tag:blogger.com,1999:blog-253467342008-07-19T20:21:59.795+05:30ಬೊಗಳೆ - ರಗಳೆಅಸತ್ಯ ಅನ್ವೇಷಿhttp://www.blogger.com/profile/04356401566159202899noreply@blogger.comBlogger433125tag:blogger.com,1999:blog-25346734.post-26065232141547562112008-07-18T08:07:00.000+05:302008-07-18T08:07:00.201+05:30ಬಜೆಟ್ ಸ್ಪೆಷಲ್: 'ಬಾಲ' ವಿಕಾಸ, ಪುತ್ರಕರ್ತರಿಗೆ ಕಲ್ಯಾಣ
(ಬೊಗಳೂರು ಬಾ-ಜೆಟ್ ಸಂಶ್ಲೇಷಣಾ ಬ್ಯುರೋದಿಂದ)

ಬೊಗಳೂರು, ಜು.8- ಮುಖ್ಯಮಂತ್ರಿ ಬಿ.ಎಸ್.ಒಡೆಯೋರಪ್ಪ ಮಂಡಿಸಿದ 2008-09ರ ನಾಲ್ಕುಕಾಸು ಸಾಲಿನ ಬಜೆಟ್ಟನ್ನು ಬೊಗಳೆ ರಗಳೆ ಬ್ಯುರೋದ ಸಮಸ್ತ ಮಂದಿ ಮಹೋದಯರು ಬಾಲವೆತ್ತಿ ಸ್ವಾ-ಗತಿಸಿದ್ದಾರೆ.

ಇದಕ್ಕೆ ಪ್ರಧಾನ ಕಾರಣಗಳಲ್ಲೊಂದು ಎಂದರೆ ಒಡೆಯೋರಪ್ಪ ಪ್ರಸ್ತಾಪಿಸಿದ ಬಾಲ ವಿಕಾಸ ಯೋಜನೆ. ಈಗಾಗಲೇ ಪರೀಕ್ಷಾ ಫಲಿತಾಂಶಗಳಲ್ಲಿ 'ಬಾಲ'ಕಿಯರ 'ಬಾಲ'ಕರು ಹಿಂದೆ ಬೀಳುತ್ತಿದ್ದಾರೆ. ಅಥವಾ ಬಾಲಕಿಯರೇ ಮುಂದೆ ಹೋಗುತ್ತಾರೆ. ಅವರನ್ನು ಸಮರ್ಥವಾಗಿ ಹಿಂಬಾಲಿಸಲು 'ಬಾಲ'ಕರಿಗೂ ಸೈಕಲ್ ನೀಡುವ ಯೋಜನೆ ಕೂಡ ವಿಫಲವಾದ ಹಿನ್ನೆಲೆಯಲ್ಲಿ, ಬಾಲವನ್ನೇ ವಿಕಾಸ ಮಾಡುವ ಯೋಜನೆಯನ್ನು ಜಾರಿಗೊಳಿಸಿರುವುದು ಬಾಲವಿರುವ ಬೊ.ರ. ಬ್ಯುರೋ ಸದಸ್ಯರಲ್ಲಿ ಸಂತಸಕ್ಕೆ ಕಾರಣವಾಗಿದೆ.

ಇನ್ನೊಂದು ಕಾರಣವೆಂದರೆ, ಹಿರಿಯ ಪುತ್ರ ಕರ್ತರ ಕಲ್ಯಾಣ ನಿಧಿ ಸ್ಥಾಪಿಸಿರುವುದು. ಬೊಗಳೆ ರಗಳೆ ಬ್ಯುರೋ ಮಂದಿ ಕೂಡ ಆನ್‌ಲೈನ್ ಪುತ್ರಕರ್ತರ ಸಾಲಿಗೆ ಸೇರಿರುವುದರಿಂದಾಗಿ ಪುತ್ರಕರ್ತರಿಗೆಲ್ಲಾ ಕಲ್ಯಾಣ ಮಾಡಿಸಲು ನಿಧಿ ಮೀಸಲಿಟ್ಟಿರುವುದು ತುಂಬಾ ಸಂತಸದ ಸಂಗತಿ ಎಂದು ಅವರು ಅವಲತ್ತುಕೊಂಡಿದ್ದಾರೆ.

ಆದರೆ ಅವಶ್ಯಕತೆಯೇ ಇಲ್ಲದ ಒಂದು ಬಜ್ಜೆಟ್ಟು ಪ್ರಸ್ತಾಪದ ಬಗ್ಗೆ ಬೊಗಳೂರು ಮಂದಿ ಮತ್ತೇರಿಸಿದಷ್ಟರ ಎತ್ತರಕ್ಕೆ ಹುಬ್ಬೇರಿಸಿದ್ದಾರೆ. ಅದೆಂದರೆ ಮದ್ಯದಂಗಡಿಗಳ ಹೆಚ್ಚಳ. ಬೊಗಳೂರಿನಲ್ಲೆಲ್ಲಾ ಈಗಾಗಲೇ ಹೆಜ್ಜೆಗೊಂದರಂತೆ ಮದ್ಯದಂಗಡಿಗಳಿವೆ. ಅವುಗಳ ಮಧ್ಯ ಮತ್ತೆ ಹೇಗೆ ಅಂಗಡಿ ಸ್ಥಾಪಿಸುವುದು ಎಂಬುದು ತಿಳಿಯದೆ ಬೊಗಳೂರಿನ ಜನತೆ ಕಂಗಾಲಾಗಿ ಪಕ್ಕದ ಮದ್ಯದಂಗಡಿಗೆ ತೆರಳಿ ಸುಮ್ಮನಾಗತೊಡಗಿದ್ದಾರೆ.

ಇನ್ನೊಂದು ಅಸಮಾಧಾನವೆಂದರೆ, ಶಾಸಕರನ್ನು, ನಾಯಕರನ್ನು ಬೇರೆ ಪಕ್ಷಗಳಿಂದ ಗಣಿಗಾರಿಕೆ ನಡೆಸಿ ಎತ್ತಿಕೊಂಡು ಬಂದು ಲೋಡುಗಟ್ಟಲೆ ಬಿಜೆಪಿ ಮನೆಯೆದುರು ಸುರಿಯಲಾಗುತ್ತಿರುವುದು ಎಲ್ಲರ ಗಮನಕ್ಕೆ ಬಂದಿದೆ. ಇದೇ ಕಾರಣಕ್ಕೆ ಗಣಿಗಾರಿಕೆಗೆ ನೂರಲ್ಲ, ನೂರಾರು ಕೋಟಿ ರೂ. ಮೀಸಲಿಡಬೇಕು ಎಂಬುದು ಎಲ್ಲಾ ಪಕ್ಷಗಳ ನಾಯಿಕರುಗಳ, ಮುಖಂಡರುಗಳ ಒಕ್ಕೊರಳ ಆಗ್ರಹ.ಅಸತ್ಯ ಅನ್ವೇಷಿhttp://www.blogger.com/profile/04356401566159202899noreply@blogger.comtag:blogger.com,1999:blog-25346734.post-33811176066086951292008-07-17T18:02:00.003+05:302008-07-17T18:04:12.317+05:30ಬೊಗಳೆಯಲ್ಲಿ ಯಡ್ಡಿ ಬಜೆಟ್ ವಿಶ್ಲೇಷಣೆಬಿ.ಎಸ್.ಒಡೆಯೋರಪ್ಪ ಮಂಡಿಸಿದ 2008-09ರ ನಾಲ್ಕುಕಾಸು ಸಾಲಿನ ಬಜೆಟ್ಟನ್ನು ಬೊಗಳೆ ರಗಳೆ ಬ್ಯುರೋದ ಸಮಸ್ತ ಮಂದಿ ಮಹೋದಯರು ಬಾಲವೆತ್ತಿ ಸ್ವಾ-ಗತಿಸಿದ್ದಾರೆ. ಹೇಗೆ , ಏನು, ಎತ್ತ ಕಂಗಾಲಾಗುತ್ತಿದ್ದೀರಾ?

ದಯವಿಟ್ಟು ನಿರೀಕ್ಷಿಸಿ... ಎಂದಿನಂತೆ ದುಡ್ಡು ಕೊಡದೆ ನಿಮ್ಮ ಪ್ರತಿಗಳನ್ನು ಕಾದಿರಿಸಿ. ಆದರೆ ಕೆಂಡದಂತೆ ಕಾದಿರಿಸಬೇಡಿ. ಚುರುಕ್ಕೆಂದೀತು....ಅಸತ್ಯ ಅನ್ವೇಷಿhttp://www.blogger.com/profile/04356401566159202899noreply@blogger.comtag:blogger.com,1999:blog-25346734.post-47128864232067432982008-07-16T07:37:00.001+05:302008-07-16T07:40:20.109+05:30ಬೊಗಳೆ: ಕನಿಷ್ಠ 'ಬೆಂಬಲ' ಬೆಲೆ ನಿಗದಿಗೆ ಆಗ್ರಹ!
(ಬೊಗಳೂರು ಬೆಂಬಲದ 'ಬೆಲೆ' ಬ್ಯುರೋದಿಂದ)

ಬೊಗಳೂರು, ಜು.16- ಉರುಳುವ ಸ್ಥಿತಿಯಲ್ಲಿರುವ ಉಪ (UPA) ಸರಕಾರಕ್ಕೆ ಊರುಗೋಲಾಗಿ ನಿಂತು ಅದನ್ನು ರಕ್ಷಿಸುವ ಹವಣಿಕೆಯಲ್ಲಿರುವ ಏಕಸದಸ್ಯ, ಅರ್ಧ ಸದಸ್ಯ, ಕಾಲುಸದಸ್ಯ ಪಕ್ಷಗಳೆಲ್ಲ ಇದೀಗ ಒಂದೇ ಒಂದು ಬೇಡಿಕೆ ಈಡೇರಿಸುವಂತೆ ತೀವ್ರವಾಗಿ ಒತ್ತಾಯಿಸತೊಡಗಿವೆ.

ದೇಶಾದ್ಯಂತ ಬೆಳೆಗಾರರು ಸಂಕಷ್ಟ ಸ್ಥಿತಿಯಲ್ಲಿದ್ದಾರೆ. ಕೈಗೆ ಬಂದ ಫಸಲು ಬಾಯಿಗೆ ಬಾರದೆ ರಸ್ತೆಗೆ ಸುರಿದು ಪ್ರತಿಭಟನೆ ಮಾಡುತ್ತಿದ್ದಾರೆ. ಕಬ್ಬಿನ ಬೆಳೆಗಾರರ ಕೈಗೆ ಸಿಪ್ಪೆ ಮತ್ತು ಜಲ್ಲೆ ಮಾತ್ರ ಸಿಕ್ಕುತ್ತಿದೆ. ತೊಗರಿ ಬೆಳೆಗಾರರು, ಟೊಮೆಟೋ, ಮೆಣಸು ಇತ್ಯಾದಿ ರೈತರೆಲ್ಲರೂ ಅದನ್ನು ರಸ್ತೆಗೆ ಸುರಿದು ರಸ್ತೆಯಲ್ಲೇ ಸಾಂಬಾರು ಮಾಡುತ್ತಿದ್ದಾರೆ. ಇಂಥ ಸ್ಥಿತಿಯಲ್ಲಿ ಅವರಿಗೆಲ್ಲರಿಗೂ ಬೆಳೆಗೆ ಬೆಂಬಲ ಬೆಲೆ ಒದಗಿಸುವ ಪ್ರಯತ್ನದಂತೆಯೇ ನಮಗೂ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಬೇಕು ಎಂದು ಈ ಸಂಸತ್ ರೈತರು ಆಗ್ರಹಿಸಿದ್ದಾರೆ.

ವಿಶ್ವಾಸ ಮತ ಕೋರುವ ಸರಕಾರಕ್ಕೆ ಬೆಂಬಲ ನೀಡಬೇಕಿದ್ದರೆ ಕೇವಲ 25 ಕೋಟಿ ರೂ. 'ಬೆಂಬಲ' ಬೆಲೆ ನಿಗದಿಪಡಿಸಿದ್ದು ಸಾಕಾಗುವುದಿಲ್ಲ. ಇದನ್ನು ಒಂದು ರೂಪಾಯಿಯಾದರೂ ಹೆಚ್ಚಿಸಬೇಕು ಎಂಬುದು ಈ ಮಿನಿ-ಮಿಡಿ ಪಕ್ಷಗಳ ಒಕ್ಕೊರಳ ಒತ್ತಾಯ.

ಒಂದಿಡೀ ಸರಕಾರದ ಜುಟ್ಟನ್ನು ನಾವು ಹಿಡಿದುಕೊಳ್ಳಲು ನಮಗೆ ಈ ನಿಕೃಷ್ಟ ಬೆಂಬಲ ಬೆಲೆಗಿಂತ ಕನಿಷ್ಠ ಬೆಂಬಲ ಬೆಲೆಯಾಗಿ 25 ಕೋಟಿ, ಒಂದು ರೂಪಾಯಿ ನಿಗದಿಪಡಿಸಬೇಕು ಎಂದು ಅವರು ಆಗ್ರಹಿಸುತ್ತಿದ್ದು, ಈ ಬಗ್ಗೆ ಪ್ರತಿಭಟನೆಗಳನ್ನು ನಡೆಸಲು ಯಾವುದನ್ನು ರಸ್ತೆಗೆ ಸುರಿಯಲಿದ್ದಾರೆ ಎಂದು ಬೊ.ರ. ಬ್ಯುರೋ ತೀವ್ರ ಸಂಶೋಧನೆ ನಡೆಸಿತು.

ಈ ತನಿಖೆಯ ಪ್ರಕಾರ ತಿಳಿದುಬಂದಿದ್ದೇನೆಂದರೆ, ಅವರೆಲ್ಲರೂ ಅವಕಾಶವಾದಿತನವನ್ನೆಲ್ಲವನ್ನೂ ಬಯಲಿಗೆ ತಂದಿರಿಸಿ, ತಮ್ಮ ಇಲ್ಲದ ಮಾನವನ್ನೆಲ್ಲ ರಸ್ತೆಗೆ ಸುರಿದು ಪ್ರತಿಭಟನೆ ನಡೆಸಲಿದ್ದಾರೆ!ಅಸತ್ಯ ಅನ್ವೇಷಿhttp://www.blogger.com/profile/04356401566159202899noreply@blogger.comtag:blogger.com,1999:blog-25346734.post-24717811597359738332008-07-14T12:03:00.001+05:302008-07-14T12:08:32.954+05:30ಸ್ವರ್ಗದಿಂದ ಸಂಸಾರ ಸಾಗರಕ್ಕೆ ಬಿದ್ದ ಮದುಮಗ!
(ಬೊಗಳೂರು ಬೆಲೆ ಏರಿಕೆ ಬ್ಯುರೋದಿಂದ)

ಬೊಗಳೂರು, ಜು.14- ಮಿತ್ರರೊಂದಿಗೆ ಆಗಸದಲ್ಲಿ ಹಾರಾಡುತ್ತಿದ್ದವರಲ್ಲಿ ಒಬ್ಬ ವ್ಯಕ್ತಿ ದಿಢೀರನೇ ಸಂಸಾರ ಸಾಗರಕ್ಕೆ ಧುಮುಕಿದ ಆತಂಕಕಾರಿ ಘಟನೆಯೊಂದು ಇಲ್ಲಿ ವರದಿಯಾಗಿದೆ. ಈ ಬಗ್ಗೆ ಬೊಗಳೆ ರಗಳೆ ಬ್ಯುರೋ ತೀವ್ರ ಸಂಶೋಧನೆ ನಡೆಸಿದ್ದು, ಕೆಲವು ಆಘಾತಕಾರಿ ವಿಷಯಗಳು ಸಂಸಾರ ಸಾಗರದಿಂದ ಬಯಲಿನ ಮೇಲೆ ಬಿದ್ದಿವೆ.

ಈ ಮಿತ್ರರು ಆಕಾಶದಲ್ಲಿ ಹಾರಾಡುವುದಕ್ಕೆ ಕಾರಣಗಳೂ ಇದ್ದವು. ಯುಪಿಎ ಸರಕಾರ ಅಧಿಕಾರಕ್ಕೆ ಬಂದಂದಿನಿಂದ ಏರುತ್ತಿರುವ ಬೆಲೆಗಳಿಂದಾಗಿ, ಅಗತ್ಯ ವಸ್ತುಗಳು ಕೈಗೆಟುಕದಷ್ಟು ಎತ್ತರಕ್ಕೇರಿದ್ದವು. ಅವುಗಳನ್ನು ಹೇಗಾದರೂ ಮಾಡಿ ಹಿಡಿಯಲೆಂದು ಈ ಐವರು ಹಾರಾಟ ಮಾಡುತ್ತಿದ್ದರು. ಆದರೆ ಕೆಳಗೆ ಜನ ಜಂಗುಳಿಯ ಹಾಹಾಕಾರ, ಆಕ್ರಂದನ, 'ನಮಗೂ ಬೆಲೆಗಳನ್ನು ಕೆಳಗೆ ಇಳಿಸಿಕೊಡಿ' ಎಂಬ ಕೂಗಾಟವೆಲ್ಲಾ ಕೇಳಿ ಬೆದರಿದ ಅವರಲ್ಲೊಬ್ಬರು ಆಯತಪ್ಪಿ ಬಿದ್ದೇ ಬಿಟ್ಟರು.

ಬೆಲೆ ಏರಿಕೆಯ ಭರಾಟೆಯ ನಡುವೆಯೂ ಸಂತಸದಿಂದ ಓಡಾಟ ನಡೆಸುತ್ತಿರುವುದು ಕಂಡು ಬಂದ ಮದುವೆಯೊಂದು ಅದೇ ಸಂದರ್ಭ ಅಲ್ಲಿ ನಡೆಯುತ್ತಿತ್ತು. ನೇರವಾಗಿ ಮಂಟಪಕ್ಕೇ ಬಂದು ಬಿದ್ದ ಕಾರಣ, ಓಡಿ ಹೋಗಲೂ ಆಗದೆ ತಾಳಿ ಕಟ್ಟುವುದು ಅನಿವಾರ್ಯವಾಯಿತು ಎಂಬುದನ್ನು ಪತ್ತೆ ಹಚ್ಚಲಾಗಿದೆ.

ಇವರೆಲ್ಲಾ ಆಗಸದಲ್ಲಿ ಹಾರಾಡಲು ಮತ್ತೊಂದು ಕಾರಣವೂ ಇತ್ತು. ಮದುವೆಗಳು ಸ್ವರ್ಗದಲ್ಲಿ ನಡೆಯುತ್ತವೆ ಎಂದು ಹಿರಿಯರು ಹೇಳಿದ್ದು ಅವರಿಗೆಲ್ಲ ನೆನಪಿತ್ತು. ಅದು ಹೇಗೆ ಎಂಬುದನ್ನು ಕಂಡುಕೊಳ್ಳಬೇಕಾಗಿತ್ತು. ಮದುವೆಯಾದರೆ ಸ್ವರ್ಗ ಸುಖಕ್ಕೆ ದಾರಿ ಅಂತಲೂ ಕೆಲವರು ಹೇಳುತ್ತಿದ್ದರು. ಹೀಗಾಗಿ ಮದುವೆಯಾದ ಮೇಲೆ ದಿಢೀರ್ ಮೇಲಕ್ಕೆ ಹೋಗುವುದಕ್ಕಿಂತ, ಮದುವೆಗೆ ಮೊದಲೇ ಮೇಲಕ್ಕೆ ಹಾರಾಡಿ ಹೋಗಿ ಬಂದರೆ ಅನುಭವ ದೊರೆಯುತ್ತದೆ ಎಂಬುದು ಅವರ ಸಿದ್ಧಾಂತ. ಸ್ವರ್ಗಕ್ಕೆ ಮೊದಲೇ ಭೇಟಿ ಕೊಟ್ಟು ಬಂದರೆ, ಹೇಗಿರುತ್ತದೆ, ಅಲ್ಲೇ ಉಳಿಯಬಹುದೇ? ಅಥವಾ ಅಲ್ಲಿಯ ಉದ್ಯೋಗಕ್ಕಿಂತ ಭೂಲೋಕದ ಉದ್ವೇಗದ ಉದ್ಯೋಗವೇ ಮಿಗಿಲೇ? ಎಂಬುದನ್ನೆಲ್ಲಾ ತಿಳಿದುಕೊಳ್ಳಬೇಕಿತ್ತು. ಇದಕ್ಕಾಗಿ ಈ ರೀತಿ ಮಾಡಿದೆ ಎಂದು, ಅವರಲ್ಲಿ ಯಾರು ಕೂಡ ತಪರಾಕಿ ನೀಡುವಂತಹ ಸ್ಥಿತಿಯಲ್ಲಿಲ್ಲದ್ದರಿಂದ, ಹಾವೆಂದು ಹೆದರಿದವರ ಮೇಲೆ ಹಗ್ಗ ಎಸೆದಂತೆ, ಜೋರಾಗಿಯೇ ಆರ್ಭಟಿಸಿ ಬೆದರಿಕೆಯೊಡ್ಡಿದ ಬೊ.ರ. ಬ್ಯುರೋ ಸದಸ್ಯರ ಬಳಿ ಆತ ತಪ್ಪೊಪ್ಪಿಕೊಂಡಿದ್ದಾನೆ.

