸರು?
ಬಿರಿಯುವ ಹೂವಿಗೂ
ಬೆರಳಂಚಲ್ಲಿ ನಕ್ಕು
ಮುಡಿ ಕೆದಕುವ ಆಸೆ
ಅಲೆಯೊಡನೆ ವಿರಸ
ಸಮರಸವೆ ಸದಾ
ಅಂದ ಸುರಿದಲ್ಲಿ
ಪ್ರತಿಮೆ ಅಲೆಯೊಳಗೆ
ಮಿಡಿದು ಕೊಸರಾಡಿ ಅತ್ತು
ಉಸಿರೊಳಗೆ ನಕ್ಕ ಹಾಗೆ
ತನುವೊಂದು ಬಿರಿದು
ಅವಳಿ ಉಸಿರಿಗೆ ಜನ್ಮ!
ಇವಳ ಜನುಮದಿ
ಅವಳಿಗೆ ಹುಟ್ಟುಹಬ್ಬ
ಸಾವಿನಲ್ಲಿರದಲ್ಲ
ಅವಳಿಗೆ ಪಾಲು!!"

ಅಂತ ನಾನು ಬರೆದ ಕವನಕ್ಕೆ ಕಣ್ದುಂಬಿ ನಕ್ಕು ಬಿಟ್ಟಿದ್ದೆಯಾ! ಅಂತದೇ ಹೊತ್ತೆಂಬ ಮುತ್ತು ನನ್ನ ಕಾಡುತ್ತದೆ ನಾ ಬರೆವ ಸಾಲುಗಳನೋದುತ್ತಾ ನೀ ನಕ್ಕ ಹಾಗೆ. ಮತ್ತೆ ನಿನ್ನ ಮಾತುಗಳಿಗೆಲ್ಲ ಸೆಟಗೊಳ್ಳುವ ನನ್ನ ಮಾತುಗಳು. ಇಷ್ಟಲ್ಲ, ಈ ಪರ್ಯಂತಕ್ಕಾಗುವಷ್ಟು ನಿನ್ನ ನೆನಪಿದೆ ಒಡಲೊಳಗೆ.

ನಿಂಗೆ ಗೊತ್ತಿತ್ತು ನಾನೊಂಥರ ಸ್ಯಾಡಿಸ್ಟ್ ಅಂತ. ನಿನ್ನನ್ನ ನೋಯಿಸಿ ನಾನು ನಗ್ತಿದ್ದೆ ಅಂತ. ಅದೆಷ್ಟು ಬಾರಿ ನಿನ್ನನ್ನ ಅಳಿಸಿ ರಮಿಸದೇ ಇರ್ತಿದ್ದೆ. ನಿಂಗೆ ನೋವಾಗ್ಲಿಲ್ವಾ ಆಗ? ನಿನಗಿನ್ನೂ ನೋವು ಕೊಟ್ಟು ನಾನು ಏನನ್ನೋ ಅನುಭವಿಸುತ್ತಿದ್ದೆ. ಈಗಲೂ ಹಾಗೇ ಕಣೇ ನಾನಿರೋದು. ಆದ್ರೆ ಆವತ್ತಿನ ಹಾಗಲ್ಲ, ನಿನ್ನೊಡನೆ ಗೆದ್ದ ಹಾಗೆ ಪ್ರತಿ ಸಲ ಇಲ್ಲಿ ನನ್ನ ಗೆಲುವಿಲ್ಲ.