ಲಾಸ್ಟ್ ಬಟ್ ಒನ್ ಕ್ವೆಶ್ಚನ್ನು - ಹಾಗಿದ್ದರೆ ಈಗ ಏನನಿಸುತ್ತದೆ ಎಂದು ಬೊ.ರ. ಸದಸ್ಯರು ಕೇಳಿದಾಗ, ಇದು ಬಾಣಲೆಯಿಂದ ಬೆಂಕಿಗೆ ಬಿದ್ದಂತಾಯಿತು ಎಂದು ಸಂತಸದಿಂದಲೇ ನುಡಿದಿದ್ದಾನೆ. ಏರುತ್ತಿರುವ ಬೆಲೆಗಳ ಉರಿ ಆ ಮೇಲಿನ ಲೋಕದಲ್ಲಿ ತಡೆಯಲಾಗುತ್ತಿಲ್ಲ. ಅದರ ಜತೆಗೆ ಸೂರ್ಯನ ಶಾಖವೂ ಒಂದಿಷ್ಟು ಸೇರಿಕೊಳ್ಳುತ್ತಿದೆ. ಆದರೆ ಧರೆಗಿಳಿದಾಗ, ಸೂರ್ಯನ ಪ್ರಖರತೆಯೇ ಗೊತ್ತಾಗದಷ್ಟು ಬೆಲೆ ಏರಿಕೆಯು ಬಿಸಿ ಬಿಸಿಯಾಗಿದೆ. ಚೀಲ ತುಂಬಾ ಹಣ ತೆಗೆದುಕೊಂಡು ಹೋದರೆ ಜೇಬು ತುಂಬಾ ಅಕ್ಕಿ ದೊರೆಯುತ್ತದೆ ಎಂದು ಅವರು ಕೇಂದ್ರ ಸರಕಾರ ಕೈಗೊಳ್ಳುತ್ತಿರುವ ಕ್ರಮಗಳ ಬಗ್ಗೆ ಕ್ಯಾಕರಿಸಿ ಶ್ಲಾಘಿಸುತ್ತಾ ಹೇಳಿದರು.

ಅಂತಿಮವಾಗಿ, ಮುಂದಿನ ಹೆಜ್ಜೆ ಏನು ಎಂದು ಕೇಳಿದಾಗ, ಮುಂದೆ ಬೆಲೆ ಏರಿಕೆಯ ಬಿಸಿ ಗಾಳಿ ತುಂಬಿದ ಬೆಲೂನಿನಲ್ಲಿ ವಿಶ್ವ ಸುತ್ತುವ ಆಸೆಯಿದೆ ಎಂದಾತ ಅಲವತ್ತುಕೊಂಡಿದ್ದಾನೆ.ಅಸತ್ಯ ಅನ್ವೇಷಿhttp://www.blogger.com/profile/04356401566159202899noreply@blogger.comtag:blogger.com,1999:blog-25346734.post-20293938371060373432008-07-09T09:46:00.002+05:302008-07-09T09:48:44.722+05:30ಕೇಂದ್ರದಲ್ಲಿ ಗಾಳ: ಗಣಿ ಧಣಿಗಳಿಗೆ ಭಾರಿ ಬೇಡಿಕೆ
(ಬೊಗಳೂರು ಗಣಿ-ಗಾಳ-ದಾಳ ಬ್ಯುರೋದಿಂದ)

ಬೊಗಳೂರು, ಜು.9- ದೇಶಾದ್ಯಂತ ಮಳೆಗಾಲ ಬಂದಿರುವಂತೆಯೇ, ಸಣ್ಣಪುಟ್ಟ ರಾಜಕೀಯ ಪಕ್ಷಗಳಿಗೂ ಇದು ಒಂದು ಕಾಲವಾಗಿ ಪರಿಣಮಿಸಿದ್ದು, ಯುಪಿಎ ನೇತೃತ್ವದ ಸರಕಾರವು ಬೃಹತ್ ಪ್ರಮಾಣದ ಬೀಸು ಬಲೆಗಳನ್ನು ಹಿಡಿದು ಮೀನು ಹಿಡಿಯಲು ಹಲವರನ್ನು ನೇಮಿಸಿರುವುದು ಬೊ.ರ. ಬ್ಯುರೋ ಗಮನಕ್ಕೆ ಬಂದಿದೆ.

ಇದೇ ವೇಳೆ, ಕರುನಾಟಕ ಕ್ಷೇತ್ರದಲ್ಲಿ ಭಾರಿ ಪ್ರಮಾಣದ ಮೀನುಗಾರಿಕೆ ನಡೆಸಿ ಸಿದ್ಧ-ಪ್ರಸಿದ್ಧರಾಗಿದ್ದ ಗಣಿ ದೊರೆಗಳು ಕರುನಾಟಕ ರಂಗವೇದಿಕೆಯಿಂದ ದಿಢೀರ್ ನಾಪತ್ತೆಯಾಗಿದ್ದಾರೆ ಎನ್ನಲಾಗಿದ್ದು, ಅವರೀಗ Unprecedented Price-raise Agenda ಸರಕಾರದ ಕಂಕುಳ ಕೆಳಗೆ ಬೆಚ್ಚನೆ ಆಶ್ರಯ ಪಡೆಯುವಂತೆ ಮಾಡಲಾಗಿದೆ ಎಂಬುದನ್ನು ಬೊ.ರ. ಬ್ಯುರೋ ಪತ್ತೆ ಹಚ್ಚಿದೆ.

ರಾಜ್ಯದಲ್ಲಿ ಸ್ವತಂತ್ರರ ಹಂಗಿನಿಂದ ಹಂಗೂ ಹಿಂಗೂ ಹೊರಬರುವಂತಾಗಲು ಭಾರಿ ಮನೆಹಾಳು/ಪ್ರಳಯಾಂತಕ ಕಾರ್ಯಾಚರಣೆ ನಡೆಸಿದ್ದ ಗಣಿ ಕುಳಗಳು, ಅದಿರುಗಳನ್ನು ಅಗೆದು ಬಗೆದು ಲೋಡುಗಟ್ಟಲೆ ತಂದು ಸುರಿಯುವಲ್ಲಿ ಎತ್ತಿದ ಕೈ ಎಂಬ ಕಾರಣಕ್ಕೆ ಯುಪಿಎ ಇವರ ಸೇವೆ ಬಯಸಿದ್ದು, ಅವರಿಗೀಗ ಡಿಮ್ಯಾಂಡಪ್ಪೋ ಡಿಮ್ಯಾಂಡು. ಎದುರು ಪಕ್ಷಗಳಿಂದ ಸಂಸದರನ್ನು ಲೋಡು ಲೋಡು ಗಣಿಯಂತೆ ಎತ್ತಿ ತಂದು 'ಇಷ್ಟು ಸಾಕಾ... ಇನ್ನೂ ಬೇಕಾ' ಅಂತ ಕೇಳುವ ಜಾಯಮಾನದ ಗಣಿ ದೊರೆಗಳು ಸದ್ಯಕ್ಕಂತೂ ತುಂಬಾ ತುಂಬಾ ಬ್ಯುಸಿಯಾಗಿಬಿಟ್ಟಿರುವುದಾಗಿ ಮೂಲಗಳು ವರದಿ ಮಾಡಿವೆ.

ಈ ಗಾಳ ವೀರರು ಗಾಳ ಹಾಕಲು ಹೊರಟಿರುವಂತೆಯೇ, ಅವರ ಬಲೆಗೆ ಮೊದಲು ಬಿದ್ದಿರುವುದು ಅಜಿತ್ ಸಿಂಗ್ ಅವರ ರಾಷ್ಟ್ರೀಯ ಲೋಪ ದಳ. ಸಮಜಾ ವಾದಿಗಳು ಈಗಾಗಲೇ ಬಲೆಯೊಳಗೆ ಬಿದ್ದಿದ್ದಾರೆ. (ಇದಕ್ಕೆ ಕಾರಣ ಮಾಯಾಂಗನೆಯ ಆನೆಯ ಭೀತಿ ಎಂಬುದನ್ನು ಕೂಡ ಪತ್ತೆ ಹಚ್ಚಲಾಗಿದೆ).

ಇನ್ನು ಚಾಣಕ್ಯ ತಂತ್ರಗಳಿಗೆ ಹೆಸರಾದ, ಕರ್ನಾಟಕದಲ್ಲಿ ತಾರಾಮಾರಾ ಪ್ರಸಿದ್ಧಿ ಪಡೆದಿರುವ, ಎಲ್ಲರಿಂದಲೂ ಕ್ಯಾಕರಿಸಿ ಹೊಗಳಿಸಿಕೊಂಡಿರುವ ಪಕ್ಷದ ಎರಡು ಮೀನುಗಳನ್ನು ಸ್ವತಃ ವೇದೇಗೌಡರೇ ಕೇಂದ್ರದ ಗಾಳಕ್ಕೆ ಸಿಕ್ಕಿಸಿಬಿಟ್ಟಿದ್ದಾರೆ. ಅವರು ಅದರಲ್ಲಿ ಸಿಕ್ಕಿಬಿದ್ದರೆ, ಕೇಂದ್ರದ ಬೆಂಬಲ ಪಡೆದು ಅಧಿಕಾರಯುತವಾಗಿ ಕರುನಾಟಕದಲ್ಲಿ ಹೊಸ ನಾಟಕ ಶುರು ಮಾಡಬಹುದು ಮತ್ತು ತಮ್ಮ ಪಕ್ಷಕ್ಕೆ ಹಾಕಲಾಗುತ್ತಿರುವ ಗಾಳದಿಂದ ಪಾರಾಗಬಹುದು ಎಂಬುದು ಚಾಣಾಕ್ಷ ಚಾಣಕ್ಯನ ಲೆಕ್ಕಾಚಾರ.

ಸದ್ಯಕ್ಕೆ ಚುನಾವಣೆ ನಡೆದರೆ ಈಗಾಗಲೇ ಬೆಲೆ ಏರಿಕೆಯಿಂದಾಗಿ ಎಲ್ಲೆಡೆಯೂ ಸುಣ್ಣ ಬಳಿಸಿಕೊಂಡಿರುವ ಕಾಂಗ್ರೆಸ್‌ಗೆ ಭಾರೀ ಹೊಡೆತ ಬೀಳುವ ಸಾಧ್ಯತೆ ಇರುವುದರಿಂದ, ಉಳಿದಿರುವ ಏಳೆಂಟು ತಿಂಗಳನ್ನು ಹೇಗಾದರೂ ದೂಡಬೇಕು. ಇದಕ್ಕಾಗಿ ತಮಗೆ ದೊಡ್ಡ ತಿಮಿಂಗಿಲಗಳೇ ಬೇಕಿಲ್ಲ. ಮೀನು, ಕಪ್ಪೆ, ಆಮೆ ಇತ್ಯಾದಿಗಳು ಕೂಡ ಸಾಕಾಗುತ್ತವೆ ಎಂದು ಕೇಂದ್ರದಿಂದ ಗಾಳ ವೀರರಿಗೆ ಸ್ಪಷ್ಟ ಸೂಚನೆ ದೊರೆತಿದೆ ಎನ್ನಲಾಗಿದೆ.ಅಸತ್ಯ ಅನ್ವೇಷಿhttp://www.blogger.com/profile/04356401566159202899noreply@blogger.comtag:blogger.com,1999:blog-25346734.post-43166444854854289632008-07-07T08:19:00.000+05:302008-07-07T08:19:01.336+05:30'ಎಡ' 'ಕೈ'ಗಾದ ಗಾಯಕ್ಕೆ ಸ-ಮಜಾ ವಾದದ ಮುಲಾಮು
(ಬೊಗಳೂರು ಮಜಾ ವಾದ ಬ್ಯುರೋದಿಂದ)

ಬೊಗಳೂರು, ಜು.೭- ರಾಷ್ಟ್ರ ಹಿತವೂ, ಮಾರ್ಕ್ಸಿಸ್ಟ್ ಆಡಳಿತವಿರುವ ನೆರೆ ರಾಷ್ಟ್ರದ ಹಿತವೂ ಮೇಳೈಸಿದ ಪರಿಣಾಮವಾಗಿ ಬಲಪಂಥೀಯರ ವಿರೋಧಿಗಳು ಯುಪಿಎಯಿಂದ ಅಂಗ ಕಳೆದುಕೊಳ್ಳುವ ಹಿನ್ನೆಲೆಯಲ್ಲಿ ಮುಲಾಮು ಹಚ್ಚಲು ಈಗಾಗಲೇ ಭಾರೀ ಸಿದ್ಧತೆ ನಡೆದಿದೆ.

ಇನ್ನುಳಿದ ನಾಲ್ಕಾರು ತಿಂಗಳುಗಳ ಕಾಲ ಈ ಬೆಲೆ ಆಗಸಕ್ಕೇರಿಕೆಯ ಯುಗದಲ್ಲೇ ಮುಂದುವರಿದು, ಜನಗಳನ್ನು ಮತ್ತಷ್ಟು ಕೂಪಕ್ಕೆ ತಳ್ಳಿಬಿಡುವ ಪ್ರಯತ್ನವಾಗಿ Unprecedented Price Agenda ಸರಕಾರವು ಎಡಗೈ ಕಳಚಿಕೊಂಡಲ್ಲಿ ಗಾಯವಾಗುವುದಕ್ಕೆ ಮುಲಾಮು ಹಚ್ಚಲೇಬೇಕಾಗುತ್ತದೆ.

ಇದಕ್ಕೆ ಮುಲಾಮು ಹಚ್ಚಲೆಂದೇ ಒಂದು ಕಾಲದಲ್ಲಿ ತಮ್ಮಿಂದ ಯದ್ವಾತದ್ವಾ ಬಾಯಿಗೆ ಬಂದಂತೆ ಹೊಗಳಿಸಿಕೊಳ್ಳುತ್ತಿದ್ದ, ಮತ್ತು ತಾವು ಕೂಡ ಪರಸ್ಪರ ಉಗುಳಿಸಿಕೊಳ್ಳುತ್ತಿದ್ದ ಪಕ್ಷದ ಸಹಕಾರ ಅತ್ಯಗತ್ಯ ಎಂಬುದು ಇಬ್ಬರಿಗೂ ಮನವರಿಕೆಯಾಗಿದೆ ಎಂಬುದನ್ನು ಪತ್ತೆ ಹಚ್ಚಲಾಗಿದೆ.

ರಾಜಕೀಯದಲ್ಲಿ ಇಡೀ ವಿಶ್ವವೇ ತಮ್ಮ ಸಮಾಜ ಎಂಬುದನ್ನು ತಿಳಿದುಕೊಂಡು, ತಮ್ಮ ಕಾರ್ಯ ಸಾಧಿಸಿಕೊಂಡು ಮಜಾ ಅನುಭವಿಸಲು ಸಿದ್ಧವಾಗಿರುವ ಸಮಜಾ ವಾದ ಪಕ್ಷದ ನೀತಿ ನಿಯಮಗಳು ಮತ್ತು ತತ್ವ ಸಿದ್ಧಾಂತಗಳು ಗಾಳಿಗೆ ತೂರದಂತಾಗಲು ಅಥವಾ ಅಕಸ್ಮಾತ್ ತೂರಿ ಹೋದರೂ, ಅದನ್ನು ಮರಳಿ ಗೂಡಿಗೆ ಸೇರಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಮೂಲಗಳು ವರದ್ದಿ ಮಾಡಿವೆ.ಅಸತ್ಯ ಅನ್ವೇಷಿhttp://www.blogger.com/profile/04356401566159202899noreply@blogger.comtag:blogger.com,1999:blog-25346734.post-34674554000557354402008-07-05T20:23:00.002+05:302008-07-05T20:25:52.123+05:30೦೬ ತಾರೀಕು ೦೭ ತಿಂಗಳು ೦೮ ವರ್ಷ
ಭಾನುವಾರ 06ನೇ ತಾರೀಕು 07ನೇ ತಿಂಗಳು 08ನೇ ವರ್ಷವಾಗಿರುವುದರಿಂದ

ಈ ದಿನ ಬೆಳಿಗ್ಗೆ ೦೬ ಗಂಟೆ ೦೭ ನಿಮಿಷ ೦೮ ಸೆಕೆಂಡ್ ವೇಳೆಗೆ ಬೊಗಳೆ ರಗಳೆ ಬ್ಯುರೋ ಭರ್ಜರಿ ನಿದ್ರೆ ಮಾಡಲಿದೆ ಎಂದು ತಿಳಿಸಲು ವಿಷಾದಿಸುತ್ತೇವೆ.ಅಸತ್ಯ ಅನ್ವೇಷಿhttp://www.blogger.com/profile/04356401566159202899noreply@blogger.comtag:blogger.com,1999:blog-25346734.post-84768469432309330982008-07-01T07:33:00.000+05:302008-07-01T07:33:00.997+05:30ಇಂಗ್ಲೀಸು ಟು ಖನ್ನಡ್ಡ ಭಾಷಾವಾಂತರ!
(ಬೊಗಳೂರು ಭಾಷಾವಾಂತರ ಬ್ಯುರೋದಿಂದ)

ಬೊಗಳೂರು, ಜು.1- ಇದು ನಮ್ಮ ಬೊಗಳೆ ಬ್ಯುರೋದ ಹೊಸ ಯಾರ್ಕ್ ಬ್ಯುರೋ ರದ್ದಿಗಾರರು ಕಳುಹಿಸಿದ ವರದ್ದಿಯಾಗಿದ್ದು, ಅದನ್ನು ಬ್ಯುರೋದಲ್ಲಿರುವ ಭಾಷಾವಾಂತರಕಾರರು ಚೆನ್ನಾಗಿಯೇ ಅಂತರ್‌ಖಂಡೀಯ ಭಾಷಾವಾಂತರ ಮಾಡಿದ್ದಾರೆ. ವರದ್ದಿ ಹೀಗಿದೆ:

New York: An Indian-origin surgeon has been barred from practising for two years in New Jersey and slapped with USD81,000 fine for operating on a wrong lung of a cancer patient eight years ago.
ಹೊಸ ಯಾರ್ಕ್: ಭಾರತೀಯ ಅಸಲಿ ಸರ್ಜನನೊಬ್ಬ ನ್ಯೂಜೆರ್ಸಿಯಲ್ಲಿ ಎರಡು ವರ್ಷ ಬಾರಿನಲ್ಲಿ ಪ್ರಾಕ್ಟೀಸ್ ಮಾಡಬೇಕೆಂದು ಹೇಳಲಾಗಿದೆ ಮತ್ತು ಎಂಟು ವರ್ಷದ ಹಿಂದೆ ಕ್ಯಾನ್ಸರ್ ತಾಳಿಕೊಂಡ ವ್ಯಕ್ತಿಯೊಬ್ಬರ ತಪ್ಪು ಲಂಗದ ಮೇಲೆ ಕಾರ್ಯಾಚರಣೆ ಕೈಗೊಂಡಿದ್ದಕ್ಕೆ 81,000 ಉಸ್ಡ್ ಫೈನನ್ನು ಮುಖಕ್ಕೆ ಹೊಡೆಯಲಾಗಿದೆ.

The State Board of Medical Examiners found that Dr Santusht Perera removed a portion of right lung of 60-year-old Richard Flagg when he should have been operated on a tumour in the left lung, then lied and altered documents in an attempt to cover up the mistake.
ಮೆಡಿಕಲ್ ಪರೀಕ್ಷಾಧಿಕಾರಿಗಳ ರಾಜ್ಯ ಮಂಡಳಿಯು ಪತ್ತೆ ಹಚ್ಚಿದ್ದೇನೆಂದರೆ, 60 ವರ್ಷದ ರಿಚರ್ಡ್ ಫ್ಲಾಗ್‌ನ ಬಲ ಲಂಗದ ಒಂದು ತುಂಡನ್ನು ಡಾ.ಸಂತುಷ್ಟ ಪೆರೆರಾ ಅವರು ತೆಗೆದಿದ್ದರು... ಯಾವಾಗೆಂದರೆ ಎಡ ಲಂಗದಲ್ಲಿ ಆಲೂ ಗಡ್ಡೆಯೊಂದರ ಕಾರ್ಯಾಚರಣೆ ನಿಯಂತ್ರಿಸುತ್ತಿದ್ದಾಗ. ಆ ಬಳಿಕ ಅಲ್ಲೇ ಬಿದ್ದುಕೊಂಡ ಮತ್ತು ಅಲ್ಲಿ ಕಂಡು ಬಂದ ಮಿಸ್ಟೇಕನ್ನು ಕವರ್ ಮಾಡಿಕೊಳ್ಳಲು ಪ್ರಯತ್ನಿಸಿದ.

State documents say Perera removed the lower and middle lobe of the patient's right lung during the September 2000 surgery.
ರಾಜ್ಯದಲ್ಲಿರುವ ಡಾಕ್ಯುಮೆಂಟರಿಗಳು ಹೇಳುವುದೇನೆಂದರೆ, 2000 ಮಂದಿಗೆ ಸೆಪ್ಟೆಂಬರ್ ತಿಂಗಳಲ್ಲಿ ಮಾಡಿದ ಸರ್ಜರಿ ವೇಳೆ ಪೆರೇರಾ ರೋಗಿಯ ಬಲ ಲಂಗದ ಮಧ್ಯ ಮತ್ತು ಕೆಳ ಭಾಗದಲ್ಲಿರುವ ಪಕ್ಕೆಯೊಂದನ್ನು ತೆಗೆಯಲಾಗಿತ್ತು.

When Flagg woke up from surgery eight years ago in Bergen County hospital, he wondered why his right side hurt though he was told that his left lung was affected by tumour.
ಬರ್ಜನ್ ಕೌಂಟ್ ಮಾಡುವ ಆಸ್ಪತ್ರೆಯಲ್ಲಿ ಸರ್ಜರಿ ನಡೆದ ಎಂಟು ವರ್ಷಗಳ ಹಿಂದೆ ಧ್ವಜವು ಮೇಲೆದ್ದಾಗ, ತನ್ನ ಎಡ ಲಂಗದಲ್ಲಿ ಆಲೂಗಡ್ಡೆಯಿಂದ ಪ್ರಭಾವಿತವಾಗಿದೆ ಎಂದು ಹೇಳಿದ್ದರೂ ಬಲ ಭಾಗದಲ್ಲೇಕೆ ಮಾನಸಿಕ ಆಘಾತವಾಗಿದೆ ಎಂದು ಆತನಿಗೆ ಅಚ್ಚರಿಯಾಯಿತು.

Flagg quizzed his surgeon Perera who lied that an even larger tumour had been detected in his right lung, according to state documents.
ಬಲ ಲಂಗದಲ್ಲಿ ಇನ್ನೂ ದೊಡ್ಡ ಆಲೂಗಡ್ಡೆಯಿತ್ತು ಎಂದು ಹೇಳಿ ಮಲಗಿದ್ದ ಸರ್ಜನ್ ಪೆರೇರಾನನ್ನು ಫ್ಲ್ಯಾಗ್ ರಾಜ್ಯ ದಾಖಲೆಗಳ ಅನುಸಾರವಾಗಿ ಕ್ವಿಜ್‌ ಸ್ಪರ್ಧೆ ಮಾಡಿ ನೋಡಿದ.ಅಸತ್ಯ ಅನ್ವೇಷಿhttp://www.blogger.com/profile/04356401566159202899noreply@blogger.comtag:blogger.com,1999:blog-25346734.post-74744558224626701412008-06-30T08:24:00.000+05:302008-06-30T08:24:01.608+05:30ಯಾರು? ಯಾವ ಪಕ್ಷದಿಂದ ಉಚ್ಚಾಟಿಸಿದ್ದು?
(ಬೊಗಳೂರು ಪಕ್ಷ ರಹಿತ ಬ್ಯುರೋದಿಂದ)

ಬೊಗಳೂರು, ಜೂ.30- ಯಾವುದೋ ಒಂದು ಪಕ್ಷದಿಂದ ಹೊರದಬ್ಬಲ್ಪಟ್ಟ ಜಿಪಿಆರ್ ನಿಂದ್ಯಾ  ಅವರನ್ನು ಬೊಗಳೆ ರಗಳೆ ಬ್ಯುರೋಗಾಗಿ ವಿಶೇಷವಾಗಿ ಸಂದರ್ಶಿಸಲಾಯಿತು. ಸಂದರ್ಶನದ ಕಸಾರಾಂಶ ಇಲ್ಲಿದೆ:

* ನಿಮ್ಮನ್ನು ಆನೆ ಪಕ್ಷದಿಂದ ಮಾಯ ಮಾಡಲಾಗಿದೆ. ಯಾಕೆಂತ ಕೇಳಬಹುದೇ?
ಹೌದೇ? ಇರಬಹುದು. ನನ್ನನ್ನು ಯಾವ ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ತಿಳಿಸಿದರೆ ನಿಮಗೆ ನಾನು ತುಂಬಾ ಆಭಾರಿ. ಯಾಕೆಂದರೆ ನಾನು ಒಂದು ಕಾಲದಲ್ಲಿ ಜನತಾ... ಜನತಾ... ಜನತಾ... ಛೆ... ನೆನಪಿಗೇ ಬರ್ತಾ ಇಲ್ಲ... ಪಕ್ಷವೋ, ದಳವೋ... ಯಾವುದ್ರಲ್ಲೋ ಇದ್ದೆ. ಆ ಮೇಲೆ ಬಹುಶಃ ಸಮಾಜವಾದಿ ಪಕ್ಷಕ್ಕೆ ಸೇರಿರಬೇಕು. ಇಲ್ಲವಾದ್ರೆ ಕಾಂಗ್ರೆಸಿಗೆ...? ಛೆ... ಬಿಜೆಪಿಗೂ ಸೇರಿದ್ದಿರಬಹುದು. ಹೀಗಾಗಿ ಇವುಗಳಲ್ಲಿ ಯಾವ ಪಕ್ಷ ನನ್ನನ್ನು ಉಚ್ಚಾಟಿಸಿದೆ ಅಂತ ಹೇಳಿ ಪುಣ್ಯ ಕಟ್ಟಿಕೊಳ್ಳಿ.

* ನಿಮ್ಮ ಮುಂದಿನ ನಡೆ ಏನು?
ಆನೆ ನಮ್ಮ ಮೇಲೆ ಲದ್ದಿ ಹಾಕಿದರೆ ನಾವೇನು ಸುಮ್ಮನೆ ಕೂರುವವರೇ? ಸ್ಥಳೀಯ ಸಂಸ್ಥೆಗಳು, ರಾಜ್ಯ ರಾಜಕಾರಣ, ರಾಷ್ಟ್ರೀಯ ರಾಜಕಾರಣ ಇವೆಲ್ಲಾ ನಮಗೆ ಯಾವ ಲೆಕ್ಕ?... ಇನ್ನು ಮುಂದೆ ಏನಿದ್ದರೂ ನಮ್ಮದು ಅಂತಾರಾಷ್ಟ್ರೀಯ ರಾಜಕಾರಣ. ಹೀಗಾಗಿ ಹಿಲಾರಿಯಸ್ ಭಾಮಾಮಣಿ ಜತೆಗೆ ಸೆಣಸಾಡಿ ಅಭ್ಯರ್ಥನ ಪಡೆದುಕೊಂಡ ಒಬಾಮಾ ವಿರುದ್ಧ... ಅಲ್ಲಲ್ಲ... ಪರವಾಗಿ ಪ್ರಚಾರ ಮಾಡಲು ಅಮೆರಿಕೆಗೆ ಹಾರಲಿದ್ದೇನೆ.

* ಛೆ... ನೀವು ಹೋದರೆ ಇಲ್ಲಿ ನಿಮ್ಮವರನ್ನು, ನಿಮ್ಮನ್ನು ನಂಬಿದವರನ್ನು ನೋಡಿಕೊಳ್ಳೋರು ಯಾರು?
ಅವರಿಗೇನು... ಎಷ್ಟು ಬೇಕಾದ್ರೂ ಪಕ್ಷಗಳಿವೆ... ಯಾವುದಕ್ಕೆ ಬೇಕಾದ್ರೂ ಹೋಗ್ಬಹುದು. ಯಾಕೆಂದರೆ ಎಲ್ಲ ಪಕ್ಷಗಳ ತತ್ವ ಸಿದ್ಧಾಂತಗಳೂ ಒಂದೇ ಆಗಿಬಿಟ್ಟಿವೆ. ಈ ಸಿದ್ಧಾಂತಗಳಲ್ಲಿ ಪಕ್ಷಾಂತರ ಸಿದ್ಧಾಂತವು ಮೋಸ್ಟ್ ಕಾಮನ್ ಪ್ರಕ್ರಿಯೆ. ನೀವೇನೂ ಯೋಚ್ನೆ ಮಾಡ್ಬೇಕಾಗಿಲ್ಲ. ಇವತ್ತು ನೀವು ಬೊಗಳೆ ರಗಳೆ ಬ್ಯುರೋ ಪರವಾಗಿ ಕೆಲ್ಸ ಮಾಡ್ತಾ ಇದ್ದೀರಿ. ನಾಳೆ ಮಜಾವಾಣಿಗೆ, ನಾಡಿದ್ದು ನಗೆ ನಗಾರಿಗೆ, ಇನ್ನೊಂದಿನ ಹಾಸ್ಯಬ್ಲಾಗು ರದ್ದಿಗಾರರಾಗುತ್ತೀರಿ. ಎಲ್ಲಿ ಹೆಚ್ಚು ಗಿಟ್ಟುತ್ತದೆ ಅಲ್ಲಿಗೆ ಹಾರುತ್ತೀರಿ ಅಲ್ಲವೇ?

ಹೀಗೆ ಬುಡಕ್ಕೇ ಕೊಡಲಿ ಹಾಕಿದ ಕಾರಣದಿಂದಾಗಿ ಸಂದರ್ಶನವನ್ನು ಅರ್ಧಕ್ಕೇ ನಿಲ್ಲಿಸಿ, ಅಲ್ಲಿಂದ ಓಡಲಾಯಿತು.ಅಸತ್ಯ ಅನ್ವೇಷಿhttp://www.blogger.com/profile/04356401566159202899noreply@blogger.comtag:blogger.com,1999:blog-25346734.post-35543426717779301272008-06-27T08:48:00.002+05:302008-06-27T08:58:57.596+05:30ಶಾಂತಿಗೆ ಕಾರಣ ಹಣಗೊಬ್ಬರ!
(ಬೊಗಳೂರು ಸುಮ್ಮನಿರುವ ಬ್ಯುರೋದಿಂದ)

ಬೊಗಳೂರು, ಜೂ.೨೬- ದೇಶದಲ್ಲಿ ಮತ್ತು ಭಯೋತ್ಪಾದನೆ, ಹತ್ಯಾಕಾಂಡ ಇತ್ಯಾದಿಗಳಿಗೆ ಇತ್ತೀಚೆಗಿನ ದಿನಗಳಲ್ಲಿ ಕಡಿವಾಣ ಬಿದ್ದಿದ್ದು, ಇದಕ್ಕೆ ಕಾರಣವನ್ನು ಬೊಗಳೆ ರಗಳೆಯ ಹೊಸ ಬ್ಯುರೋ ಪತ್ತೆ ಹಚ್ಚಲು ನಿರ್ಧರಿಸಿದ ತಕ್ಷಣವೇ ಎರಡು ಅಂಶಗಳು ಪತ್ತೆಯಾಗಿವೆ.

ಮೊತ್ತ ಮೊದಲನೆಯದಾಗಿ, ರೈತರಿಗೆ ರಸಗೊಬ್ಬರವೂ ದೊರೆಯುತ್ತಿಲ್ಲ, ಇದರಿಂದ ಕೀಟ ನಾಶಕಗಳೂ ದೊರೆಯುತ್ತಿಲ್ಲ. ಹೀಗಾಗಿ ಆತ್ಮಹತ್ಯೆಯ ಪ್ರಮಾಣದಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ.

ಎರಡನೆಯದಾಗಿ, ಇದೀಗ ದೇಶಾದ್ಯಂತ ಹಣಗೊಬ್ಬರದ ಕೋಲಾಹಲ. ಹಣಗೊಬ್ಬರವು ೧೧.೦೫ ಶೇ. ಮೀರಿರುವುದರಿಂದ ಅಗತ್ಯವಸ್ತುಗಳು ಎಟುಕಲಾರದಷ್ಟು ಹುಳಿಯಾಗಿಬಿಟ್ಟಿವೆ. ಜನ ಸಾಮಾನ್ಯ ತತ್ತರಿಸುವುದು ಇತ್ತೀಚಿನ ವರ್ಷಗಳಲ್ಲಿ ಮಾಮೂಲಿ ಆಗಿಬಿಟ್ಟಿರುವುದರಿಂದ ಅದರ ಬಗ್ಗೆ ದೇಶದ ಚುಕ್ಕಾಣಿ ಹಿಡಿದಿರುವ ಯಾರು ಕೂಡ ಗಮನ ಹರಿಸುತ್ತಿಲ್ಲ ಎಂಬುದು ಡೀಫಾಲ್ಟ್ ಆಗಿರುವ ಸಂಗತಿ.

ಇದನ್ನೆಲ್ಲಾ ಬದಿಗಿಟ್ಟು, ಭಯೋತ್ಪಾದಕರ ದಾಳಿ, ಬಾಂಬ್ ಸ್ಫೋಟ ಕೂಡ ಕಡಿಮೆಯಾಗಿರುವುದಕ್ಕೆ ಹಣಗೊಬ್ಬರವೇ ಕಾರಣ. ಈ ಉಬ್ಬರಿಸುವ ಹಣದ ಅಬ್ಬರದಿಂದಾಗಿ , ಗನ್ನು ಇತ್ಯಾದಿಗಳು ಕೂಡ ಭಯೋತ್ಪಾದಕರ ಕೈಗೆಟುಕಲಾರದಷ್ಟು ದುಬಾರಿಯಾಗಿಬಿಟ್ಟಿವೆ. ಇದೇ ಕಾರಣಕ್ಕೆ ದೇಶದಲ್ಲಿ ಒಂದಷ್ಟು ಶಾಂತಿಯ ವಾತಾವರಣ ಕಂಡುಬರುತ್ತಿದೆ. ಅಥವಾ ಅಶಾಂತಿ ಕಂಡು ಬಂದರೂ ವರದಿಯಾಗುತ್ತಿಲ್ಲ. ಇದಕ್ಕೆ ಕಾರಣ ಹಣದುಬ್ಬರದ ಬಿಸಿ ವರದಿಗಾರಿಕೆಗೂ ತಟ್ಟಿದ್ದು, ಒಂದು ವರದ್ದಿ ಕಳುಹಿಸಿದರೆ ಸಾಕಷ್ಟು ಹಣ ಖರ್ಚಾಗುತ್ತದೆ. ಹೀಗಾಗಿ ನಾವು ವರದ್ದಿ ಕಳುಹಿಸಿದರೆ ಬದುಕುವುದಕ್ಕಾಗಿ ತಿನ್ನಲು ಏನು ಮಾಡುವುದು ಎಂಬ ಯೋಚನೆಯಲ್ಲಿ ವರದ್ದಿಗಾರರೆಲ್ಲರೂ ಸುಮ್ಮನಾಗಿಬಿಟ್ಟಿದ್ದಾರೆ.

ದೇಶದಲ್ಲಿ ದ್ವೇಷದ ವಾತಾವರಣವಿಲ್ಲದೆ, ಎಲ್ಲೆಲ್ಲೂ ಶಾಂತಿಯೇ ಗೋಚರಿಸುತ್ತಿರುವುದರಿಂದ ಉಪ (UPA) ಸರಕಾರವು ಈ ಶಾಂತಿಯನ್ನು ಮತ್ತು ಅ ಶಾಂತಿಯನ್ನು ತಾವೇ ಸ್ಥಾಪಿಸಿದ್ದೇವೆ ಎಂದು ಎದೆ ತಟ್ಟಿಕೊಂಡು ಹೇಳಲಾರಂಭಿಸಿದೆ. "ಜನಗಳೇ ಮತ್ತು ದನಗಳೇ, ಹಣಗೊಬ್ಬರದ ಬಗ್ಗೆ ತಲೆಬಿಸಿ ಮಾಡಿಕೊಳ್ಳಬೇಕಿಲ್ಲ, ಎಲ್ಲೆಲ್ಲೂ ಶಾಂತಿ ಇರುವುದರಿಂದ ನೆಮ್ಮದಿಯಲ್ಲಿ ಇರಬಹುದು, ಆದರೆ ಆ ಶಾಂತಿಯನ್ನು ನಿಮ್ಮ ಮನೆಯೊಳಗೇ ಇಟ್ಟುಕೊಳ್ಳಬೇಡಿ. ಚುನಾವಣೆಗಳು ಬರುವಾಗ ಜಾರಕಾರಣಿಗಳಿಗೆ ಅಗತ್ಯವಾಗಿ ಅದನ್ನು ಕೆಡಿಸಬೇಕಾಗಿದೆ" ಎಂಬ ಎಚ್ಚರಿಕೆಯ ಸೂಚನೆಯನ್ನೂ ಉಪ ಸರಕಾರ ಜನತೆಗೆ ನೀಡಿದೆ.ಅಸತ್ಯ ಅನ್ವೇಷಿhttp://www.blogger.com/profile/04356401566159202899noreply@blogger.comtag:blogger.com,1999:blog-25346734.post-20149687627072831922008-06-25T08:06:00.000+05:302008-06-25T08:06:01.567+05:30ಹಣಗೊಬ್ಬರ ಪ್ರಭಾವವೂ ರಸಗೊಬ್ಬರ ಅಭಾವವೂ!
(ಬೊಗಳೂರು ಗೊಬ್ಬರ ಬ್ಯುರೋದಿಂದ)

ಬೊಗಳೂರು, ಜೂ.25- ರಾಜ್ಯದಲ್ಲಿ ರಸಗೊಬ್ಬರದ ಅಭಾವ ಮತ್ತು ಕೇಂದ್ರದಲ್ಲಿ ಹಣಗೊಬ್ಬರದ ಪ್ರಭಾವ ಹೆಚ್ಚಾಗುತ್ತಿರುವುದಕ್ಕೂ ಪರಸ್ಪರ ಸಂಬಂಧವಿದೆ ಎಂಬುದನ್ನು ಪತ್ತೆ ಹಚ್ಚಿರುವ ಬೊಗಳೆ ರಗಳೆ ಬ್ಯುರೋ, ರೈತರ ಆತ್ಮಹತ್ಯೆಗೂ ಕಾರಣಗಳನ್ನು ಪತ್ತೆ ಹಚ್ಚಿದೆ.