ರಸ್ತೆಯ ಎಡಭಾಗಕ್ಕೇ ನಡೀಬೇಕು ಅನ್ನೋ ನನ್ನ ಮಾತಿಗೆ ನೀನು ಹಾಗೆಯೇ ಮಾಡ್ತಿದ್ದೆ. ಒಂದಿನವೂ ಅನಿವಾರ್ಯಕ್ಕೂ ರಸ್ತೆಯ ಬಲಭಾಗದಲ್ಲಿ ನಾನು ನಡೆದೋಳಲ್ಲ. ನಾಲ್ಕೇ ಹೆಜ್ಜೆ ದಾಟಿದರೆ ಸಿಗೋ ಮನೆಗೂ ರಸ್ತೆ ದಾಟಿ ಎಡಗಡೆನೇ ಹೋಗೋಣ ಅಂತ ನಾನು ಹಠ ಮಾಡ್ತಿದ್ದೆ ಅಲ್ವಾ? ಆವತ್ತು ಕೋಪ ಮಾಡ್ಕೊಂಡೆ ನನ್ ಮೇಲೆ! "ಎರಡೇ ಹೆಜ್ಜೆ ಇರೋದು, ನಾನ್ ರೋಡ್ ಕ್ರಾಸ್ ಮಾಡಲ್ಲ" ಅಂತ. ಒಂಟಿಹಿಡಿತವ ಬಿಡದೆ ನಿನ್ ಬಿಟ್ಟು ಮಾತಿಲ್ಲದೆ ಎಡಕ್ಕೆ ನಡ್ದೆ ನಾನು. ಏನೇ..ನಿಂಗೆ ಎರಡು ಹೆಜ್ಜೆ ಕೂಡ ನನ್ ಬಿಟ್ಟು ಇಡೋಕ್ಕಾಗ್ಲಿಲ್ವಾ? ಬಂದೇ ಬಿಟ್ಟೆ ಈ ಕಡೆ. ನಂಗೆ ಇವತ್ತು ಯೋಚಿಸ್ದಾಗ ಬೇಜಾರಾಗತ್ತೆ. ಆಗ ನಾನು ಮಾತನಾಡ್ಸೋತನಕ ನೀನು ನನ್ ಕಡೆನೇ ನೋಡ್ತಾ ಇದ್ದೆ. ಆ ಭಾವಗಳು ಏನ ಹೇಳ್ತಿದ್ವು ....ಅದನ್ನೆಲ್ಲ ಗುರುತಿಸ್ಲಿಲ್ವಾ? ಹಾಗನ್ಕೋಬೇಡ ಕಣೇ... ನೀನು ನನ್ನನ್ನ ಎಷ್ಟು ಪ್ರೀತಿಸ್ತೀಯ ಅದರ ಮೂರಕ್ಕು ಜಾಸ್ತಿಯಷ್ಟು ನಾ ನಿನ್ನನ್ನ ಪ್ರೀತಿಸ್ತೀನಿ ಕಣೆ. ನಿನ್ನ ಮದ್ವೆ ಆಯ್ತಲ್ಲಾ...ಆವತ್ತು ನಂಗೆ ಖುಷಿಯಾಗಿದ್ದಕ್ಕಿಂತ ಬೇಜಾರಾಗಿದ್ದೇ ಹೆಚ್ಚಿತ್ತು. ಯಾಕೆ ಹೇಳು? ನನ್ ಮದ್ವೆ ಆದ್ಮೇಲೆ ನಾವು ಸಿಕ್ಕ ದಿನಗಳನ್ನ ಲೆಕ್ಕ ಹೇಳ್ಬಹುದಷ್ಟೆ! ಇನ್ನು ನಿನ್ ಮದ್ವೆನೂ ಆಗ್ಬಿಟ್ರೆ ನಿಂಗೆ ನನ್ನನ್ನ ಹುಡ್ಕೊಂಡು ಬರಕ್ಕಾಗತ್ತೇನೆ?

ಸದಾ ಸಿತಾರ್ ಗುಂಗಿನಲ್ಲೇ ಇರೋ ನೀನು, ತಂತಿಗಳನ್ನ ಮೀಟಿ ಎಗ್ಸಾಮ್ ಟೈಮಲ್ಲಿ ಗೆರೆಬಿದ್ದು ಕುಯ್ದಿರುವ ನಿನ್ನ ಬೆರಳು. ತಂತಿಗಳು ಕುಯಿದ ನಿನ್ನ ಬೆರಳನ್ನ ರಮಿಸ್ತಿರಲಿಲ್ಲ ನಿಜ ಅವುಗಳ ನೋವನ್ನ ನೇವರ್ಸ್ತಿದ್ದೆ ನಾನು ಕಣೇ... ನಂಗೂ ಅಷ್ಟೇ ನೋವಾಗ್ತಿತ್ತು. ರಾಜ ರಾಣಿಯರ ಹಾಗೆ ಐಶಾರಾಮಾಗಿ ಕೂತು ಫಾಲ್ಸ್ ಹತ್ರ ಫೋಟೋ ತೆಗೆಸ್ಕೊಳ್ಲಿಲ್ಲಾ? ಆ ಫೋಟೋನ ನಾನು ಕೋಪ ಮಾಡ್ಕೊಂಡು ಹರಿದು ನಿನ್ನ ಮುಖದ್ಮೇಲೆ ಬಿಸಾಕಿದ್ನಲ್ಲ? ಆವತ್ತು ನಿನ್ ಮೇಲೆ ನಂಗೆ ಕೋಪ ಇರ್ಲಿಲ್ಲ. ಇವತ್ತಿಗೂ ನನ್ ಬೇಜಾರನ್ನ ಯಾವರೀತಿಯಲ್ಲಿ ಹೇಳ್ಕೋಬೇಕು ಅಂತ ಕಲತ್ಗೊಂಡೇ ಇಲ್ಲ ನಾನು. ನೀನು ನನ್ನ ಬಿಟ್ಟು ಹೋಗ್ತಿದೀಯ ಅನ್ನೋ ನೋವಿನ ಆಳವನ್ನ ನಿನ್ನನ್ನೂ ನೋಯ್ಸಿ ಆ ನೋವಿಂದ ಸಮವಾಗಿಸಿದೆ. ನೋವನ್ನು ಹಂಚಿಕೊಳ್ಳೋ ರೀತಿ ನೀತಿಗಳು ಗೊತ್ತಿಲ್ಲ ಅಂತಲ್ಲ. "ಯಾಕೆ