ಆದರೆ ಬೊ.ರ. ಬ್ಯುರೋವೇ ಈ ಕಾರಣಗಳನ್ನು ಪತ್ತೆ ಹಚ್ಚಿರುವುದು ಪತ್ರಿಕೋದ್ಯಮಕ್ಕೆ ತಟ್ಟಿದ ಕಳಂಕ ಮತ್ತು ಈ ದೇಶದ ದುರಂತ ಎಂದು ಜಾರಕಾರಣಿಗಳೆಲ್ಲಾ ಬಾಯಿಗೆ ಬಂದಂತೆ ಹೊಗಳುತ್ತಿರುವುದಾಗಿ ನಮ್ಮ ವಿರೋಧೀ ಪತ್ರಿಕೆಗಳ ರದ್ದಿಗಾರರು ಕಳುಹಿಸಿದ ಫ್ಯಾಕ್ಸ್ ಬೊ.ರ. ಕಚೇರಿಗೆ ತಲುಪಿದೆ.

ಕೇಂದ್ರದಲ್ಲಿರುವ ರಾಶಿಬಿದ್ದು ಕೊಳೆಯುತ್ತಿರುವ ಗೊಬ್ಬರವನ್ನು ಎಲ್ಲಾದರೂ ರಾಜ್ಯಕ್ಕೆ ಕಳುಹಿಸಿಕೊಟ್ಟರೆ, ಇಲ್ಲಿನ ರೈತರು ಆತ್ಮಹತ್ಯೆ ಮಾಡಿಕೊಳ್ಳುವುದಾದರೂ ಹೇಗೆ, ಆ ಬಳಿಕ, ರೈತರ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಸರಕಾರಕ್ಕೆ ರೈತ-ವಿರೋಧಿ ಅಂತ ಹಣೆಪಟ್ಟಿ ಕಟ್ಟುವುದಾದರೂ ಹೇಗೆ ಎಂಬುದು ಯೋಚನೆಯಾಗಿತ್ತು.

ಕೇಂದ್ರದ ಮೇಲೆ ಹಣಗೊಬ್ಬರ ಹೆಚ್ಚಾಗಿದ್ದಕ್ಕಾಗಿ ರಾಜ್ಯದವರು ಕೇಂದ್ರೀಯರನ್ನು ಬೈದಾಡಿದರೆ, ಕೇಂದ್ರದವರು ರಸಗೊಬ್ಬರ ಕಡಿಮೆಯಾಗಿದ್ದಕ್ಕಾಗಿ ರಾಜ್ಯದ ಮೇಲೆ ಗೊಬ್ಬರರಹಿತ ಕೆಸರು ಎರಚಬಹುದು. ಈ ತಂತ್ರಗಳಿಂದಾಗಿಯೇ ಬಡ ರೈತ ಅತಂತ್ರನಾಗಿದ್ದು, ರಸಗೊಬ್ಬರವೆಲ್ಲವೂ ಎದುರು ಪಕ್ಷದವರ ದಲ್ಲಾಳಿಗಳ ಕೈಯಲ್ಲಿ ಸುರಕ್ಷಿತವಾಗಿ ಉಬ್ಬರವಾಗುತ್ತಿವೆ ಎಂಬುದನ್ನು ಪತ್ತೆ ಹಚ್ಚಲು ಬೊ.ರ.ಗೂ ಸಾಧ್ಯವಾಗಿಲ್ಲ.

ಇನ್ನು ಆತ್ಮಹತ್ಯೆಗೆ ಕಾರಣವೆಂದರೆ, ರಸಗೊಬ್ಬರದ ಬದಲು ಹಣಗೊಬ್ಬರ ಹೆಚ್ಚಾಗಿದ್ದಲ್ಲದೆ, ರಸಗೊಬ್ಬರ ಅಂಗಡಿಗಳಲ್ಲಿ ಕೇವಲ ಕೀಟನಾಶಕಗಳು ಮಾತ್ರವೇ ದೊರೆಯುತ್ತಿದ್ದುದು ಎಂಬುದನ್ನು ಯಾರೂ ಪತ್ತೆ ಹಚ್ಚದಿದ್ದರೂ ಬೊ.ರ. ಮಾತ್ರ ವರದಿ ಮಾಡಿದೆ.

ಆದರೂ, ಕೀಟನಾಶಕಗಳು ಕೂಡ ಕಳಪೆಯಾಗಿದ್ದು ಮತ್ತು ಕಲಬೆರಕೆಯಿಂದ ಕೂಡಿದ್ದ ಕಾರಣದಿಂದಾಗಿ ಕೀಟಗಳು ಸಾಯುವ ಬದಲು ಕೀಟಗಳ ಸಂಖ್ಯೆಯೇ ಹೆಚ್ಚಾಗತೊಡಗಿದ್ದು, ಬೆಳೆ ನಾಶವಾಗತೊಡಗಿದೆ ಎಂಬುದು ಬೊ.ರ. ಗಮನಕ್ಕೆ ಬಂದಿದೆ. ಇದೇ ಕಾರಣದಿಂದ ಈ ಕೀಟಗಳು ಗೊಬ್ಬರ ಕೊರತೆಗೆ ಅವರು ಕಾರಣ, ಇವರು ಕಾರಣ ಎಂಬುದನ್ನು ಸ್ವರಬದ್ಧವಾಗಿ ಝೇಂಕರಿಸುತ್ತಾ ಕಾಲ ಕಳೆಯುತ್ತಿವೆ.ಅಸತ್ಯ ಅನ್ವೇಷಿhttp://www.blogger.com/profile/04356401566159202899noreply@blogger.comtag:blogger.com,1999:blog-25346734.post-38215097392508331692008-06-23T07:33:00.001+05:302008-06-23T07:36:23.831+05:30ಒಬಿಸಿ ಮೀಸಲಿಗೆ ಸಚಿವ ದುರ್ಜನ ಸಿಂಗ್ ಹೆಣಗಾಟ
(ಬೊಗಳೂರು ಮೂಸಲು ಬ್ಯುರೋದಿಂದ)

ಬೊಗಳೂರು, ಜೂ.23- ಸರಕಾರ ಎಷ್ಟೇ ಕಷ್ಟ ಪಟ್ಟು ಹೆಣಗಾಡಿದರೂ ದೇಶದಲ್ಲಿ ಇತರ ಹಿಂದುಳಿದವರು ಸಿಗದೇ ಇರುವುದರಿಂದ ಜಾರಕೀಯ ಪಕ್ಷಗಳೆಲ್ಲವೂ ತತ್ತರಿಸಿ ಬೆಚ್ಚಿ ಬಿದ್ದಿವೆ. ಹೀಗಾದರೆ ಹೇಗೆ, ಓಟಿನ ಬ್ಯಾಂಕಿನ ಖಾತೆಯಲ್ಲಿ ಜಮಾವಣೆ ಆಗುವುದಾದರೂ ಹೇಗೆ ಎಂಬುದೇ ನಮ್ಮನ್ನು ಆಳಲು ಮನಸ್ಸಿಲ್ಲದವರ ಚಿಂತೆಗೆ ಕಾರಣ ಎಂದು ಬೊಗಳೆ ರಗಳೆ ಬ್ಯುರೋ ಪತ್ತೆ ಹಚ್ಚಿದೆ.

ಓಟಿನ ಬ್ಯಾಂಕನ್ನು ಗಟ್ಟಿ ಮಾಡಿಕೊಳ್ಳುವ ಸರಕಾರದ ಉದ್ದೇಶವೇ ಇಲ್ಲಿ ದಾರಿ ತಪ್ಪಿರುವುದು ಎಲ್ಲ ಜಾರಕೀಯ ಪಕ್ಷಗಳ ಉದ್ವೇಗಕ್ಕೆ ಕಾರಣವಾಗಿದೆ. ಓಬಿಸಿ ಕೋಟಾವನ್ನೇ ಖೋಟಾ ಎಂದು ಪರಿಗಣಿಸುವಂತಾಗಿಸುವ ನಿಟ್ಟಿನಲ್ಲಿ ಇತ್ತೀಚೆಗೆ ಎಲ್ಲರೂ ತಾವು ಹಿಂದುಳಿದವರು, ನಾವು ಹಿಂದುಳಿದವರು ಎಂದು ಹಳಿದುಕೊಳ್ಳುತ್ತಾ, ಅಧಿಕಾರಿಗಳಿಗೆ ದುಡ್ಡು ತೆತ್ತು ಒಬಿಸಿ ಫರ್ಟಿಸಿಕೇಟು ಮಾಡಿಸಿಕೊಳ್ಳುವ ತರಾತುರಿಯಲ್ಲಿರುವುದನ್ನು ಕೂಡ ಬೊಗಳೆರಗಳೆ ಬ್ಯುರೋ ಕಂಡು ಹುಡುಕಿದೆ.

ಒಬಿಸಿಗೆ 27 ಶೇ. ಮೀಸಲಾಗಿದ್ದರೂ, ಏಳು ಶೇಕಡಾ ಮಾತ್ರ ಒಬಿಸಿ ಮಂದಿಗಳು ದೊರಕಿದ್ದು, ಉಳಿದ 20 ಶೇಕಡಾ ಮಂದಿಯನ್ನು ಸೃಷ್ಟಿಸಬೇಕಾಗಿರುವುದು ಮಾನನೀಯ ಮಾವನ ಸಂಪನ್ಮೂಲಗಳನ್ನು ಕ್ರೋಡೀಕರಿಸುವ ಸಚಿವ ದುರ್ಜನ ಸಿಂಗರಿಗೆ ದೊಡ್ಡ ಸವಾಲಿನ ಮತ್ತು ಮುಖವುಳಿಸಿಕೊಳ್ಳುವ ವಿಷಯವಾಗಿದ್ದು, ಅದನ್ನು ತುಂಬಿಸಿಕೊಳ್ಳುವ ನಿಟ್ಟಿನಲ್ಲಿ ತಮ್ಮ ಪಕ್ಷದ ಓಟಿನ ಬ್ಯಾಂಕೇ ಆಗಿಬಿಟ್ಟಿರುವ ಅಲ್ಪ ಸಂಖ್ಯೆಯುಳ್ಳವರನ್ನು ಓಲೈಸಿಕೊಳ್ಳುವತ್ತ ಒಳಗಿಂದೊಳಗೆ ಸಿದ್ಧತೆಗಳನ್ನು ಮಾಡುತ್ತಿದ್ದಾರೆ ಎಂಬುದು ತಿಳಿದುಬಂದಿದೆ.

ಇದಕ್ಕಾಗಿ ದೇಶದ ಎಲ್ಲಾ ಜೈಲುಗಳನ್ನು ಹುಡುಕಿ, ಇತ್ತೀಚೆಗೆ ಭಯೋತ್ಪಾದನೆಗೆ ಸಂಬಂಧಿಸಿ ಬಂಧಿತರಾದವರನ್ನೆಲ್ಲರಿಗೂ ಉನ್ನತ ಶಿಕ್ಷಣ ಕೊಡಿಸುವ ನಿಟ್ಟಿನಲ್ಲಿ ಅವರನ್ನು ಐಐಟಿಗಳಿಗೆ ಸೇರಿಸುವ ಪ್ರಯತ್ನ ನಡೆಯುತ್ತಿದೆ. ಸಿಮಿ ಸಂಘಟನೆಯವರು ಯಾವತ್ತಿದ್ದರೂ ಸ್ಟೂಡೆಂಟ್‌ಗಳೇ ಆಗಿರುವುದರಿಂದ ಅವರಿಗೆ ಉನ್ನತ ತಾಂತ್ರಿಕ ಶಿಕ್ಷಣ ಕೊಡಿಸಲು ಮತ್ತು ಅವರನ್ನು ಐಐಟಿಗಳಿಗೆ ಸೇರಿಸಿಕೊಳ್ಳಲು ಅತ್ಯಂತ ಸುಲಭ. ಹೇಗಿದ್ದರೂ ದೇಶದಲ್ಲಿ ಈ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಅವರು ಆಗಾಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಪಡೆಯುವ ಕೆಲಸ ಮಾಡುತ್ತಿದ್ದಾರೆ. ಅವರಿಂದಾಗಿ ದೇಶದ ಹೆಸರು ಕೂಡ ಅಂತಾರಾಷ್ಟ್ರೀಯ ಟೆರರ್ ಭೂಪಟದಲ್ಲಿ ಜ್ವಾಜ್ವಲ್ಯಮಾನವಾಗಿ ಬೆಳಗುತ್ತಿದೆ ಎಂಬುದನ್ನು ಕೇಂದ್ರವು ಮನಗಂಡಿದ್ದು, ಹೇಗಾದರೂ ಮಾಡಿ ಅವರಿಗೆ ಉನ್ನತ ಶಿಕ್ಷಣ ಕೊಡಿಸಿದರೆ, ದೇಶದ ಹೆಸರೂ ಪ್ರಸಿದ್ಧಿ ಪಡೆಯುತ್ತದೆ, ಒಬಿಸಿ ಕೋಟಾವನ್ನು ಖೋಟಾ ಪದ್ಧತಿಯಿಂದ ತುಂಬಿಸಿ ತಮ್ಮ ಇಲ್ಲದ ಮಾನವನ್ನು ಉಳಿಸಿಕೊಂಡ ಹಾಗೆಯೂ ಆಗುತ್ತದೆ ಎಂಬುದು ಲೆಕ್ಕಾಚಾರ.

ಒಬಿಸಿ ಕೋಟಾಕ್ಕೆ ಸಾಕಷ್ಟು ಅಭ್ಯರ್ಥಿಗಳು ಸಿಗದಿರುವುದರಿಂದ, ಯಾರಿಗೆ ಬೇಕಾದರೂ ಈ ರೀತಿಯ ಪ್ರಮಾಣಪತ್ರ ಕೊಡಿಸುಲು ಯಾರಾದರೂ ಮುಂದೆ ಬಂದರೆ ಅವರಿಗೂ ಉದ್ಯೋಗಾವಕಾಶ ಹೆಚ್ಚುತ್ತದೆ. ಮೀಸಲಾತಿಯಿಂದಾಗಿ ಎಷ್ಟೊಂದು ಜನರಿಗೆ ಉದ್ಯೋಗಾವಕಾಶ ದೊರೆಯುತ್ತದೆ ಎಂದು ತಮಗರಿವಿಲ್ಲದಂತೆಯೇ ಅಚ್ಚರಿ ವ್ಯಕ್ತಪಡಿಸಲಿರುವ, ಇಂಥ ವಿಷಯಗಳಿಗೇ ತಲೆ ಓಡಿಸುತ್ತಾ ಮಾವನ ಸಂಪನ್ಮೂಲ ಹೆಚ್ಚಿಸುವ ಕೇಂದ್ರ ಸಚಿವ ದುರ್ಜನ ಸಿಂಗ್, ಪ್ರಮಾಣಪತ್ರ ಕೊಡುವ ಕೇಂದ್ರಗಳನ್ನು ಅಲ್ಲಲ್ಲಿ ಸ್ಥಾಪಿಸಲು ಕೇಂದ್ರ ಪಿತ್ತಸಚಿವ ಪೀಚಿ ದಂಬರಂ ಅವರ ಸಲಹೆ ಕೋರಿದ್ದಾರೆ.ಅಸತ್ಯ ಅನ್ವೇಷಿhttp://www.blogger.com/profile/04356401566159202899noreply@blogger.comtag:blogger.com,1999:blog-25346734.post-3645895781173781282008-06-19T08:19:00.001+05:302008-06-19T08:20:46.757+05:30ಬೊಗಳೆ ಬ್ಯುರೋದಿಂದ ಸರ್ವೋಪಯೋಗಿ ಭವಿಷ್ಯ

ಬೊಗಳೆ ರಗಳೆ ಸ್ಥಬ್ದವಾಗಿದೆ ಎಂಬ ಆರೋಪಗಳನ್ನು ತಪ್ಪಿಸಲೋಸುಗ ಬೇರೆಯವರ ಭವಿಷ್ಯವನ್ನು ನಮ್ಮ ಕೈಯಲ್ಲಿ ಹಿಡಿದುಕೊಳ್ಳುವ ನಿಟ್ಟಿನಲ್ಲಿ ರಾಶಿ ರಾಶಿಗಳ ಭವಿಷ್ಯವನ್ನು ಇಲ್ಲಿ ನೀಡಲಾಗಿದೆ. ಬೊಗಳೆ ಭವಿಷ್ಯವು ಅತ್ಯಂತ ಸುಲಭವೂ, ಅತ್ಯಂತ ಸರಳವೂ ಆಗಿದ್ದು, ಓದುಗರು ಯಾವುದೇ ರಾಶಿಯನ್ನು ಬೇಕಿದ್ದರೂ ಆರಿಸಿಕೊಂಡು, ಇದು ತಮ್ಮದೇ ಅಂತ ತಿಳಿದುಕೊಳ್ಳಬಹುದು. ಇದೇ ನಮ್ಮ ಈ ಸೇವೆಯ ವೈಶಿಷ್ಟ್ಯ. ಈ ನಿಟ್ಟಿನಲ್ಲಿ ಈ ಭವಿಷ್ಯ ವಾಣಿಗಳನ್ನು ಹೆಚ್ಚು ಹೆಚ್ಚು ಖರೀದಿಸಿ ಪ್ರೋತ್ಸಾಹಿಸಲು ಬೋರಲಾಗಿದೆ.

ಮೇಷ

ಅಷ್ಟಮ ಸ್ಥಾನದಲ್ಲಿ ಗುರು ನೆಲಸಿರುವುದರಿಂದ ಮನೆಯಲ್ಲಿ ಬಾಗಿಲು ಇಲ್ಲದಿದ್ದರೆ ಖಂಡಿತವಾಗಿಯೂ ಕಳ್ಳತನವಾಗುತ್ತದೆ. ಆದುದರಿಂದಾಗಿ ಚೋರ ಭಯ ಶತಃಸಿದ್ಧ. ಹಠಾತ್ ರಜೆ ಹಾಕಿದರೆ ಉನ್ನತ ಅಧಿಕಾರಿಗಳಿಂದ ಬೈಗುಳ. ಮನೆಯಲ್ಲಿ ಬೆಂಕಿ ಇದ್ದರೆ ಅದನ್ನು ಬೀಡಿ, ಸಿಗರೇಟು ಸುಡಲು, ಒಲೆ ಹಚ್ಚಲು ಬಳಸಬಹುದು. ಹೆಚ್ಚುಕಡಿಮೆ ಮಾಡಿಕೊಂಡು ಪ್ರಯೋಗಿಸಿದರೆ ಅನಾಹುತವಾಗಬಹುದು. ಬೆಂಕಿ ಉರಿಯುತ್ತಿದ್ದರಂತೂ ಬಿಸಿ ಬಿಸಿಯಾಗಿರುತ್ತದೆ ಮತ್ತು ಮುಟ್ಟಿದರೆ ಸುಟ್ಟುಹೋಗಲೂ ಬಹುದು.

ವೃಷಭ
ಜ್ವರ ಬಂದರೆ ವೈದ್ಯರ ಬಳಿಗೆ ಹೋಗುವ ಇಚ್ಛೆ ನಿಮಗೆ ಬರಲಾರದು. ಬೇರೇನಾದರೂ ಕಾಯಿಲೆ ಬಂದರೆ ಮಾತ್ರ ಡಾಕ್ಟರ್ ಶಾಪ್ ಎಲ್ಲಿದೆ ಅಂತ ಹುಡುಕುವಿರಿ. ಬೇರೆಯವರ ಸ್ವಭಾವ ಗೊತ್ತಿದ್ದೂ ಅವರಿಗೆ ಜವಾಬ್ದಾರಿ ವಹಿಸಿದರೆ ಮೋಸ ಹೋಗುವ ಸರದಿ ನಿಮ್ಮದೇ. ಕಚೇರಿಯಲ್ಲಿ ಎಲ್ಲರೊಂದಿಗೂ ಕೂಗಾಡುತ್ತಿದ್ದರೆ ನಿಮ್ಮ ಮೇಲಧಿಕಾರಿಗಳ, ಕೆಳಅಧಿಕಾರಿಗಳ ಆಕ್ರೋಶಕ್ಕೆ ಗುರಿಯಾಗುವಿರಿ. ಕ್ರೆಡಿಟ್ ಕಾರ್ಡ್ ಆಗಾಗ್ಗೆ ಬಳಸುವುದರಿಂದ ನೀವು ಸಾಲವಂತರಾಗುತ್ತೀರಿ.

ಮಿಥುನ
ನೀವು ಎಲ್ಲರೊಂದಿಗೂ ನಿಷ್ಠುರರಾಗಿ ಮಾತನಾಡುವುದರಿಂದ ಅವರೆಲ್ಲರಿಗೂ ನಿಷ್ಠುರ ವ್ಯಕ್ತಿ ಅನಿಸಿಕೊಳ್ಳುತ್ತೀರಿ. ನಿಮ್ಮ ತೋಟಕ್ಕೆ ಮಂಗಗಳ ಕಾಟ ಹೆಚ್ಚಾದಲ್ಲಿ ಮನೆಯಲ್ಲಿ ಮಂಗಗಳ ಕಾರ್ಯ ನೆರವೇರುವ ಸಾಧ್ಯತೆಗಳು ಬಹುತೇಕ ಖಚಿತ. ಹೊಸ ಬಟ್ಟೆ, ಹೊಸ ಆಭರಣ ತೊಟ್ಟರೆ ಎಲ್ಲರೂ ನಿಮ್ಮತ್ತ ನೋಡುವರು. ಬಟ್ಟೆ ಧರಿಸದಿದ್ದರೆ ನೋಡುವವರ ಸಂಖ್ಯೆ ಹೆಚ್ಚಾಗಲಿದೆ.

ಕರ್ಕಾಟಕ
ನೀವು ಎಲ್ಲರನ್ನೂ ನಂಬುವುದರಿಂದ ಎಲ್ಲರೂ ನಿಮಗೆ ಮೋಸ ಮಾಡುವುದು ಸುಲಭ. ಇದು ಬೊಗಳೆ ರಗಳೆ ಬ್ಯುರೋಗೆ ತಿಳಿಯದಂತೆ ಎಚ್ಚರ ವಹಿಸುವುದು ಸೂಕ್ತ. ವಿವಾದ ಇತ್ಯರ್ಥಕ್ಕೆ ನ್ಯಾಯಾಲಯದ ಮೊರೆ ಹೋಗಿದ್ದರೆ ಹತ್ತಾರು ವರ್ಷಗಳ ಬಳಿಕ ನಿಮಗೆ, ಅಲ್ಲದಿದ್ದರೆ ಎದುರಾಳಿ ಪಾರ್ಟಿಗಳಿಗೆ ನ್ಯಾಯ ದೊರೆಯುವುದು ಖಚಿತ. ಅಷ್ಟು ವರ್ಷಗಳ ಕಾಲ ಕರಿ"ಕೋಟಿ"ಗರು ನಿಮ್ಮಿಂದ ಕೋಟಿ ಕೋಟಿ ಪೀಕಿಸಬಹುದು.

ಸಿಂಹ
ಸಂಪಾದನೆಗಿಂತ ನೀವು ಹೆಚ್ಚು ಖರ್ಚು ಮಾಡಿದರೆ ಆ ತಿಂಗಳ ಮಟ್ಟಿಗೆ ದಿವಾಳಿಯಾಗುತ್ತೀರಿ. ಇಲ್ಲವಾದಲ್ಲಿ ಬ್ಯಾಂಕ್ ಬ್ಯಾಲೆನ್ಸ್ ಕರಗಿಸಬೇಕಾಗಿಬಂದೀತು. ಶಾಂತಿ ಎಂಬ ನಿಮ್ಮ ಕಾಲೇಜು ಗೆಳತಿ ಮನೆಗೆ ದಿಢೀರ್ ಬಂದರೆ ಗೃಹದಲ್ಲಿ ಅಶಾಂತಿ ಉಂಟಾದೀತು. ಯಾವುದೇ ಅಶುಭ ಫಲಗಳು ಸಂಭವಿಸದಿದ್ದರೆ ಆ ದಿನ ನಿಮಗೆ ಶುಭದಾಯಕವಾಗಲಿದೆ.

ಕನ್ಯಾ
ಕಲೆ, ಸಂಗೀತ, ಸಾಹಿತ್ಯ ಇತ್ಯಾದಿಗಳ ಅಕಾಡೆಮಿಗಳಿಗೆ ಅರ್ಜಿ ಸಲ್ಲಿಸಿಯೂ ನೀವು, ಕೆಲಸವಾಗಬೇಕಿದ್ದರೆ ಕತ್ತೆ ಕಾಲು ಹಿಡಿ ಎಂಬ ಉಕ್ತಿಯ ಅನುಸಾರ ರಾಜಕಾರಣಿಗಳ ಕಾಲು ಹಿಡಿಯದಿದ್ದರೆ, ಖಂಡಿತಾ ನಿಮಗೆ ಅರ್ಹತೆಯಿದ್ದರೂ ಪ್ರಶಸ್ತಿ, ಪುರಸ್ಕಾರ ಲಭಿಸುವುದಿಲ್ಲ. ರಾಜಕಾರಣಿಗಳೆಲ್ಲಾ ವಿಧಾನಸೌಧದಲ್ಲಿ ಹೊಡೆದಾಡುತ್ತಿರುವುದರಿಂದ ನಿಮ್ಮೂರಲ್ಲಿ ಅಭಿವೃದ್ಧಿ ಕಾರ್ಯಗಳಾಗಿ ಶಾಂತಿ ನೆಲಸಬಹುದು.

ತುಲಾ
ಅಪರಿಚಿತರೊಂದಿಗೆ ಸಹ-ವಾಸ ದೋಷದಿಂದ ಎಚ್ಐವಿ ಎಂಬ ಮಾನವಕುಲಕ್ಕೆ ಇದೀಗ ಅಮೂಲ್ಯವಾಗಿಬಿಟ್ಟಿರುವ (ಅದರ ಚಿಕಿತ್ಸೆಗೆ ಸಾಕಷ್ಟು ವ್ಯಯ ಮಾಡಬೇಕಾಗಿರುವುದರಿಂದ ಅದು ಅ-ಮೂಲ್ಯ) ವೈರಸ್ ನಿಮ್ಮನ್ನು ಪ್ರೀತಿಸುವ ಸಾಧ್ಯತೆಯಿದ್ದು, ಡ್ಯುಯೆಟ್ ಸಾಂಗ್ ಹಾಡಬಹುದು. ಶನಿಕಾಟವಿದ್ದರೆ ಶನಿಶಾಂತಿಯನ್ನೂ, ಗುರುಕಾಟವಿದ್ದರೆ ಗುರುಶಾಂತಿಯನ್ನೂ, ಅದೇ ರೀತಿ ಇತರ ನವಗ್ರಹಗಳ ಕಾಟವಿದ್ದರೆ ಆಯಾ ಶಾಂತಿಯನ್ನು ಮಾಡಿಸಿಕೊಳ್ಳುವುದು ಉತ್ತಮ.

ವೃಶ್ಚಿಕ
ಕರೆಂಟ್ ಬಿಲ್ ಕಟ್ಟದಿದ್ದರೆ ಬಿಲ್ ಸರಿಯಾಗಿ ಕಟ್ಟಿದವರಿಗೆ ದೊರೆಯುವ ಪವರ್ ಕಟ್ ಸೌಲಭ್ಯ ನಿಮಗೂ ಅಚಾನಕ್ ಆಗಿ ದೊರೆಯಬಹುದು. ವಿದ್ಯುತ್ ಸೌಲಭ್ಯ ಇಲ್ಲದಿದ್ದರೂ ಶಾಕ್ ಹೊಡೆಯುವ ಅನುಭವವು ವಿದ್ಯುತ್ ಇಲಾಖೆಯ ಈ ಬಿಲ್-ವಿದ್ಯೆಯಿಂದಾಗಿ ನಿಮಗೆ ಆಗಲಿದೆ. ಮನೆ ಬಾಡಿಗೆ ಬಾಕಿ ಇರಿಸಿಕೊಂಡಿದ್ದರೆ, ನೀವು ಕಚೇರಿಯಿಂದ ಸಂಜೆ ಮರಳಿದಾಗ ಮನೆಯೊಳಗಿನ ವಸ್ತುಗಳೆಲ್ಲಾ ಹೊರಗಿರುವ ಸಾಧ್ಯತೆ ಇರುವುದರಿಂದ ಮತ್ತು ಮನೆಯೊಡೆಯ ಕಣ್ಣು ದೊಡ್ಡದು ಮಾಡುತ್ತಾ ದೊಣ್ಣೆ ಹಿಡಿದು ನಿಮ್ಮನ್ನು ಸ್ವಾಗತಿಸಲು ಕಾಯುತ್ತಿರುವುದರಿಂದ ಎಚ್ಚರಿಕೆ ವಹಿಸಿ.

ಧನು
ನೀವು ರಾಜಕೀಯಕ್ಕೆ ಸೇರಿದ್ದರೆ ಓಟು ಪಡೆಯುವುದಕ್ಕಾಗಿ ಅಸತ್ಯ ನುಡಿಯಬೇಕಾಗುತ್ತದೆ. ಪ್ರಜೆಗಳು ಏನೇ ಮನವಿ ಸಲ್ಲಿಸಿದರೂ, "ಶೀಘ್ರದಲ್ಲೇ ಅದನ್ನು ಪರಿಹರಿಸುತ್ತೇವೆ, ನಾಳೆಯೇ ಅದನ್ನು ರಿಪೇರಿ ಮಾಡಿಸುವೆ, ಇನ್ನೊಂದೆರಡು ವಾರ ಕೊಟ್ಟು ನೋಡಿ, ಹೇಗೆ ಊರನ್ನೇ ಬದಲಿಸುತ್ತೇನೆ" ಎಂಬಿತ್ಯಾದಿ ಸಾಮಾನ್ಯ ಧ್ಯೇಯವಾಕ್ಯಗಳನ್ನು ಬರೆದಿಟ್ಟುಕೊಳ್ಳಿ. ಆಗಾಗ್ಗೆ ಈ ವಾಕ್ಯಗಳನ್ನು ಬಾಯಿಯಿಂದ ಉದುರಿಸಬೇಕಾಗಬಹುದು. ಆದರೆ ಇದನ್ನು "ಬೊಗಳೆ" ಎಂದು ಕರೆದು ನಮ್ಮ ಬ್ಯುರೋಗೆ ಅಪಮಾನ ಮಾಡದಿರಲು ಕೋರಲಾಗಿದೆ.

ಮಕರ
ರಾಜ್ಯದಲ್ಲೇನಾದರೂ ಅಹಿತಕರ ಘಟನೆ ನಡೆದಲ್ಲಿ, ನೀವು ಆಡಳಿತ ಪಕ್ಷದವರಾಗಿದ್ದರೆ, "ತನಿಖೆ ನಡೆಸಲಾಗುತ್ತದೆ, ದುಷ್ಕರ್ಮಿಗಳನ್ನು ಮಟ್ಟ ಹಾಕುತ್ತೇವೆ" ಎಂದೂ, ವಿರೋಧ ಪಕ್ಷದಲ್ಲಿದ್ದರೆ "ಸಿಬಿಐ ತನಿಖೆಯಾಗಲಿ, ಇದರಲ್ಲಿನ ಮಂತ್ರಿ ಕೈವಾಡದ ಬಗ್ಗೆ ತನಿಖೆಯಾಗಲಿ" ಎಂದೂ ವಿಧಾನಸೌಧದಲ್ಲಿ ಕೂಗಾಡಿದರೆ ನಿಮಗೆ ಆ ದಿನದ ವೇತನ ಗ್ಯಾರಂಟಿ. ರಾತ್ರಿ ಆಡಳಿತ-ವಿರೋಧ ಪಕ್ಷದವರಿಬ್ಬರೂ ಕುಳಿತುಕೊಂಡು ಸಾಮರಸ್ಯಕ್ಕಾಗಿ ಪಬ್‌ಗಳೂರಲ್ಲಿ ಸೋಮ-ರಸ ಹೀರುತ್ತಾ ಕುಳಿತಿರಬಹುದು.

ಕುಂಭ
ನೀವು ಕೈಗೊಳ್ಳುವ ಎಲ್ಲಾ ಕಾರ್ಯಗಳಲ್ಲಿ ಜಯ ಲಭಿಸದಿದ್ದರೆ ಅಪಜಯ ಎದುರಾಗುವುದು ಖಚಿತ. ಗೃಹ ನಿರ್ಮಾಣ ಕಾರ್ಯಕ್ಕಾಗಿ ನೀವು ಪಂಚಾಂಗ ಹಾಕದಿದ್ದರೆ, ಮನೆಯು ಮೇಲೆದ್ದು ನಿಲ್ಲುವ ಸಾಧ್ಯತೆಗಳು ಕಡಿಮೆ ಎಂದೇ ಹೇಳಬಹುದು. ಅಧಿಕಾರಿಗಳ ಕೈಬಿಸಿಯಾಗದಿದ್ದರೆ ಪರವಾನಗಿ ಪತ್ರದ ಬೆಣ್ಣೆ ಕರಗುವುದಿಲ್ಲ.

ಮೀನ
ನೀವು ಸ್ನಾನ ಮಾಡದಿದ್ದರೆ ಸಮಾಜದಲ್ಲಿ ಉತ್ತಮ ಸ್ನಾನ-ಮಾನ ಲಭಿಸುವ ಸಾಧ್ಯತೆಗಳು ಕಡಿಮೆ. ನೀವು ಬೆಂಗಳೂರಿನಲ್ಲಿದ್ದರೆ ಶುನಕ ಕಾಟವೂ, ಶುನಕ ಕಾಟವಿಲ್ಲದಿದ್ದರೆ ಬೀದಿ ಶುನಕ ಕಾಟವೂ, ಯಾವುದೂ ಇಲ್ಲದಿದ್ದರೆ ಕೈಯೊಡ್ಡುವ ಪೊಲೀಸರ ಕಾಟವೂ ದೊರೆಯಲಿದೆ. ಮದುವೆಯಾಗದಿದ್ದರೆ ಮತ್ತು ಸರಿಯಾದ ವಧು-ವರರನ್ನು ನೋಡಿಟ್ಟಿದ್ದರೆ, ಕೊನೆಯದಾಗಿ ವಿವಾಹ ನಿಶ್ಚಿತಾರ್ಥವಾಗಿದ್ದರೆ ಮತ್ತು ವಿವಾಹವಾಗುವುದು ಖಚಿತವಾಗಿದ್ದರೆ ವಿವಾಹಯೋಗವಿದೆ.ಅಸತ್ಯ ಅನ್ವೇಷಿhttp://www.blogger.com/profile/04356401566159202899noreply@blogger.comtag:blogger.com,1999:blog-25346734.post-14207166993994111272008-06-12T08:41:00.000+05:302008-06-12T08:42:56.160+05:30ಗಾಳ ಹಾಕುವ ಕೋತಿಗಳ ಪತ್ತೆ: ಬೊ.ರ. ನಾಪತ್ತೆ!
(ಬೊಗಳೂರು ಗಾಳಗಾರಿಕೆ ಬ್ಯುರೋದಿಂದ)

ಬೊಗಳೂರು. ಜೂ.12- ಬೊಗಳೂರಿನ ವಿಶೇಷವಾಗಿ ಬೊಗಳೆ ರಗಳೆ ಬ್ಯುರೋದ ಮಂದಿ ತಲೆಮರೆಸಿಕೊಳ್ಳಲು ಸಿದ್ಧತೆ ನಡೆಸಿದ್ದಾರೆ. ಅವರಿಗೆಲ್ಲ ಮೀನು ಹಿಡಿಯಲು ತಿಳಿದಿರುವುದೇ ಇದಕ್ಕೆ ಪ್ರಧಾನ ಕಾರಣವಾಗಿದೆ.

ಮೀನು ಹಿಡಿಯಲು ತಿಳಿದಿರುವ ಮಂಕಿಗಳನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ ಎಂದು ಇಲ್ಲಿ  ವರದಿ ಪ್ರಕಟವಾಗಿರುವ ಬೆನ್ನಿಗೇ ಬೊಗಳೆ ರಗಳೆ ಏಕ ಸದಸ್ಯ ಬ್ಯುರೋದ ಸಮಸ್ತ ಸಿಬ್ಬಂದಿಗಳು ಪತರಗುಟ್ಟಲಾರಂಭಿಸಿದ್ದರು. ಮಾತ್ರವಲ್ಲದೆ, ಈ ಅಜ್ಞಾನಿಗಳು ತಮ್ಮನ್ನೇ ಪತ್ತೆ ಹಚ್ಚಿರಲೂಬಹುದೇ ಎಂಬ ಶಂಕೆಯಿಂದ ಪರಾರಿಯಾಗಲು, ನಾಪತ್ತೆಯಾಗಲು, ತಲೆಮರೆಸಿಕೊಳ್ಳಲು, ಅಡಗಿ ಕೂರಲು... ಇತ್ಯಾದಿ ಎಲ್ಲದಕ್ಕೂ ಸಿದ್ಧತೆಗಳನ್ನು ಮಾಡತೊಡಗಿದ್ದಾರೆ ಎಂದು ನಿಗೂಢ ರಹಸ್ಯ ತಾಣವೊಂದರಿಂದ ಬ್ಯುರೋದ ವರದ್ದಿಗಾರರು ಎಸ್ಎಂಎಸ್ ಮೂಲಕ ವರದಿ ಕಳುಹಿಸಿದ್ದಾರೆ.

ಈ ಕುರಿತು ತೀವ್ರ ಸಂಚೋದನೆ ಕೈಗೊಂಡ ಬೊ.ರ., ಹಲವಾರು ಚಿತ್ರ ವಿಚಿತ್ರವಲ್ಲದ, ಸಾಮಾನ್ಯ ಸಂಗತಿಗಳನ್ನೆಲ್ಲಾ ಬಯಲಿಗೆಳೆದಿದೆ. ಇದೇನೂ ಹೊಸ ಸಂಚೋದನೆಯಲ್ಲ. ಈ ಹಿಂದೆಯೇ ನಮ್ಮ ಜಾರಕಾರಣಿಗಳು ಗಾಳ ಹಾಕಿ ಮೀನು ಹಿಡಿಯುತ್ತಿರುವುದನ್ನು ಕರಗತ ಮಾಡಿಕೊಂಡು, ಬೇರೆಯವರಿಗೂ ಅದನ್ನು ಕಲಿಸುವಷ್ಟರ ಮಟ್ಟಿಗೆ ಪ್ರಾವೀಣ್ಯ ಸಾಧಿಸಿದ್ದಾರೆ. ಇದರ ಬಗ್ಗೆ ನೂರಾರು ವರ್ಷಗಳ ಹಿಂದೆಯೇ ಬೊಗಳೆ ರಗಳೆ ಬ್ಯುರೋ ಇಲ್ಲಿ ವರದಿ ಮಾಡಿತ್ತು ಎಂದು ನಮ್ಮ ಸೊಂಪಾದಕರು ಚಿರಸ್ಮರಣೆ ಮಾಡಿಕೊಂಡಿದ್ದಾರೆ.

ಇದೀಗ ಕರ್ನಾಟಕದಲ್ಲಿ ನಾಟಕಗಳ ತಂಡಕ್ಕೆ ಕೊಂಚ ವಿರಾಮ ಸಿಕ್ಕಂತೆ ಕಂಡುಬಂದರೂ, ವಿರಾಮದಲ್ಲಿ ಬೇಸರ ಕಳೆಯುವುದಕ್ಕಾಗಿ ಗಾಳಗಾರಿಕೆ, ಮೀನುಗಾರಿಕೆ ಇತ್ಯಾದಿ ಎಲ್ಲ ಸೌಲಭ್ಯಗಳೂ ಇವೆ. ಹೀಗಾಗಿ ಬಿಜ್ಜೆಪ್ಪಿ ಸರಕಾರ ಸ್ಥಿರವಾಗಿರುತ್ತದೆ ಎಂದು ತೋರಿಕೆಗೆ ಕಂಡು ಬಂದರೂ 6 ಮೀನುಗಳು ನೀರಿನಿಂದ ಹೊರ ತೆಗೆದಂತೆ ಆಗಾಗ್ಗೆ ಚಡಪಡಿಸುತ್ತಲೇ ಇವೆ. ಅವುಗಳಿಗೆ ಎಲ್ಲಿ ಒಳ್ಳೆಯ ನೀರು ಸಿಗುತ್ತದೋ ಅಲ್ಲಿಗೇ ಮತ್ತೆ ಹಾರಿದರೆ ಆಶ್ಚರ್ಯವೇನಿಲ್ಲ ಎಂಬ ಕಾರಣಕ್ಕೆ, ಅಧಿಕಾರಕ್ಕೇರಲು ಸಾಧ್ಯವಾಗದೆ ಚಡಪಡಿಸುತ್ತಿರುವವರು ಈ ಮೀನುಗಳನ್ನು ಹಿಡಿಯಲು ಗಾಳ ಹಾಕುತ್ತಲೇ ಇರುತ್ತಾರೆ.

ಬಹುಶಃ ಅಜ್ಞಾನಿಗಳು ಇವರನ್ನೂ ಪತ್ತೆ ಮಾಡಿರಬಹುದೇ? ಎಂಬುದು ಎಲ್ಲರ ಶಂಕೆಗೆ ಕಾರಣವಾಗುವ ಬೊ.ರ.ಕ್ಕೇ ಮೂಡಿರುವ ಶಂಕೆಗಳಲ್ಲೊಂದಾಗಿದೆ. ತನಿಖೆ ನಡೆಯುತ್ತದೆ.ಅಸತ್ಯ ಅನ್ವೇಷಿhttp://www.blogger.com/profile/04356401566159202899noreply@blogger.comtag:blogger.com,1999:blog-25346734.post-85923464102292319352008-06-09T09:03:00.001+05:302008-06-09T09:03:57.349+05:30ಅರಿವಿಲ್ಲದೆ ಡೈವರ್ಸ್: ಹೊಸ ಉದ್ಯೋಗಾವಕಾಶ
(ಬೊಗಳೂರು ನಿರುದ್ಯೋಗ ನಿವಾರಣಾ ಬ್ಯುರೋದಿಂದ)

ಬೊಗಳೂರು, ಜೂ.9- ಗಂಡ-ಹೆಂಡಿರಿಗೆ ಗೊತ್ತಿಲ್ಲದೆಯೇ ಡೈವರ್ಸ್ ಮಾಡಿಸುವ ದಂಧೆಯೊಂದು ದೇಶದಲ್ಲಿ ಶುರುವಾಗಿದ್ದು, ಹೆಚ್ಚು ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸುತ್ತಾ, ನಿರುದ್ಯೋಗ ನಿವಾರಣೆಯಲ್ಲಿ ಪ್ರಧಾನ ಪಾತ್ರ ವಹಿಸುತ್ತಿರುವ ಪ್ರಸಂಗ ಇಲ್ಲಿ ವರದಿಯಾಗಿದೆ.

ಇದನ್ನು ಸಮರ್ಥಿಸಿಕೊಂಡಿರುವ 'ಡೈವರ್ಸ್ ಅನಾನಿಮಸ್' ಎಂಬ ಸಂಸ್ಥೆಯು, ಡೌರಿಗೂ ಡೈವರ್ಸಿಗೂ ಯಾವತ್ತೂ ಆತ್ಮೀಯ ಸಂಬಂಧವಿರುತ್ತದೆ. ಹೀಗಾಗಿ ಡೌರಿಯಲ್ಲಿ ಸಿಲುಕಿಕೊಳ್ಳಲು ಇಚ್ಛಿಸದವರು ಡೈವರ್ಸ್ ಎಂಬ ಕೋರ್ಸನ್ನು ಆರಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದೆ.

ಡೌರಿಗಿಂತಲೂ ಡೈವರ್ಸ್ ಹೇಗೆ ವಿಭಿನ್ನ ಎಂದು ಕೇಳಲಾದಾಗ, ಡೌರಿಯಲ್ಲಿ ಹರಾಸ್ಮೆಂಟ್ ಎಲ್ಲಾ ಇರುತ್ತದೆ. ಗಂಡ ಹೆಂಡಿರಿಗೆ ಜಗಳ, ಮಗು ಮೂಲೆಗುಂಪಾಗುತ್ತದೆ. ಆಮೇಲೆ ಈ ಜಗಳವು ಭಾವನಾತ್ಮಕವಾಗಿ ಮನಸ್ಸು (ಇದ್ದರೆ) ಹಿಂಡುತ್ತದೆ. ಉಭಯ ಬಣದವರಿಗೂ ತೊಂದರೆಯೇ ತೊಂದರೆ. ಆದರೆ ಈ ರೀತಿಯ ಡೈವರ್ಸಿನಿಂದ ಯಾರಿಗೂ ಯಾವುದೇ ಮಾನಸಿಕ ತಾಕಲಾಟ-ಪೀಕಲಾಟಗಳಿರುವುದಿಲ್ಲ. ಯಾರಿಗೂ ಏನೂ ಆಗಿಯೇ ಇಲ್ಲ ಎಂಬಂತಹ ಸ್ಥಿತಿ ಇರುತ್ತದೆ. ಇಲ್ಲಿ ನೋವು-ಸಿಟ್ಟು-ಸೆಡವುಗಳಿರುವುದಿಲ್ಲ ಎಂದು ಸಂಸ್ಥೆಯ ರೂವಾರಿಗಳೂ, ಇಪ್ಪತ್ತು ಬಾರಿ ಡೌರಿ ತೆಗೆದುಕೊಂಡು, ಇಪ್ಪತ್ತೇಳು ಬಾರಿ ಡೈವರ್ಸ್ ನೀಡಿ ವಿಶ್ವ ದಾಖಲೆ ಸ್ಥಾಪನೆಗೆ ಪ್ರಯತ್ನಿಸುತ್ತಿರುವ ಡೌರು ಕುಮಾರ್ ಎಂಬವರು ತಿಳಿಸಿದ್ದಾರೆ.

ಎಷ್ಟೇ ಆದರೂ, ಇದು ಬೊಗಳೆಯು ಸ್ಪಾಂಟೇನಿಯಸ್ ಆಗಿ ಡೈವರ್ಸ್ ಪಡೆಯಲು ಹಲವು ವರ್ಷಗಳ ಹಿಂದೆ ಪತ್ತೆ ಹಚ್ಚಿದ್ದ ಸ್ಪೂನ್‌-ಟೇನಿಯಸ್ ಡೈವರ್ಟಿನ್ ಎಂಬ ಟೂಲ್‌ನಷ್ಟು ಪ್ರಭಾವ ಬೀರುವುದಿಲ್ಲ ಎಂದು ಬೊಗಳೆ ಸಂಚೋದನಾ ಬ್ಯುರೋ ಕಂಡುಕೊಂಡಿದೆ.ಅಸತ್ಯ ಅನ್ವೇಷಿhttp://www.blogger.com/profile/04356401566159202899noreply@blogger.comtag:blogger.com,1999:blog-25346734.post-44057962501947773422008-06-06T11:10:00.001+05:302008-06-06T11:14:23.901+05:30ಪೆಟ್ರೋಲಿಗೆ ಬೆಂಕಿ ಹಚ್ಚಿ ಬೊಗಳೆಗೇ ಸೆಡ್ಡು!
(ಬೊಗಳೂರು ಬೊಗಳೆ ಬ್ಯುರೋದಿಂದ)
ಬೊಗಳೂರು, ಜೂ.6- ಇವರೇಕೆ ಬೊಗಳೆಗೆ ಸೆಡ್ಡು ಹೊಡೆಯುತ್ತಿದ್ದಾರೆ? ಏನಾದರೂ ಬೊಗಳೆ ರಗಳೆ ಬ್ಯುರೋವನ್ನು ಪೆಟ್ರೋಲ್ ಹಾಕಿ ಸುಟ್ಟುಬಿಡುವ ಹುನ್ನಾರವೇ ಎಂದು ನಮ್ಮ ಏಕ ಸದಸ್ಯ ಬ್ಯುರೋದ ಎಲ್ಲರೂ ಬಂದು ಸೊಂಪಾದಕರಲ್ಲಿ ಆತಂಕ ತೋಡಿಕೊಂಡ ಹಿನ್ನೆಲೆಯನ್ನು ಶೋಧಿಸಲಾಯಿತು.

ನೋಡಿದರೆ ಆಗಲೇ ಎಲ್ಲಾ ಕಡೆ ತೈಲ ಬೆಲೆ ಏರಿಕೆಯ ಬೆಂಕಿಗೆ ಪೆಟ್ರೋಲ್ ಸುರಿಯಲಾಗುತ್ತಿದೆ. ಪೆಟ್ರೋಲ್ ಬೆಲೆ ಏರಿಕೆಯಿಂದ ಉಂಟಾಗುವ ಸಾಧ್ಯಾಸಾಧ್ಯತೆಗಳ ಬಗ್ಗೆ ಈಗಾಗಲೇ ಹಲವು ಬಾರಿ ನಮ್ಮ ಬ್ಯುರೋ ಬೊಗಳೆ ಬಿಟ್ಟಿದ್ದು, ಈ ಜನನಾಯಕರು ಮತ್ತು ದನ-ನಾಯಿ-ಕರುಗಳು ಎಲ್ಲಾ ಸೇರಿಕೊಂಡು, ಜನತೆಯ ಹಿತ ಕಾಯದಿರುವ ನಿರ್ಧಾರಗಳನ್ನೆಲ್ಲಾ ಕೈಗೊಳ್ಳುತ್ತಾ, ಮತ್ತೆ ಮತ್ತೆ ಇದನ್ನೇ ಬೊಗಳೆ ಬಿಡುತ್ತಿದ್ದಾರೆ.
ಈ ಬೊಗಳೆಗಳೇನು ಅಂತ ಕೂಲಂಕಷವಾಗಿ ನೋಡಿದರೆ :

* ನಾವು ದೇಶಾದ್ಯಂತ ಪ್ರತಿಭಟನೆ ನಡೆಸುತ್ತೇವೆ, ಬೆಂಬಲ ಹಿಂತೆಗೆಯುತ್ತೇವೆ: ಎಡಪಕ್ಷಗಳ ಬೊಗಳೆ

* ಬೆಲೆ ಇಳಿಸುವವರೆಗೂ ಹೋರಾಟ: ಪ್ರತಿಪಕ್ಷಗಳ ಬೊಗಳೆ ಘೋಷಣೆ

* ನಾವು ಬೀದಿಗಿಳಿದು ಹೋರಾಡುತ್ತೇವೆ, ಪೆಟ್ರೋಲ್ ಬೆಲೆ ಇಳಿಸುವವರೆಗೆ ವಿರಮಿಸುವುದಿಲ್ಲ: ಎಲ್ಲ ಅಂಗ- ಅನಂಗ ಪಕ್ಷಗಳಿಂದ ಬೊಗಳೆ ಘೋಷಣೆ

* ಹಣದುಬ್ಬರಕ್ಕೆ ಕಡಿವಾಣ ಅತ್ಯಗತ್ಯ, ಅದನ್ನು ಸಾಧಿಸಿಯೇ ಸಿದ್ಧ: ಮಾನ್ಯ ನಿಧಾನಿ ಘೋಷಣೆ

* ಆಹಾರ ವಸ್ತುಗಳು ಸಾಕಷ್ಟು ಸ್ಟಾಕ್ ಇವೆ, ಬೆಲೆ ಏರಲು ಬಿಡುವುದಿಲ್ಲ: ಆಹಾರ ಸಚಿವರ ಬೊಗಳೆ ಘೋಷಣೆ

* ಕಾಂಗ್ರೆಸ್ ಕಾ ಹಾತ್ ಆಮ್ ಆದ್ಮೀ ಕಾ ಸಾಥ್! --- (ಆಮ್ ಆದ್ಮೀ ಕೇ ಗಲೇ ಕೇ ಊಪರ್?)

* ಹಣದುಬ್ಬರಕ್ಕೆ ಕಡಿವಾಣ ಹಾಕಲು ಹಾಗೆ ಮಾಡಬೇಕು, ಹೀಗೆ ಮಾಡಬೇಕು: ಪಿತ್ತ ಸಚಿವರು

* ಬಡವರ ನಿರ್ಮೂಲನೆ ಅತ್ಯಗತ್ಯ: ಸರಕಾರ ಘೋಷಣೆ (ಖಂಡಿತಾ ಬೊಗಳೆಯಂತೆ ತೋರುವುದಿಲ್ಲ!)

* ದೇಶದಲ್ಲಿ ಬಡವರೇ ಇಲ್ಲದಂತೆ ಮಾಡುತ್ತೇವೆ: ಮತ್ತೊಂದು ಸರಕಾರದ ಘೋಷಣೆ (ಡಿಟ್ಟೋ ಮೇಲಿನದೇ!)

* ಮಂತ್ರಿಗಳು, ಮಾಗಧರು, ಅಧಿಕಾರಿಗಳು ಐಷಾರಾಮ ಕಡಿಮೆ ಮಾಡಬೇಕು, ವಿದೇಶ ಪ್ರವಾಸ ಕಡಿಮೆ ಮಾಡಬೇಕು: ಮಾನ್ಯ ನಿಧಾನಿ ಘೋಷಣೆ

* ಬಡವರ ತೆರಿಗೆ ಹಣದಲ್ಲಿ ಐಷಾರಾಮಿ ಜೀವನ ಮಾಡುತ್ತಾ, ಗೂಟದ ಕಾರಿಗೊಂಡು, ಕೈಗೊಂದು ಆಳುಗಳೊಂದಿಗೆ ಸೇವೆ ಮಾಡಿಸಿಕೊಳ್ಳುತ್ತಾ, ಜೇಬು ತುಂಬಿಸಿಕೊಳ್ಳುತ್ತಿರುವವರನ್ನು ದೇಶದಿಂದಲೇ ಹೊಡೆದೋಡಿಸಬೇಕು: ಯಾರು ಹೇಳಿದ್ದು ಅಂತ ಯೋಚಿಸಿ?....
ಉತ್ತರ: ಭವ್ಯ ಭಾರತದ ನಗಣ್ಯವಾಗಿಬಿಟ್ಟಿರುವ ಬಡ ಪ್ರಜೆ!ಅಸತ್ಯ ಅನ್ವೇಷಿhttp://www.blogger.com/profile/04356401566159202899noreply@blogger.comtag:blogger.com,1999:blog-25346734.post-13369177646420997962008-06-04T17:54:00.001+05:302008-06-04T17:57:43.283+05:30Cheap Minister ಬರ್ತ್‌ಡೇ ಗಿಫ್ಟ್!
(ಬೊಗಳೂರು cheap ಬ್ಯುರೋದಿಂದ)

ಬೊಗಳೂರು, ಜೂ.4- Chief ಆಗಬೇಕಿದ್ದ ವಯೋವೃದ್ಧರೂ, ಅಜ್ಞಾನವೃದ್ಧರೂ ಆಗಿರುವ ತಮಿಳುನಾಡು ಮುಖ್ಯಮಂತ್ರಿಗಳು 85 ವರ್ಷ ಪೂರೈಸಿದ ದಿನ Cheap ಆಗಿ ಪರಿಗಣಿಸಲ್ಪಟ್ಟಿದ್ದಾರೆ. ಇದಕ್ಕೆ ಕಾರಣ, ಎಂದೂ ಕೂಡ ಏರುತ್ತಲೇ ಇರುವ, ಯಾವುದೇ ವಸ್ತುಗಳ ಬೆಲೆ ಇಳಿಕೆಯಾದರೂ ಇಳಿಯದೇ ಇರುವ ಹೋಟೆಲ್ ತಿಂಡಿಗಳ ಬೆಲೆಯನ್ನು Cheap ಮಾಡಿಸಿದ್ದು.

ಈಗ ಚೀಪ್ ಮಿನಿಸ್ಟರು ಇಡ್ಲಿಯ ಬೆಲೆ ಇಳಿಸಿರುವುದರಿಂದ ಅವರು ಇನ್ನು ಮುಂದೆ ಕೇಕು ಕತ್ತರಿಸಿ ಬರ್ತ್ ಡೇ ಆಚರಿಸಬಾರದು. ಏನಿದ್ದರೂ ಇಡ್ಲಿ ಕತ್ತರಿಸಿಯೇ ಹುಟ್ಟು ಹಬ್ಬ ಆಚರಿಸಬೇಕು. ಯಾಕೆಂದರೆ, ಕೇಕು ಎನ್ನುವುದು ತಮಿಳು ಸಂಸ್ಕೃತಿಗೆ ವಿರೋಧವಾದದ್ದು. ಇಡ್ಲಿ ದೋಸೆಯೇ ತಮಿಳು ಭಾಷೆಯ ಬ್ರ್ಯಾಂಡ್ ಎಂಬ ಕೋಲಾಹಲವೂ ತಮಿಳುನಾಡಿನಿಂದ ಕೇಳಿಬರುತ್ತಿದೆ.

ಆದರೆ ಬರೇ ಇಡ್ಲಿ ಕತ್ತರಿಸಿ ಸುಮ್ಮನಿರಬೇಕಾದ ಅವರು, ಸಮುದ್ರದ ಸೇತುವನ್ನೇ ಕತ್ತರಿಸಿ ಬರ್ತ್ ಡೇ ಆಚರಿಸುತ್ತೇನೆ ಎಂದು ಹೇಳಿರುವುದು ಮಾತ್ರ ಹಲವರ ಹುಬ್ಬುಗಳು ತೂಗುಸೇತುವೆಯ ಮಾದರಿಯಲ್ಲಿ ವಕ್ರವಾಗಿ ಮೇಲೇರಲು ಕಾರಣವಾಗಿದೆ.

ಇದರ ನಡುವೆಯೇ, ಕೇಕಿನ ಬದಲು ಹೊಗೇನಕಲ್ಲನ್ನೂ ಕತ್ತರಿಸುತ್ತೇನೆ, ತಮಿಳುನಾಡಿನ ಅಧಿಕಾರವನ್ನೂ ಮಕ್ಕಳಾದ ಅಳಗಿರಿ-ಸ್ಟಾಲಿನ್‌ಗೆ ಕತ್ತರಿಸಿ ಹಂಚುತ್ತೇನೆ, ಕುರಿಯನ್ನೂ ಕತ್ತರಿಸಿ ಬರ್ತ್‌ಡೇ ಸೆಲೆಬ್ರೇಟ್ ಮಾಡುತ್ತೇನೆ ಎಂದೆಲ್ಲಾ ಘೋಷಿಸಿರುವುದಾಗಿ ಯಾರೂ ವರದಿ ಮಾಡಿಲ್ಲ.

ಆದರೆ ಇದೇ ವರದಿಯಲ್ಲಿ, ತಮಿಳುಕಾಡಿನಲ್ಲಿದ್ದುಕೊಂಡು ಬಾವಿಯೊಳಗಿನ ಕಪ್ಪೆಯಂತೆ ವಟಗುಟ್ಟಿರುವ ಅವರು, ನಮಗೆ ಒಳ್ಳೆಯ ನೆರೆಹೊರೆಯವರಿಲ್ಲ. ನೆರೆ ಬರುತ್ತದೆ, ಅದರ ಜೊತೆಗೆ ಹೊರೆಯೂ ಇದೆ. ಹೀಗಾಗಿ ತಮಿಳರನ್ನು ತಮಿಳರೇ ರಕ್ಷಿಸಿಕೊಳ್ಳಬೇಕಷ್ಟೆ ಎಂಬರ್ಥದ ಮಾತುಗಳನ್ನು ಆಡಿರುವುದು ಬೊಗಳೆಯ ಸುದ್ದಿಗೆ ಗ್ರಾಸವಾಗಿದೆ.
ಅಸತ್ಯ ಅನ್ವೇಷಿhttp://www.blogger.com/profile/04356401566159202899noreply@blogger.comtag:blogger.com,1999:blog-25346734.post-81512881881161416222008-06-03T08:29:00.000+05:302008-06-03T08:30:34.158+05:30ಇನ್ನು ಮುಂದೆ ಒಳಉಡುಪುಗಳನ್ನೂ ಧರಿಸಬಹುದು!
(ಬೊಗಳೂರು ಬಿಚ್ಚೋಲೆ ಬ್ಯುರೋದಿಂದ)

ಬೊಗಳೂರು, ಜೂ.3- ಇನ್ನು ಯಾವುದೇ ಎಗ್ಗಿಲ್ಲದೆ ಮಂದಿರಗಳಿಗೆ ಪ್ರವೇಶಿಸಬಹುದು ಎಂಬುದು ಈಗ ಖಚಿತವಾಗಿದೆ. ಒಳಉಡುಪುಗಳನ್ನು ಕೂಡ ಧರಿಸಬಹುದು ಎಂದು ತೀರ್ಪು ನೀಡಿದ ಹಿನ್ನೆಲೆಯಲ್ಲಿ ಸಂಪ್ರದಾಯವಾದಿಗಳು ಬೊಗಳೆ ರಗಳೆ ಕಚೇರಿಯೆದುರು ಬಂದು ನಿಟ್ಟುಸಿರುಬಿಟ್ಟಿದ್ದಾರೆ.

ದುಡ್ಡು ಲೆಕ್ಕ ಮಾಡುವಾಗ ಕೆಲವರು ಇದೇ Underwear ಅನ್ನು Overweight ಆಗಿಸುವ ಮೂಲಕ ತಮ್ಮ ಜೇಬನ್ನೂ ಹರಿಯುವಷ್ಟರ ಮಟ್ಟಿಗೆ ತುಂಬಿಸಿಕೊಳ್ಳುತ್ತಿದ್ದರು. ಹೀಗಾಗಿ ದೇವಳದ ಆಡಳಿತವು ಎಲ್ಲರೂ ಎಲ್ಲವನ್ನೂ ಬಿಚ್ಚಿಹಾಕಿ ಹಣ ಲೆಕ್ಕ ಮಾಡಲು ಬರಬೇಕು ಎಂದು ಹೇಳಿತ್ತು. ಅದು... ಅತ್ತ ಇತ್ತ ಅಡ್ಡಾಡುತ್ತಿದ್ದ ಬೊಗಳೂರಿನ ಮಂದಿಗೆ ಇರಿಸುಮುರಿಸಿಗೆ ಕಾರಣವಾದ ಹಿನ್ನೆಲೆಯಲ್ಲಿ ಅನ್ಯಾಯಾಲಯವು ಈ ಕ್ರಮ ಕೈಗೊಂಡಿರುವುದಾಗಿ ಮೂಲಗಳು ವರದ್ದಿ ಮಾಡಿವೆ.

ಒಳಉಡುಪುಗಳನ್ನು ಕೂಡ ಧರಿಸಬಹುದು ಎಂಬ ಈ ತೀರ್ಪಿನಿಂದ ಸಂತಸಗೊಂಡಿರುವ ಬೊಗಳೂರಿನ ಜನತೆ, ಒಳಉಡುಪುಗಳು ಕೂಡ ಧರಿಸಲು ಯೋಗ್ಯವಾದುದು ಎಂದು ಜ್ಞಾನೋದಯ ಮಾಡಿಸಿದ ಪ್ರಕರಣಕ್ಕೆ ಅಭಿನಂದಿಸಿದ್ದಾರೆ.

ಆದರೆ, ಈ ತೀರ್ಪು ಸಿನಿಮಾ ನಟಿಯರಿಗೆ ಅನ್ವಯವಾಗುವುದಿಲ್ಲ ಎಂದು ಬಿಚ್ಚೋಲೆ ನಟೀಮಣಿಯರ ಸಂಘದ ಅಧ್ಯಕ್ಷೆ ಗೌರಮ್ಮ ಅವರು ತುರ್ತು ಪಾನ-ಪತ್ರಿಕಾಗೋಷ್ಠಿ ಕರೆದು ಘೋಷಿಸಿದ್ದಾರೆ.ಅಸತ್ಯ ಅನ್ವೇಷಿhttp://www.blogger.com/profile/04356401566159202899noreply@blogger.comtag:blogger.com,1999:blog-25346734.post-21457840955310419082008-05-30T08:40:00.000+05:302008-05-30T08:40:02.547+05:30ಬೊಗಳೆಗೆ 50 ಸಾವಿರದ ಹಿಟ್ಟು
(ಬೊಗಳೂರು ಸೊಂಪಾದkeyಯ ಬ್ಯುರೋದಿಂದ)
ಬೊಗಳೆ ಸ್ಫೋಟಗೊಂಡು 50 ಕಿಲೋ ಚಪಾತಿ ಹಿಟ್ಟುಗಳು ಛಿದ್ರಛಿದ್ರವಾಗಿದ್ದು, ಮತಯಾಚನೆ ಮತ್ತು ಮತಪೆಟ್ಟಿಗೆ ಅಪಹರಣ ಇತ್ಯಾದಿಗಳಲ್ಲಿ ನಿರತವಾಗಿದ್ದ ಬೊಗಳೆ ರಗಳೆ ಬ್ಯುರೋದ ಅರಿವಿಗೇ ಬಂದಿರಲಿಲ್ಲ. ಹೀಗಾಗಿ ಇದನ್ನು ನಮ್ಮ ವಿರೋಧೀ ಪತ್ರಿಕೆಗಳು ಬ್ರೇಕಿಂಗ್ ಸುದ್ದಿಯಾಗಿ ಪ್ರಕಟಿಸುವ ಮೊದಲೇ ಪ್ರಕಟಿಸಲು ನಾವಿಲ್ಲಿ ನಿರ್ಧರಿಸಿದ್ದೇವೆ.

ಇದಂತೂ ಹಾರ್ಟ್ ಬ್ರೇಕಿಂಗ್ ಸುದ್ದಿಯೋ ಅಥವಾ ಬ್ಲಾಗರ್ ಡಾಟ್ ಕಾಂ ಅವರ ಜಾಗ (ಸರ್ವರಿನ ಡಿಸ್ಕ್ ಸ್ಪೇಸ್) ಬ್ರೇಕ್ ಮಾಡುವ ಸುದ್ದಿಯೋ, ಅಂತೂ ಈ ಬೊಗಳೆ ಬ್ಲಾಗು 50 ಸಾವಿರ ಮೆಟ್ಟಿಲೇರಿ ಬಂದು ನಿಂತಿರುವುದು ಏಕಸದಸ್ಯ ಬ್ಯುರೋದ ಸಮಸ್ತ ಸಿಬ್ಬಂದಿಗಳಿಗೆ ಹೆಮ್ಮೆಯ ಸಂಗತಿಯಾಗಿದೆ. ಆದರೆ ಕೇವಲ ಒಬ್ಬನೇ ಒಬ್ಬ ಲೇಖಕ, ಪ್ರಕಾಶಕ,ಸಂಪಾದಕ, ಕರಡಚ್ಚು ತಿದ್ದುಗ ಮತ್ತು ಎಲ್ಲಕ್ಕೂ ಮೊದಲು.... ಒಬ್ಬನೇ ಒಬ್ಬ ಓದುಗನೊಂದಿಗೆ ಈ blog ನ ಕನ್ನಡೀಕೃತ ರೂಪವಾದ 'ಬೊಗಳೆ' ಹುಟ್ಟಿದಾಗಲೇ ಎಲ್ಲರೂ ತಡವಾಗಿ ಹುಟ್ಟಿದ್ದೇಕೆ ಅಂತ ಗುಲ್ಲೆಬ್ಬಿಸಿದ್ದರು.

ಈ ಬಗ್ಗೆ ಅನ್ವೇಷಣೆ ಕೈಗೊಂಡಾಗಲೇ ಗೊತ್ತಾದದ್ದು ಅಸಲು ವಿಷಯ ಏನೂಂತ. ಯಾಕೆಂದರೆ ಬೊಗಳೆ ಹುಟ್ಟಿದ್ದು 2006ರ ಏಪ್ರಿಲ್ 4ರಂದು. ಮೂರು ದಿನ ತಡವಾಗಿ ಹುಟ್ಟಿದ್ದೇಕೆ ಅಂತಲೇ ಅವರು ನಿಜವಾಗಿ ಕೇಳಿದ್ದು! ಆದರೂ ಬೊಗಳೆ ಜನ್ಮದಿನ ಏಪ್ರಿಲ್ ಒಂದರಂದೇ ಎಲ್ಲೆಡೆ ಆಚರಿಸುವ ಪರಿಪಾಠವಿದೆ, ಈಗಲೂ ಈ ಬಗ್ಗೆ ಗಹನವಾದ ಚರ್ಚೆಯೂ ಮುಂದುವರಿಯುತ್ತಲೇ ಇದೆ. ಆದರೆ ಇದರಲ್ಲಿ ಬೊಗಳೆಯ ಅನ್ವೇಷಿಯ ಪಾತ್ರ ಏನೂ ಇಲ್ಲ ಎಂದು ನಮ್ಮ ಸೊಂಪಾದ-ಕರುಗಳು ಸ್ಪಷ್ಟಪಡಿಸಿದ್ದಾರೆ.

415ನೇ ಪೋಸ್ಟಿನ ವೇಳೆಗೆ 50 ಸಾವಿರಕ್ಕೂ ಹೆಚ್ಚು ಬಾರಿ ಓಡುಗರಿಂದ ಹಿಟ್ಟಿಸಿಕೊಂಡರೂ 'ಭ್ರಷ್ಟಾಚಾರದ ಬೀಜ ನೂರ್ಕಾಲ ಬಾಳುತ್ತದೆ' ಅಂತ ನಾವು ಈ ಹಿಂದೆ ಬಿಟ್ಟಿದ್ದ ಬೊಗಳೆಯ ಅನುಸಾರವಾಗಿ, ಬೊಗಳೆಯೂ ಈ ತಂತ್ರಜ್ಞಾನದ ಮೊರೆ ಹೋಗಿದೆಯೋ ಎಂಬ ಬಗ್ಗೆ ಯಾರು ಕೂಡ ಸಂದೇಹ ಪಡಬೇಕಾದ್ದಿಲ್ಲ ಅಂತ ಈ ಮೂಲಕ ಸ್ಪಷ್ಟಪಡಿಸಲಾಗುತ್ತಿದೆ.

10 ಸಾವಿರ ಹಿಟ್ಟುಗಳು ಬಿದ್ದಾಗಲೇ ಮಾಡಿದ ಆವಾಂತರವಿನ್ನೂ ನೆನಪಿದೆ. ಅಂದು ಬಂದು ಹಾರೈಸಿದ ಬೊಗಳೋದುಗರು ಇಂದೂ ಭೇಟಿ ನೀಡುತ್ತಿದ್ದಾರೆ ಎಂಬುದು ನೆಮ್ಮದಿ! ಆದರೂ ನಾವು ಈ ಸಂದರ್ಭದಲ್ಲಿ ಕೊಟ್ಟ ಕೊನೆಗೆ ನಾವು ಬೊಗಳೆ ಬಿಡದಿರಲು ನಿರ್ಧರಿಸಿದ್ದೇವೆ. ಅಂದ್ರೆ ಬೆಚ್ಚಿ ಬೀಳದಿರಿ, ಓ'ಡು'ಗರಾಗಬೇಡಿರಿ... ಈ ಕೆಳಗಿನ ಒಂದು ವಾಕ್ಯ ಮಾತ್ರ ಬೊಗಳೆ ಬಿಡಲು ಆಗುತ್ತಿಲ್ಲ. ಅಥವಾ ಬಿಟ್ಟದ್ದು ಬೊಗಳೆಯಾಗುವುದೂ ಸಾಧ್ಯವಿಲ್ಲ.

"ಓದುಗರು, ಓದಿದ ತಕ್ಷಣ ಬಿಟ್ಟೋಡುಗರು, ಕಾಮೆಂಟಿಗರು, ಪ್ರೋತ್ಸಾಹಿಗರು, ಮೆಚ್ಚುಗರು, ಬೆಚ್ಚುಗರು, ಟೀಕಿಗರು, ಟೆಕ್ಕಿಗರು, ಲೆಕ್ಕಿಗರು... ಆಗಿರುವವರಿಗೆಲ್ಲಾ ಕೃತಜ್ಞತೆಗಳು ಇಲ್ಲಿ ತುಂಬಿ ತುಳುಕಾಡುತ್ತಿವೆ"ಅಸತ್ಯ ಅನ್ವೇಷಿhttp://www.blogger.com/profile/04356401566159202899noreply@blogger.comtag:blogger.com,1999:blog-25346734.post-35025017541646443252008-05-29T13:33:00.000+05:302008-05-29T13:34:51.084+05:30ಠೇವಣಿ ನಷ್ಟ: ಬೊಗಳೆಯೆದುರು ವಟವಟಾಳ್ ಪ್ರತಿಭಟನೆ!
(ಬೊಗಳೂರು ಅಪ್ರಜ್ಞಾವಸ್ಥೆ ಬ್ಯುರೋದಿಂದ)
ಬೊಗಳೂರು, ಮೇ 28- ಒಮ್ಮೆಯೂ ತಮ್ಮ ಸ್ವಕ್ಷೇತ್ರವಾದ ಚಾಮರಾಜನಗರದಲ್ಲಿ ಯಾವುದೇ ಪ್ರತಿಭಟನೆ ಮಾಡದೆ, ರಾಜಧಾನಿಯಲ್ಲಿ ಮಾತ್ರವೇ ಹುಲಿಯಂತಿದ್ದ ವಟವಟಾಳ್ ಗಾನರಾಜ್ ಅವರಿಗೆ ಪ್ರತಿಭಟನೆಗೆ ಮತ್ತೊಂದು ಅವಕಾಶ ಸಿಕ್ಕಿದೆ.

ಅದೆಂದರೆ ಅವರು ಚುನಾವಣಾ ಆಯೋಗದಲ್ಲಿ ಇಟ್ಟಿದ್ದ ಠೇವಣಿಯು ನಷ್ಟವಾಗಿರುವುದು. ಹಣಕ್ಕೆ ಈಗ ಬೆಲೆ ಇಲ್ಲದಂತಾಗಿರುವುದರಿಂದ ಈ ಠೇವಣಿ ನಷ್ಟವಾಗಲು ಹಣದುಬ್ಬರವೇ ಕಾರಣ ಎಂದು ಹೇಳುತ್ತಿರುವ ಅವರು, ತಮ್ಮನ್ನು ಸೋಲಿಸಿದ ಮತದಾರರ ವಿರುದ್ಧ ಪ್ರತಿಭಟನೆ ಮಾಡಲು ಸಿದ್ಧತೆ ನಡೆಸುತ್ತಿದ್ದಾರೆ.

ಈ ಬಾರಿ ಕತ್ತೆಗಳ ಉದ್ಧಾರಕ್ಕಾಗಿ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ್ದ ತಮಗೆ ಕತ್ತೆಗಳೇ ಲತ್ತೆ ಕೊಟ್ಟಿವೆ ಎಂದು ಹೇಳಿಕೊಂಡು ತಿರುಗಾಡುತ್ತಿರುವ ಅವರು, ಹೇಗಾದರೂ ಮಾಡಿ ಪ್ರತಿಭಟನೆ ಮಾಡಬೇಕಾಗಿದೆ. ಆದರೆ ತಮ್ಮ ಕ್ಷೇತ್ರವಾಗಿರುವ ಚಾಮರಾಜನಗರಕ್ಕೆ ಹೋಗುವ ದಾರಿ ಯಾವುದು ಎಂದು ತಿಳಿಯದೆ ಕಂಗಾಲಾಗಿರುವುದಾಗಿ ಬೊ.ರ. ಪತ್ತೆ ಹಚ್ಚಿದೆ.

ತಾವು ಇದುವರೆಗೆ ವಿಧಿವಿಧಾನಸೌಧದಲ್ಲೇ ಕುಳಿತು ಫೇಮಸ್ಸಾಗಿದ್ದು, ಚಾ.ನಗರಕ್ಕೆ ಹೋಗದೆ ಅದೆಷ್ಟೋ ವರ್ಷಗಳಾಗಿದ್ದವು. ಅಲ್ಲಿನ ಮತದಾರರು ಅದು ಹೇಗೆ ಮ್ಯಾಜಿಕ್ ಮಾಡಿದರೋ... ನಾನು ರಾಜಧಾನಿಯಲ್ಲಿರುವಾಗಲೇ ನನ್ನನ್ನು ಚಾ.ನಗರದಲ್ಲಿದ್ದುಕೊಂಡೇ ಗದ್ದುಗೆಯಿಂದ ಇಳಿಸಿಬಿಟ್ಟರಲ್ಲಾ... ಅದು ಹೇಗೆ ಸಾಧ್ಯವಿರಬಹುದು ಎಂದು ಅವರು ಲೆಕ್ಕಾಚಾರ ಹಾಕುತ್ತಿದ್ದಾರೆ. ಅವರು ಈ ಬಗ್ಗೆ ತಮಗೆ ದೊರೆತ ಮತಗಳ ಸಂಖ್ಯೆಗಿಂತಲೂ ಒಂದು ಹೆಚ್ಚು ಅಂದರೆ 11,414 ಬಾರಿ ಲೆಕ್ಕಾಚಾರ ಮಾಡಿದ್ದಾರೆ ಎಂಬುದನ್ನು ನಮ್ಮ ವರದ್ದಿಗಾರರು ಪತ್ತೆ ಹಚ್ಚಿದ್ದಾರೆ.

ತಮ್ಮ ಪ್ರತಿಭಟನಾ ಯೋಜನೆಯ ಕಾರಣಗಳನ್ನು ಪತ್ತೆ ಹಚ್ಚುತ್ತಾ ಪಟ್ಟಿ ಮಾಡುತ್ತಿರುವ ವಟವಟಾಳ್ ಅವರು, ಮೊದಲ ಕಾರಣವೆಂದರೆ, ತಾನು ಹಿಂದೆ ಎಲ್ಲಿಂದ ಆರಿಸಿ ಬಂದಿದ್ದೆ ಎಂಬುದು ತನಗೇ ತಿಳಿದಿಲ್ಲದಿದ್ದರೂ, ಅಲ್ಲಿನ ಜನ ಮಾತ್ರ ಸರಿಯಾಗಿ ತಿಳಿದುಕೊಂಡಿರುವುದು. ಎರಡನೇ ಕಾರಣವೆಂದರೆ, ತಮ್ಮ ಊರಿನ ಜನರಿಗೆ ಶಿಕ್ಷಣ ಹೆಚ್ಚಾಗಿರುವುದು. ಅದು ಯಾರೋ ಪುಣ್ಯಾತ್ಮ ಊರಿನ ಜನರನ್ನು ಬಡಿದೆಬ್ಬಿಸಿ, ಅವರಲ್ಲಿ ಜಾಗೃತಿ ಮೂಡಿಸಿ, ಸುಶಿಕ್ಷಿತರಾಗಿರುವಂತೆ ಮಾಡಿದ್ದಾರೆ. ಇದೇ ಕಾರಣಕ್ಕೆ ತನ್ನ ಸೋಲಾಗಿದೆ ಎಂದಿರುವ ಅವರು, ತಮ್ಮ ಕ್ಷೇತ್ರದ ಜನರನ್ನು ಈ ಪರಿ ಬುದ್ಧಿವಂತರಾಗಿಸಿದ್ದು ಯಾರು ಎಂಬ ಬಗ್ಗೆ ತನಿಖೆ ನಡೆಸುವುದಾಗಿ ಘೋಷಿಸಿದ್ದಾರೆ.

ಬರದ ಜಿಲ್ಲೆಯೆಂದೇ ಖ್ಯಾತಿ ಹೊತ್ತ ಚಾಮರಾಜನಗರದಲ್ಲಿ, ನೀರು ಬಿಡಿ, ಚರಂಡಿ ಹರಿಯಲೂ ಒಂದ ಯೋಜನೆ ರೂಪಿಸದಿದ್ದುದಕ್ಕಾಗಿಯೇ ವಟವಟಾಳ್ ಅವರಿಗೆ ಪ್ರಜ್ಞಾವಂತ ಮತದಾರರು ವಿಶ್ರಾಂತಿ ನೀಡಿ ಕಳುಹಿಸಿದ್ದಾರೆ, ಮತ್ತೊಮ್ಮೆ ವಿಧಾನಸೌಧಕ್ಕೆ ಆರಿಸಿ 'ಬರ'ದಂತೆ ನೋಡಿಕೊಂಡಿದ್ದಾರೆ ಎಂದು ಅಲ್ಲಿನ ಜನರು ಬೊಗಳೆ ರಗಳೆಗೆ ನೀಡಿದ ಸ್ವಯಂಪ್ರೇರಿತವಾದ ಮತ್ತು ವಿಶೇಷವಾದ ಸಂದರ್ಶನದಲ್ಲಿ ಗುಡುಗಿದ್ದಾರೆ.ಅಸತ್ಯ ಅನ್ವೇಷಿhttp://www.blogger.com/profile/04356401566159202899noreply@blogger.comtag:blogger.com,1999:blog-25346734.post-91907541956998583622008-05-28T07:00:00.003+05:302008-05-28T07:38:51.590+05:30ಇದು ಜನಸೇವೆಗಾಗಿ ದೊರೆತ ವಿಶ್ರಾಂತಿ: ಗೆದ್ದವರು
(ಬೊಗಳೂರು ದನಸೇವಾ ಬ್ಯುರೋದಿಂದ)
ಬೊಗಳೂರು, ಮೇ 28- ಇದುವರೆಗೆ ಕಷ್ಟಪಟ್ಟು ಜನ ಸೇವೆ ಮಾಡುತ್ತಿದ್ದ ಜನನಾಯಕರನೇಕರಿಗೆ ರಾಜ್ಯದ ಮತದಾರ ತಾನಾಗಿಯೇ 'ವಿಶ್ರಾಂತಿ' ನೀಡಿರುವಂತೆಯೇ, ತಮಗೂ ಸಮಪಾಲು-ಸಮಬಾಳು ಎಂಬ ಧ್ಯೇಯ ಹೊಂದಿದ ಗೆದ್ದವರು ಕೂಡ ವಿಧಿವಿಧಾನಸೌಧದಲ್ಲಿ ವಿಶ್ರಾಂತಿ ತೆಗೆದುಕೊಳ್ಳಲು ಸಿದ್ಧತೆಗಳನ್ನು ನಡೆಸುತ್ತಿದ್ದಾರೆ.

ಇದಕ್ಕವರು ಕೊಡುವ ಕಾರಣಗಳೂ ಒಪ್ಪತಕ್ಕದ್ದೇ. ಎಲ್ಲರೂ ತಮ್ಮ ಗೆಲುವನ್ನು ಪಟಾಕಿಗೆ ದುಡ್ಡು ಸುರಿದು, ತುಂಡು ತಿಂದು ಗುಂಡೇರಿಸಿ ಆಚರಿಸಿಕೊಳ್ಳುತ್ತಾರೆ. ನಾವು ಅವರಿಗಿಂತ ವಿಭಿನ್ನ. ಭಿನ್ನವಾಗಿಯೇ ಆಚರಿಸುತ್ತೇವೆ. ನಾವೆಲ್ಲರೂ ವಿಶ್ರಾಂತಿ ತೆಗೆದುಕೊಳ್ಳುವ ಮೂಲಕ ಗೆಲುವು ಆಚರಿಸುತ್ತೇವೆ ಎಂದು ಅವರೆಲ್ಲರೂ ಬೊಗಳೆ ರಗಳೆ ಬ್ಯುರೋದೆದುರು ತಾವಾಗಿಯೇ ಸಂದರ್ಶನ ನೀಡುತ್ತಾ ಹೇಳಿದ್ದಾರೆ.

ಕತ್ತೆ ಕುದುರೆ ಲೆಕ್ಕಾಚಾರ
ಈಗೇನಿದ್ದರೂ ಕುದುರೆಗಳಿಗೇ ಕಾಲ. ಕುದುರೆ ವ್ಯಾಪಾರ ಒಳ್ಳೆ ಭರ್ಜರಿ ಭರದಿಂದ ಸಾಗುತ್ತಿದೆ. 110 ಕುದುರೆಗಳಿದ್ದರೂ, ಕೇವಲ ಮೂರು ಕುದುರೆಗಳಿಗೇ ಐಷಾರಾಮಿ ಲಾಯ ಕಟ್ಟಬೇಕಾಗಿರುವುದು ಕುದುರೆ ಲಾಯದ ಒಡೆಯರ ದುರ್ದೈವ. ಒಂದಿಡೀ ರಾಜ್ಯದ ಐದುವರೆ ಕೋಟಿ ಜನತೆ ಈ ಮೂರು ವಿಶಿಷ್ಟ, ಅತಿವಿಶಿಷ್ಟ ಮತ್ತು ಅತಿಅತಿ ವಿಶಿಷ್ಟ ಕುದುರೆಗಳ ಮುಷ್ಟಿಯೊಳಗೆ ಸಿಲುಕಿದ್ದು, ಕೆಲಸವಾಗಬೇಕಿದ್ದರೆ ಕಾಲು ಹಿಡಿಯಲೇ ಬೇಕು ಎಂಬ ಪರಿಸ್ಥಿತಿ ಇರುವುದರಿಂದ ಇಲ್ಲಿ ಕತ್ತೆಗಳೇ ಆಗಬೇಕೆಂದಿಲ್ಲ, ಮೂರು ಕುದುರೆಗಳ ಕಾಲು ಹಿಡಿದರೂ ಸಾಕಾಗುತ್ತದೆ, ಕೆಲಸ ಮಾಡಿಸಿಕೊಳ್ಳಲು. ಅದೂ ಅಲ್ಲದೆ, ಅವರಿಗೆ ಇವರ ಕೆಲಸವಾಗಬೇಕು, ಇವರಿಗೆ ಅವರ ಕೆಲಸವಾಗಬೇಕು ಎಂದಿರುವುದರಿಂದ ಯಾರು ಯಾರನ್ನು ಬೇಕಾದರೂ ಯಾವುದೇ ಪ್ರತಿಷ್ಠಿತ ಸ್ಥಾನಗಳಲ್ಲಿ ಕೂರಿಸಿಕೊಳ್ಳಬಹುದು ಎಂದು ಬೊ.ರ. ತೀರ್ಪು ನೀಡುತ್ತಿದೆ.

ಈ ಕುದುರೆಗಳು ಕೂಡ ಗೆದ್ದೆತ್ತಿನ ಬಾಲ ಹಿಡಿದವುಗಳೇ ಆಗಿರುವುದರಿಂದಾಗಿ ಇವುಗಳ ಕಾಲು ಹಿಡಿಯುವುದಕ್ಕೆ ಅಡ್ಡಿಯಿಲ್ಲ ಎಂಬುದು ಸಚಿವ'ಲಾಯ'ದ ವಿಶ್ಲೇಷಕರ ಲೆಕ್ಕಾಚಾರ.

ವಿಶೇಷವೆಂದರೆ, ಈ ಆರು ಕುದುರೆಗಳೇ ಕರು-ನಾಟಕ ಮಾರುಕಟ್ಟೆಯಲ್ಲಿ ಅತ್ಯಂತ ಹೆಚ್ಚು ಬೆಲೆ ಬಾಳುವವುಗಳಾಗಿದ್ದು, ಇವುಗಳನ್ನು ಬೇಟೆಯಾಡುವುದಕ್ಕಾಗಿ ಅಡಿಗೆ ಬಿದ್ದ ಪಾಳಯಗಳೂ ಮೂಗು ಮೇಲೆತ್ತಿ ಪರಸ್ಪರ ಒಟ್ಟಾಗಿ ಸಿದ್ಧತೆ ನಡೆಸಿದ್ದವು. ಆದರೆ ಎಲ್ಲೋ ಒಂದು ಕಡೆ ಮತದಾರನ ಆಕ್ರೋಶದ ವಾಸನೆಯೊಂದು ಬಲವಾಗಿ ಬೀಸಿದ ರಭಸಕ್ಕೆ ಅವರೆಲ್ಲರೂ ಈ ಬೇಟೆ ನಿರ್ಧಾರದಿಂದ ರಭಸವಾಗಿ ತಳ್ಳಲ್ಪಟ್ಟಿದ್ದರು ಎಂಬುದು ಬೊಗಳೆ ರಗಳೆಗೆ ಮಾತ್ರ ಗೊತ್ತಿರುವ ವಿಚಾರ.

ಆದರೆ, ಈ ಆರು ಕುದುರೆಗಳು ಎರಡೂ ರಾಜರ ನಡುವೆ ಯಾರು ಹಿತವರು ನಮಗೆ ಎಂದು ಲೆಕ್ಕಾಚಾರ ಹಾಕುತ್ತಲೇ ಇರುವುದರಿಂದ ಈ ಬಿಸಿಯನ್ನು ಇಳಿಸಲು ಅವರ ತಲೆಯ ಮೇಲೆ ದೊಡ್ಡ ದೊಡ್ಡ ಸೂಟ್‌ಕೇಸ್‌ಗಳನ್ನು ಹೋಲುವ ಕೂಲರ್‌ಗಳನ್ನು ಇರಿಸಬೇಕಾಗುತ್ತದೆ ಎಂಬುದು ತಿಳಿದುಬಂದಿದೆ. ಅವರ ಮನಸ್ಸು ತಂಪು ತಂಪಾಗಿಸಲು ಈ ಕೂಲರನ್ನು ಸುಡು ಬೇಸಿಗೆಯಲ್ಲಿ ಮಾತ್ರವಲ್ಲದೆ, ಬಿರು ಚಳಿಗಾಲದಲ್ಲೂ ಇರಿಸಬೇಕಾಗುತ್ತದೆ.

ಅದೆಲ್ಲ ಇರಲಿ, ಇದೀಗ ಎಲ್ಲ ಕುದುರೆಗಳನ್ನೂ ಕಟ್ಟಿ ತಂದು ಲಾಯದಲ್ಲಿರಿಸಲಾಗಿದ್ದು, ಇನ್ನು ಸ್ವಲ್ಪ ದಿನ ಎಂದರೆ ಸುಮಾರು ಐದು ವರ್ಷಗಳ ಕಾಲ ಮಾತ್ರವೇ ವಿಶ್ರಾಂತಿ ತೆಗೆದುಕೊಳ್ಳಲು ಎಲ್ಲ ಗೆದ್ದವರೂ ಹೊರಟಿರುವುದಾಗಿ ಬಲ್ಲ ಮೂಲಗಳು ವರದ್ದಿ ಮಾಡಿವೆ.

ವಿಧಿವಿಧಾನಸೌಧದಲ್ಲೇ ಕೆಲವರು ಪವಡಿಸಲಿದ್ದರೆ, ಮತ್ತೆ ಕೆಲವರು ತಮ್ಮ ಕ್ಷೇತ್ರದ ಮತದಾರರ ಕೈಗೆ ಸಿಗದಷ್ಟು ದೂರದಲ್ಲಿ ತಂಗಲಿದ್ದಾರೆ. ಕಳೆದ ಎರಡು ತಿಂಗಳಲ್ಲಿ ಓಡಾಡಿ ಓಡಾಡಿ ಕೈ ಮುಗಿದು, ಕಾಲ್ಮುಗಿದು, ಎದ್ದು ಬಿದ್ದು ಕೆಟ್ಟು ಗಬ್ಬೆದ್ದು ಹೋಗಿರುವ ರಸ್ತೆಗಳಲ್ಲಿ ನಡೆದು, ರಸ್ತೆಗಳೇ ಇಲ್ಲದ ಊರುಗಳಲ್ಲಿಯೂ ನಡೆದು ಎಷ್ಟೊಂದು ಸುಸ್ತಾಗಿರಲಿಕ್ಕಿಲ್ಲ...! ಹಾಗಾಗಿ ಅವರು ವಿಶ್ರಾಂತಿ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದೂ ಬೊ.ರ. ತೀರ್ಪು ನೀಡುತ್ತದೆ.

ಆದರೆ ಮಧ್ಯೆ ಏನಾದರೂ ಈ ಆರು ಕುದುರೆಗಳನ್ನು ಬೇರೆಯವರು ಎಬ್ಬಿಸಿ 'ಉತ್ತರ ಗೋಗ್ರಹಣ' ಮಾಡಿಸಿ ಕರೆದುಕೊಂಡು ಹೋದರೆ, ಈ ಗೋವುಗಳಿಗೆ ಸರಿಯಾದ ಗೋ'ಗ್ರಾಸ' ನೀಡಿ ಸರಿಪಡಿಸಲು ಎಚ್ಚರಗೊಳ್ಳಲೇಬೇಕಾಗುತ್ತದೆ. ಎಚ್ಚರಿಸಲು ಸಾಕಷ್ಟು ಜನ ಇರುವುದರಿಂದ ಚಿಂತೆ ಇರುವುದಿಲ್ಲ. ಹೀಗಾಗಿ ಚಿಂತೆ ಸದ್ಯಕ್ಕೆ ನಿಶ್ಚಿಂತೆ.ಅಸತ್ಯ ಅನ್ವೇಷಿhttp://www.blogger.com/profile/04356401566159202899noreply@blogger.comtag:blogger.com,1999:blog-25346734.post-29633128188110216432008-05-25T07:01:00.000+05:302008-05-25T07:01:00.464+05:30ಇದೋ ಮತ್ತೆ ಅತಂತ್ರ: ನಾವು ಸಿದ್ಧ ಕುತಂತ್ರಕ್ಕೆ!
(ಬೊಗಳೂರು ಕು-ತಂತ್ರ ಬ್ಯುರೋದಿಂದ)
ಬೊಗಳೂರು, ಮೇ 25- ಹಲವು ಕ್ಷೇತ್ರಗಳಲ್ಲಿ ಅಕ್ಷರಶಃ 'ಹಣಾ'ಹಣಿಯೇ ಆಗಿಬಿಟ್ಟಿರುವ ಚುನಾವಣೆಗಳ ಫಲಿತಾಂಶ ಹೊರಬಿದ್ದಿದ್ದು, ಅದೆಷ್ಟೋ ದೇವರು, ದಿಂಡರನ್ನು ಸಂದರ್ಶಿಸಿ, ಲೆಕ್ಕವಿಲ್ಲದಷ್ಟು ಜ್ಯೋತಿಷಿಗಳು, ಪುರೋಹಿತರೊಂದಿಗೆ ಚರ್ಚಿಸಿದ ಪರಿಣಾಮ ಮಾನನೀಯ ತೆನೆಹೊತ್ತ ರೈತ ಮಹಿಳೆಯ ಒಡೆಯಗೌಡ್ರು ನುಡಿದ ಭವಿಷ್ಯವೂ ನಿಜವಾಗುವುದಾಗಿ ಬೊಗಳೆಗೆ ಖಚಿತ ಮಾಹಿತಿ ದೊರೆತಿದೆ.

ನಮ್ಮ ಬೆಂಬಲವಿಲ್ಲದೆ ಯಾರು ಸರಕಾರ ರಚಿಸ್ತಾರೋ ನೋಡ್ತೀನಿ ಅಂತ ಅವರ ಬಾಯಿಂದ ಬಿದ್ದ ಅಣಿಮುತ್ತುಗಳು ನಿಜವಾಗುತ್ತಿದ್ದು, ತೆನೆಹೊತ್ತವರ ಕಚೇರಿಯ ಮುಂದೆ ಹಸ್ತದ ಚಿಹ್ನೆಯನ್ನೂ ಇರಿಸಲು ಸಿದ್ಧತೆ ನಡೆಸಲಾಗುತ್ತಿದೆ. ಇದಕ್ಕೆ ಕೋಮುವಾದಿಗಳನ್ನು ಅಧಿಕಾರದಿಂದ ದೂರವಿಡುವ ಉದ್ದೇಶ ಎಂಬ ಕಾರಣ ನೀಡುವುದಿಲ್ಲ. ಇಲ್ಲಿ ಹಸ್ತ ಎಂಬುದು ಜ್ಯೋತಿಷ್ಯ, ಭವಿಷ್ಯ ವಾಣಿ ನುಡಿಯುವವರು ಹಾಕಿಕೊಳ್ಳುವ ಬೋರ್ಡ್‌ನಲ್ಲಿರುವ ಲಾಂಛನವೇ ಹೊರತು, ರೈತ ಮಹಿಳೆ ಮತ್ತು 'ಕೈ'ಗಳು ಪರಸ್ಪರ ಮುಗಿದುಕೊಳ್ಳುತ್ತವೆ ಎಂಬ ಅರ್ಥವನ್ನು ಕಲ್ಪಿಸಿದರೆ ಅದಕ್ಕೂ ಬೊಗಳೆ ರಗಳೆ ಸಿದ್ಧವಾಗಿದೆ.

ಹೇಗೂ ಹಲವು ತಂತ್ರಗಾರಿಕೆಗಳಿಂದಾಗಿ ಅತಂತ್ರದ ಸ್ಥಿತಿ ನಿರ್ಮಾಣವಾಗಿರುವಾಗ ಕುತಂತ್ರ ಮಾಡಲು ಕೂಡ ಯಾರಾದರೂ ಇರಬೇಕಿರುವುದು ಬೈಡೀಫಾಲ್ಟ್ ಅನಿವಾರ್ಯ ಪರಿಸ್ಥಿತಿ. ಹೀಗಾಗಿ ಆ ಕಾರ್ಯವನ್ನು ತಮ್ಮ ಕೈಗೆ ಎತ್ತಿಕೊಳ್ಳಲು, ಅದರ ಜವಾಬ್ದಾರಿಯನ್ನು ತೆನೆ ಹೊತ್ತಂತೆಯೇ ಹೊರಲು ಸಿದ್ಧ ಎಂದು ಅವರು ವಿಶೇಷ ಸಂದರ್ಶನದಲ್ಲಿ ಬಾಯಿಬಿಟ್ಟಿದ್ದಾರೆ.
ಈ ಮಧ್ಯೆ, ಗೆದ್ದವರು, ಸೋತವರೆಲ್ಲರೂ ಬಾಯಿ ಚಪ್ಪರಿಸಿಕೊಳ್ಳುತ್ತಿದ್ದಾರೆ. ಹೇಗಾದರೂ ಮತದಾರನ ಮನೆ ಬಾಗಿಲಿಗೆ ತಿರು ತಿರುಗಿ ಸುಸ್ತಾಗಿದೆ. ಇನ್ನೈದು ವರ್ಷ ಗಡದ್ದಾಗಿ ನಿದ್ದೆ ಮಾಡಬಹುದು (ಯಾವು